)
ಕೇಂದ್ರ ಸರ್ಕಾರಿ ನೌಕರರಿಗೆ ಪ್ರಮುಖ ಘೋಷಣೆ. ದೇಶದಲ್ಲಿ ಹಬ್ಬದ ಋತು ಆರಂಭವಾಗಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ದೀಪಾವಳಿಗೆ ಮುಂಚಿತವಾಗಿ ತುಟ್ಟಿ ಭತ್ಯೆ (ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್) ಹೆಚ್ಚಳದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆಯನ್ನು ಹೆಚ್ಚಿಸುತ್ತದೆ. ವರ್ಷದ ಎರಡನೇ ತುಟ್ಟಿ ಭತ್ಯೆ ಹೆಚ್ಚಳವನ್ನು ದೀಪಾವಳಿಗೆ ಮೊದಲು ಘೋಷಿಸುವ ನಿರೀಕ್ಷೆಯಿದೆ. ಇತ್ತೀಚಿನ ವರದಿಯ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.
ತುಟ್ಟಿ ಭತ್ಯೆಯಲ್ಲಿ ಹೆಚ್ಚಳ :
ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ನಿಭಾಯಿಸಲು, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ ನೀಡಲಾಗುತ್ತದೆ. ತುಟ್ಟಿ ಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಅಂದರೆ ಜನವರಿ ಮತ್ತು ಜುಲೈನಲ್ಲಿ. ಸಾಮಾನ್ಯವಾಗಿ, ಜನವರಿ ತಿಂಗಳ ತುಟ್ಟಿ ಭತ್ಯೆಯ ಹೆಚ್ಚಳವನ್ನು ಮಾರ್ಚ್ನಲ್ಲಿ ಘೋಷಿಸಲಾಗುತ್ತದೆ ಮತ್ತು ಜುಲೈ ತಿಂಗಳ ತುಟ್ಟಿ ಭತ್ಯೆಯ ಹೆಚ್ಚಳವನ್ನು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಘೋಷಿಸಲಾಗುತ್ತದೆ.
ಡಿಎ ಬಾಕಿ ಮೊತ್ತ :
ಈಗ ಎಲ್ಲರೂ ಜುಲೈ 2025 ರ ತುಟ್ಟಿ ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಈ ಘೋಷಣೆ ಹೊರ ಬಿದ್ದ ಕೂಡಲೇ ಬಾಕಿ ಡಿಎ ಹಣವನ್ನು ಜುಲೈ 1 ರಿಂದ ಪಾವತಿಸಲಾಗುವುದು. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ದೀಪಾವಳಿಗೂ ಮುನ್ನ ಸರ್ಕಾರದಿಂದ ಪ್ರಮುಖ ಘೋಷಣೆ ಹೊರ ಬೀಳುವ ನಿರೀಕ್ಷೆಯಲ್ಲಿದ್ದಾರೆ.
ಹಣಕಾಸು ಸಚಿವರಿಗೆ ಪತ್ರ :
ಕೇಂದ್ರ ನೌಕರರು ಮತ್ತು ಕಾರ್ಮಿಕರ ಒಕ್ಕೂಟವು ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ ತಕ್ಷಣದ ಕ್ರಮ ಕೈಗೊಳ್ಳುವಂತೆ ಕೋರಿದೆ ಎಂದು ಹೇಳಿಕೆ ತಿಳಿಸಿದೆ. ಜುಲೈ 1, 2025 ರಿಂದ ಜಾರಿಗೆ ಬರುವ ಡಿಎ/ಡಿಆರ್ ಕಂತು ಇನ್ನೂ ಘೋಷಣೆಯಾಗಿಲ್ಲ. ಸಾಮಾನ್ಯವಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅದನ್ನು ಘೋಷಿಸಲಾಗುತ್ತದೆ. ಅಕ್ಟೋಬರ್ ಮೊದಲ ವಾರದಲ್ಲಿ ಮೂರು ತಿಂಗಳ ಬಾಕಿ ಹಣವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಎಷ್ಟಾಗುವುದು ಡಿಎ ಹೆಚ್ಚಳ ? :
ಸರ್ಕಾರವು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲವಾದರೂ, ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು 3% ಹೆಚ್ಚಿಸಬಹುದು ಎಂದು ಹಲವಾರು ವರದಿಗಳು ತೋರಿಸುತ್ತಿವೆ. ಹೀಗಾದರೆ 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಸುಮಾರು 65 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯುತ್ತಾರೆ. ಜನವರಿಯಿಂದ, ಡಿಎ ಮತ್ತು ಡಿಆರ್ ಅನ್ನು 2% ರಷ್ಟು ಹೆಚ್ಚಿಸಲಾಗಿದೆ. ಹೊಸದಾಗಿ 3% ಹೆಚ್ಚಳವಾದರೆ, ತುಟ್ಟಿ ಭತ್ಯೆ 58% ಕ್ಕೆ ಹೆಚ್ಚಾಗುತ್ತದೆ.
ಹೆಚ್ಚಳವಾಗುವ ವೇತನ ಎಷ್ಟು ? :
- ಈ ಬಾರಿ, ನೌಕರರ ತುಟ್ಟಿ ಭತ್ಯೆ ಶೇ. 3 ರಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಒಟ್ಟು ತುಟ್ಟಿ ಭತ್ಯೆ ಶೇ. 58 ರಷ್ಟು ಹೆಚ್ಚಾಗಬಹುದು.
- ಇದು ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಗುತ್ತದೆ.
- ಇದರ ಲೆಕ್ಕಾಚಾರ ಸರಳವಾಗಿದೆ.
- ಆರಂಭಿಕ ಹಂತದ ಉದ್ಯೋಗಿಯ ಮೂಲ ವೇತನ 18,000 ರೂ.
- ಇಲ್ಲಿಯವರೆಗೆ ಅವರು 55% ದರದಲ್ಲಿ 9,900 ರೂ. ತುಟ್ಟಿ ಭತ್ಯೆಯನ್ನು ಪಡೆದಿದ್ದಾರೆ.
ತುಟ್ಟಿ ಭತ್ಯೆ 3% ಹೆಚ್ಚಾದರೆ, ಅದನ್ನು 58% ದರದಲ್ಲಿ ಲೆಕ್ಕಹಾಕಲಾಗುತ್ತದೆ.
- ಆ ಸಂದರ್ಭದಲ್ಲಿ, ತಿಂಗಳಿಗೆ 540 ರೂ.ಗಳ ನೇರ ಹೆಚ್ಚಳವಾಗುತ್ತದೆ.
- ಇದು ನೌಕರರ ತುಟ್ಟಿ ಭತ್ಯೆಯನ್ನು 10,440 ರೂ.ಗಳಿಗೆ ಹೆಚ್ಚಿಸುತ್ತದೆ.