)
SIP Calculator: SIP ಅಥವಾ ವ್ಯವಸ್ಥಿತ ಹೂಡಿಕೆ ಯೋಜನೆಯು ಒಂದು ಹೂಡಿಕೆ ವಿಧಾನವಾಗಿದೆ. ಇಲ್ಲಿ ನೀವು ಮಾಸಿಕ, ತ್ರೈಮಾಸಿಕ ಅಥವಾ ಒಂದೇ ಬಾರಿಗೆ (Lumpsum) ದೊಡ್ಡ ಮೊತ್ತವನ್ನ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಈ ವಿಧಾನವು ಶಿಸ್ತುಬದ್ಧ ಹೂಡಿಕೆಯಾಗಿದ್ದು, ದೀರ್ಘಕಾದಲ್ಲಿ ಅಪಾರ ಸಂಪತ್ತು ಗಳಿಸಲು ಸಹಾಯ ಮಾಡುತ್ತದೆ. ಆದಾಯಕ್ಕೆ ಯಾವುದೇ ಮಿತಿಯಿಲ್ಲ. ನೀವು ಅತಿ ಹೆಚ್ಚಿನ ಆದಾಯವನ್ನೂ ಸಹ ಗಳಿಸಬಹುದು. ಅಂದರೆ ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನ ಹೂಡಿಕೆ ಮಾಡುವ ಮೂಲಕ ನೀವು ದೀರ್ಘಾವಧಿಯಲ್ಲಿ ಕೋಟಿ ಕೋಟಿ ಹಣ ಗಳಿಸಬಹುದು.
15 ವರ್ಷಗಳಲ್ಲಿ ₹1 ಕೋಟಿ ಮೊತ್ತದ ನಿಧಿಯನ್ನ ಸಂಗ್ರಹಿಸಲು ನೀವು ಪ್ರತಿ ತಿಂಗಳು ಮಾಡಬೇಕಾದ SIPಗಳ ಮೊತ್ತವು ನೀವು ಪಡೆಯುವ ಸರಾಸರಿ ವಾರ್ಷಿಕ ಆದಾಯವನ್ನ ಅವಲಂಬಿಸಿರುತ್ತದೆ. 15 ವರ್ಷಗಳ ದೀರ್ಘ ಹೂಡಿಕೆ ಅವಧಿಯು ನಿಮಗೆ Power of Compoundingನ ಲಾಭ ಪಡೆಯಲು ಅನುವು ಮಾಡಿಕೊಡುತ್ತದೆ, ಇದರಿಂದ ನಿಮ್ಮ ಹಣ ವೇಗವಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಸರಾಸರಿ 12% ಲಾಭವನ್ನೇ ಲೆಕ್ಕಹಾಕಿದರೆ 15 ವರ್ಷಗಳಲ್ಲಿ ₹1 ಕೋಟಿಯ ಕಾರ್ಪಸ್ಗೆ ಎಷ್ಟು SIP ಹೂಡಿಕೆ ಅಗತ್ಯವಿದೆ ಎಂಬುದನ್ನ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ನೀವು ಶೇ.12 ರಷ್ಟು ಲಾಭವನ್ನ ಊಹಿಸಿದರೆ, ಏಂಜೆಲೋನ್ SIP ಕ್ಯಾಲ್ಕುಲೇಟರ್ ಪ್ರಕಾರ, 15 ವರ್ಷಗಳ ಕಾಲ ನೀವು ಪ್ರತಿ ತಿಂಗಳು ₹19,900 SIP ಮಾಡಬೇಕಾಗುತ್ತದೆ. ಇದು ₹1,00,41,062 ಕೋಟಿಗಳ ಕಾರ್ಪಸ್ ಸೃಷ್ಟಿಸುತ್ತದೆ. ಇದರರ್ಥ ನೀವು ಮಿಲಿಯನೇರ್ ಆಗುತ್ತೀರಿ.
ಅದೇ ನೀವು ಶೇ.15ರಷ್ಟು ಆದಾಯವನ್ನ ಆಧಾರವಾಗಿ ಪರಿಗಣಿಸಿದರೆ, ಏಂಜೆಲೋನ್ SIP ಕ್ಯಾಲ್ಕುಲೇಟರ್ ಪ್ರಕಾರ, ನೀವು 15 ವರ್ಷಗಳ ಕಾಲ ನಿರಂತರವಾಗಿ ಮಾಸಿಕ 14,800 ರೂ.ಗಳ SIP ಮಾಡಬೇಕಾಗುತ್ತದೆ, ಆಗ ನಿಮಗೆ ₹1,00,17,574 ಕೋಟಿ ನಿಧಿ ಇರುತ್ತದೆ. SIP ಮಾಡುವ ಮೂಲಕ ನೀವು ದೀರ್ಘಾವಧಿಯಲ್ಲಿ ಅಪಾರ ಸಂಪತ್ತು ಸೃಷ್ಟಿಸಬಹುದು.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)