ಅಂಚೆ ಕಚೇರಿಯಲ್ಲಿ ₹2,00,000 ಠೇವಣಿ ಇಟ್ರೆ ₹29,776 ಸ್ಥಿರ ಬಡ್ಡಿ ಸಿಗುತ್ತೆ; ಸಂಪೂರ್ಣ ಮಾಹಿತಿ ಇಲ್ಲಿದೆ

ದೇಶದ ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ FD (ಸ್ಥಿರ ಠೇವಣಿ) ಖಾತೆ ಸೌಲಭ್ಯ ನೀಡುವಂತೆಯೇ, ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ TD (ಸಮಯ ಠೇವಣಿ) ಖಾತೆ ತೆರೆಯಲು ಅನುಕೂಲ ಕಲ್ಪಿಸಿದೆ. ಅಂಚೆ ಕಚೇರಿಯ ಟಿಡಿ ಬ್ಯಾಂಕ್‌ಗಳ ಎಫ್‌ಡಿ ಖಾತೆಯಂತೆಯೇ ಕಾರ್ಯನಿರ್ವಹಿಸುತ್ತವೆ. 

Written by - Puttaraj K Alur | Last Updated : Mar 25, 2025, 02:29 PM IST
  • ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ ಅಂಚೆ ಸೇವೆಗಳ ಜೊತೆಗೆ ವಿವಿಧ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದೆ
  • ಉಳಿತಾಯ ಖಾತೆ, ಆರ್‌ಡಿ & ಎಫ್‌ಡಿ ಮುಂತಾದ ಉಳಿತಾಯ ಯೋಜನೆಗಳಿಗೆ ಖಾತೆ ತೆರೆಯಬಹುದು
  • ಅಂಚೆ ಕಚೇರಿಯ ಟಿಡಿ ಯೋಜನೆಯಲ್ಲಿ 2 ಲಕ್ಷ ಠೇವಣಿ ಇರಿಸಿದ್ರೆ 29,776 ರೂ.ಗಳ ಬಡ್ಡಿ ಪಡೆಯಬಹುದು
ಅಂಚೆ ಕಚೇರಿಯಲ್ಲಿ ₹2,00,000 ಠೇವಣಿ ಇಟ್ರೆ ₹29,776 ಸ್ಥಿರ ಬಡ್ಡಿ ಸಿಗುತ್ತೆ; ಸಂಪೂರ್ಣ ಮಾಹಿತಿ ಇಲ್ಲಿದೆ
ಅಂಚೆ ಕಚೇರಿ ಯೋಜನೆಗಳು

Post Office Schemes: ಅಂಚೆ ಕಚೇರಿ ತನ್ನ ಗ್ರಾಹಕರಿಗೆ ಅಂಚೆ ಸೇವೆಗಳ ಜೊತೆಗೆ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಹೂಡಿಕೆ ಯೋಜನೆಗಳ ಜೊತೆಗೆ ಉಳಿತಾಯ ಖಾತೆ, ಆರ್‌ಡಿ ಮತ್ತು ಎಫ್‌ಡಿ ಮುಂತಾದ ಉಳಿತಾಯ ಯೋಜನೆಗಳಲ್ಲಿ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಬಹುದು. ಅಂಚೆ ಕಚೇರಿಯಲ್ಲಿ ಉಳಿತಾಯ ಯೋಜನೆಗಳ ಅಡಿಯಲ್ಲಿ ಖಾತೆ ತೆರೆಯುವುದರಿಂದ, ನೀವು ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ಪಡೆಯುವುದಲ್ಲದೆ, ನಿಮ್ಮ ಹಣವೂ ಇಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಅಂಚೆ ಕಚೇರಿಯ ಒಂದು ವಿಶೇಷ ಯೋಜನೆ ಇದ್ದು, ಇದರಲ್ಲಿ ನೀವು 2 ಲಕ್ಷ ರೂ. ಠೇವಣಿ ಇರಿಸಿ 29,776 ರೂ.ಗಳ ಸ್ಥಿರ ಬಡ್ಡಿಯನ್ನು ಪಡೆಯಬಹುದು.

Add Zee News as a Preferred Source

ಇದನ್ನೂ ಓದಿ: ಅರ್ಧ ಸುಟ್ಟ ನೋಟುಗಳನ್ನು ಬ್ಯಾಂಕ್‌ನಲ್ಲಿ ಬದಲಾಯಿಸಲು ಸಾಧ್ಯವೇ? ಆರ್‌ಬಿಐ ನಿಯಮ ಹೇಳುವುದೇನು?   

