ಕಳೆದ ಕೆಲವು ವರ್ಷಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಏರಿಳಿತಗಳನ್ನು ಕಾಣುತ್ತಿವೆ. ನಿರಂತರ ಏರಿಕೆಯ ನಂತರ, ಈಗ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬರುತ್ತಿದೆ. ದೀಪಾವಳಿ ಹಬ್ಬದ ಆರಂಭದೊಂದಿಗೆ ಚಿನ್ನದ ಬೆಲೆಯಲ್ಲಿಯೂ ಇಳಿಕೆ ಕಂಡು ಬರಲು ಆರಂಭವಾಗಿದೆ.
ಅಕ್ಟೋಬರ್ 17ರ ಸಾರ್ವಕಾಲಿಕ ಗರಿಷ್ಠ ಬೆಲೆಯಿಂದ ಚಿನ್ನ 10,643 ರೂ.ಗಳಷ್ಟು ಅಗ್ಗವಾಗಿದೆ. ಇನ್ನು ಅಕ್ಟೋಬರ್ 14ರ ಸಾರ್ವಕಾಲಿಕ ಗರಿಷ್ಠ ಬೆಲೆಯಿಂದ ಬೆಳ್ಳಿಯ ಬೆಲೆ ಸುಮಾರು 30,090 ರೂ.ಗಳಷ್ಟು ಕುಸಿದಿದೆ.
ಇದನ್ನೂ ಓದಿ : ಸರ್ಕಾರಿ ನೌಕರರ ಪಿಂಚಣಿಯಲ್ಲಿ ಭಾರೀ ಏರಿಕೆ..! ಶೀಘ್ರದಲ್ಲೇ ಸರ್ಕಾರದಿಂದ ಈ ಮಹತ್ವದ ನಿರ್ಧಾರ..!
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ನೋಡುವುದಾದರೆ ಐಬಿಜೆಎ ದರಗಳ ಪ್ರಕಾರ, ಇಂದಿನ 10 ಗ್ರಾಂ ಶುದ್ಧ ಚಿನ್ನದ ಬೆಲೆ 439 ರೂ.ಗಳಷ್ಟು ಇಳಿದು 1,20,231 ರೂ.ಗಳಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಇದು 1,20,670 ರೂ.ಗಳಲ್ಲಿ ಮುಕ್ತಾಯಗೊಂಡಿತ್ತು. ಶುದ್ಧ ಬೆಳ್ಳಿಯ ಬೆಲೆಯನ್ನು ನೋಡುವುದಾದರೆ ಇದು 232 ರೂ.ಗಳಷ್ಟು ಇಳಿಕೆಯಾಗಿ ಪ್ರತಿ ಕಿಲೋಗ್ರಾಂಗೆ 1,48,010 ರೂ. ತಲುಪಿದೆ. ಕಳೆದ ವಹಿವಾಟಿನಲ್ಲಿ ಇದು 1,48,242 ರೂ.ಗಳಲ್ಲಿ ಮುಕ್ತಾಯಗೊಂಡಿತ್ತು.
ಕ್ಯಾರೆಟ್ ಪ್ರಕಾರ ಬೆಲೆ :
ಶುದ್ಧ ಚಿನ್ನ (999) ರೂ. 12,023
22 ಕ್ಯಾರೆಟ್ ರೂ. 11,735
20 ಕ್ಯಾರೆಟ್ ರೂ. 10,701
18 ಕ್ಯಾರೆಟ್ ರೂ. 9,739
14 ಕ್ಯಾರೆಟ್ ರೂ. 7,755
ಇದನ್ನೂ ಓದಿ : 2027ರಲ್ಲಿ ದುಪ್ಪಟ್ಟಾಗುವುದೇ ಸರ್ಕಾರಿ ನೌಕರರ ವೇತನ : ಸರ್ಕಾರದ ಲೆಕ್ಕಾಚಾರ ಹೇಳುವುದೇನು?
ಸೂಚನೆ : IBJA ಹೊರಡಿಸಿದ ದರಗಳು ದೇಶಾದ್ಯಂತ ಮಾನ್ಯವಾಗಿರುತ್ತವೆ. ಆದರೆ ಅವುಗಳ ಬೆಲೆಗಳು GST ಅನ್ನು ಒಳಗೊಂಡಿರುವುದಿಲ್ಲ. ಹಾಗಾಗಿ ಆಭರಣಗಳನ್ನು ಖರೀದಿಸುವಾಗ ಗ್ರಾಹಕರು ಹೆಚ್ಚಿನ ಬೆಲೆ ಪಾವತಿಸಬೇಕಾಗುತ್ತದೆ. ಏಕೆಂದರೆ ಅದು ತೆರಿಗೆಯನ್ನು ಒಳಗೊಂಡಿರುತ್ತದೆ. ಸಂಘವು ದಿನಕ್ಕೆ ಎರಡು ಬಾರಿ ಬೆಲೆಗಳನ್ನು ಪ್ರಕಟಿಸುತ್ತದೆ. ಇದು ಮೇಕಿಂಗ್ ಶುಲ್ಕಗಳನ್ನು ಒಳಗೊಂಡಿರುವುದಿಲ್ಲ. ಸಂಘದ ಹೊಸ ಬೆಲೆಗಳನ್ನು ಸಾರ್ವಜನಿಕ ರಜಾದಿನಗಳಲ್ಲಿ ಘೋಷಿಸಲಾಗುವುದಿಲ್ಲ.