ಅಂಚೆ ಕಚೇರಿಯ 2 ವರ್ಷಗಳ ಟಿಡಿ ಮೇಲೆ ಶೇ.7ರಷ್ಟು ಬಡ್ಡಿ  

ದೇಶದ ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ FD (ಸ್ಥಿರ ಠೇವಣಿ) ಖಾತೆಗಳನ್ನು ತೆರೆಯುವ ಅನುಕೂಲ ಕಲ್ಪಿಸಿವೆ. ಅದರಂತೆ ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ TD (ಸಮಯ ಠೇವಣಿ) ಖಾತೆ ಯೋಜನೆಯನ್ನು ನೀಡುತ್ತದೆ. ಅಂಚೆ ಕಚೇರಿಯ ಟಿಡಿ ಬ್ಯಾಂಕ್‌ಗಳ ಎಫ್‌ಡಿ ಖಾತೆಯಂತೆಯೇ ಕಾರ್ಯನಿರ್ವಹಿಸುತ್ತವೆ. ಅಂಚೆ ಕಚೇರಿ ತನ್ನ ಗ್ರಾಹಕರಿಗೆ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಗೆ ಟಿಡಿ ಖಾತೆಗಳನ್ನು ತೆರೆಯುವ ಸೌಲಭ್ಯವನ್ನು ನೀಡುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಂಚೆ ಕಚೇರಿಯು ಟಿಡಿ ಖಾತೆಗಳಿಗೆ ಶೇ.6.9ರಿಂದ 7.5ರವರೆಗೆ ಬಡ್ಡಿಯನ್ನು ಪಾವತಿಸುತ್ತಿದೆ. ಅಂಚೆ ಕಚೇರಿಯು 2 ವರ್ಷಗಳ ಟಿಡಿ ಮೇಲೆ ಶೇ.7.0ರಷ್ಟು ಬಡ್ಡಿಯನ್ನು ನೀಡುತ್ತಿದೆ.

ಇದನ್ನೂ ಓದಿ: ಏಪ್ರಿಲ್ 1ರಿಂದ ಈ ಮೊಬೈಲ್ ಸಂಖ್ಯೆಗಳಲ್ಲಿ UPI ಕೆಲಸ ಮಾಡಲ್ಲ; ತಕ್ಷಣವೇ ಈ ಕೆಲಸ ಮಾಡಿ!!

ನೀವು 2 ಲಕ್ಷ ರೂ. ಠೇವಣಿ ಇಟ್ಟರೆ ಒಟ್ಟು 2,29,776 ರೂ. ಸಿಗುತ್ತದೆ

ದೇಶದ ಯಾವುದೇ ನಾಗರಿಕರು ಅಂಚೆ ಕಚೇರಿಯ ಟಿಡಿ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಟಿಡಿ ಖಾತೆಯಲ್ಲಿ ನೀವು ಠೇವಣಿ ಇಡಬಹುದಾದ ಕನಿಷ್ಠ ಮೊತ್ತ 1,000 ರೂ. ಆದರೆ ಗರಿಷ್ಠ ಠೇವಣಿಗೆ ಮಿತಿಯಿಲ್ಲ. ಗ್ರಾಹಕರು ತಮ್ಮ ಇಚ್ಛೆಯಂತೆ ಎಷ್ಟು ಬೇಕಾದರೂ ಹಣವನ್ನು ಠೇವಣಿ ಮಾಡಬಹುದು. ನೀವು ಅಂಚೆ ಕಚೇರಿಯಲ್ಲಿ 2 ವರ್ಷಗಳ ಟಿಡಿಯಲ್ಲಿ 2 ಲಕ್ಷ ರೂ. ಠೇವಣಿ ಇಟ್ಟರೆ, ಮುಕ್ತಾಯದ ನಂತರ ನಿಮಗೆ ಒಟ್ಟು 2,29,776 ರೂ. ಸಿಗುತ್ತದೆ. ಇದರಲ್ಲಿ ನಿವ್ವಳ ಮತ್ತು ಸ್ಥಿರ ಮೊತ್ತ 29,776 ರೂ. ಸೇರಿವೆ. ನೀವು ಟಿಡಿ ಖಾತೆಯನ್ನು ತೆರೆದ ತಕ್ಷಣ ಮೆಚ್ಯೂರಿಟಿಯ ನಂತರ ನೀವು ಪಡೆಯುವ ಒಟ್ಟು ಮೊತ್ತವನ್ನು ತಿಳಿದುಕೊಳ್ಳುತ್ತೀರಿ. ಅಂಚೆ ಕಚೇರಿಯಲ್ಲಿ ಟಿಡಿ ಖಾತೆ ತೆರೆಯಲು ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News