UCO Bank Savings Scheme: ಸಾರ್ವಜನಿಕ ವಲಯದ ಯುಕೋ ಬ್ಯಾಂಕ್ ತನ್ನ ಗ್ರಾಹಕರಿಗೆ ಎಫ್‌ಡಿ ಖಾತೆಗಳ ಮೇಲೆ ಅತ್ಯುತ್ತಮ ಬಡ್ಡಿದರಗಳನ್ನ ನೀಡುತ್ತಿದೆ. ಈ ವರ್ಷ ಆರ್‌ಬಿಐ ರೆಪೊ ದರಗಳನ್ನ ಕಡಿಮೆ ಮಾಡಿರುವುದರಿಂದ, ಬ್ಯಾಂಕುಗಳು ಎಫ್‌ಡಿ ಬಡ್ಡಿದರಗಳನ್ನ ಸಹ ಕಡಿಮೆ ಮಾಡಿವೆ. ಈ ಕಡಿತದ ಹೊರತಾಗಿಯೂ, ಎಫ್‌ಡಿಗಳು ಇನ್ನೂ ಉತ್ತಮ ಬಡ್ಡಿಯನ್ನ ನೀಡುತ್ತವೆ. ನೀವು 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಯುಕೋ ಬ್ಯಾಂಕಿನಲ್ಲಿ ಎಫ್‌ಡಿ ಖಾತೆಯನ್ನ ತೆರೆಯಬಹುದು. ಇಲ್ಲಿ ನಾವು ಯುಕೋ ಬ್ಯಾಂಕಿನ ಎಫ್‌ಡಿ ಯೋಜನೆಯ ಬಗ್ಗೆ ನಿಮಗೆ ತಿಳಿಸುತ್ತೇವೆ. ಇದರಲ್ಲಿ ನೀವು ಕೇವಲ 1 ಲಕ್ಷ ರೂ. ಠೇವಣಿ ಇಟ್ಟರೆ ಮುಕ್ತಾಯದ ನಂತರ 38,723 ರೂ. ಬಡ್ಡಿಯನ್ನ ಪಡೆಯಬಹುದು.
ಶೇ.7.95ರಷ್ಟು ಬಡ್ಡಿ ದೊರೆಯುತ್ತದೆ
ಈ FD ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಅವಧಿ ಮುಗಿದ ನಂತರ ಬಡ್ಡಿ ಸೇರಿದಂತೆ ನಿಮ್ಮ ಸಂಪೂರ್ಣ ಹೂಡಿಕೆ ಹಣವನ್ನ ನಿಮ್ಮ ಉಳಿತಾಯ ಖಾತೆಗೆ ಹಿಂತಿರುಗಿಸಲಾಗುತ್ತದೆ. ಗ್ರಾಹಕರು FD ಖಾತೆಗಳ ಮೇಲೆ ಖಾತರಿಪಡಿಸಿದ, ಸ್ಥಿರ ಬಡ್ಡಿಯನ್ನ ಪಡೆಯುತ್ತಾರೆ. UCO ಬ್ಯಾಂಕ್ ಗ್ರಾಹಕರಿಗೆ 2.90% ರಿಂದ 7.95% ವರೆಗಿನ ಬಡ್ಡಿದರಗಳನ್ನ ನೀಡುತ್ತದೆ (ನಿವೃತ್ತ ಹಿರಿಯ ನಾಗರಿಕ ಸಿಬ್ಬಂದಿಗೆ ಮಾತ್ರ).
ಇದನ್ನೂ ಓದಿ: HDFC ಬ್ಯಾಂಕಿನಿಂದ 20 ವರ್ಷಕ್ಕೆ ₹80 ಲಕ್ಷ ಗೃಹ ಸಾಲ ಪಡೆಯಲು ಕನಿಷ್ಠ ಮಾಸಿಕ ವೇತನ ಎಷ್ಟು ಇರಬೇಕು?
444 ದಿನಗಳ ಎಫ್‌ಡಿಗಳ ಮೇಲೆ ಅತಿಹೆಚ್ಚು ಬಡ್ಡಿ
ಯುಕೋ ಬ್ಯಾಂಕ್ ತನ್ನ 444 ದಿನಗಳ ವಿಶೇಷ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇ.6.45 ಮತ್ತು ಹಿರಿಯ ನಾಗರಿಕರಿಗೆ ಶೇ.6.95ರಷ್ಟು ಅತ್ಯಧಿಕ ಬಡ್ಡಿದರವನ್ನ ನೀಡುತ್ತಿದೆ. ಯುಕೋ ಬ್ಯಾಂಕ್ ತನ್ನ ನಿವೃತ್ತ ಹಿರಿಯ ನಾಗರಿಕ ಸಿಬ್ಬಂದಿಗೆ 444 ದಿನಗಳ ಎಫ್‌ಡಿ ಯೋಜನೆಯಲ್ಲಿ ಶೇ.7.95ರಷ್ಟು ಬಡ್ಡಿದರವನ್ನ ನೀಡುತ್ತಿದೆ. ಯುಕೋ ಬ್ಯಾಂಕ್ ತನ್ನ ನಿವೃತ್ತ ಹಿರಿಯ ನಾಗರಿಕ ಸಿಬ್ಬಂದಿಗೆ 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಯೋಜನೆಗಳಲ್ಲಿ ಶೇ.1.25ರಷ್ಟು ಹೆಚ್ಚಿನ ಬಡ್ಡಿದರವನ್ನ ಮತ್ತು 1 ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿ ಯೋಜನೆಗಳಲ್ಲಿ ಸಾಮಾನ್ಯಕ್ಕಿಂತ ಶೇ.1.50ರಷ್ಟು ಹೆಚ್ಚಿನ ಬಡ್ಡಿದರವನ್ನ ನೀಡುತ್ತದೆ ಎಂಬುದನ್ನು ಗಮನಿಸಬೇಕು.
₹1,00,000 ಠೇವಣಿ ಇರಿಸಿದ್ರೆ ₹38,723 ಸ್ಥಿರ ಲಾಭ
ನೀವು ಸಾಮಾನ್ಯ ನಾಗರಿಕರಾಗಿದ್ದು, ಯುಕೋ ಬ್ಯಾಂಕಿನಲ್ಲಿ 5 ವರ್ಷಗಳ ಎಫ್‌ಡಿಯಲ್ಲಿ 1 ಲಕ್ಷ ರೂ. ಠೇವಣಿ ಇಟ್ಟರೆ, ನಿಮಗೆ ಒಟ್ಟು 1,35,351 ರೂ. ಠೇವಣಿ ಇಟ್ಟರೆ, ಮೆಚ್ಯೂರಿಟಿ ಸಮಯದಲ್ಲಿ ನಿಮಗೆ 35,351 ರೂ. ಸ್ಥಿರ ಬಡ್ಡಿ ಸಿಗುತ್ತದೆ. ನೀವು ಹಿರಿಯ ನಾಗರಿಕರಾಗಿದ್ದರೆ, ಯುಕೋ ಬ್ಯಾಂಕಿನಲ್ಲಿ 5 ವರ್ಷಗಳ ಎಫ್‌ಡಿಯಲ್ಲಿ 1 ಲಕ್ಷ ರೂ. ಠೇವಣಿ ಇಟ್ಟರೆ, ಮೆಚ್ಯೂರಿಟಿ ಸಮಯದಲ್ಲಿ ನಿಮಗೆ ಒಟ್ಟು 1,38,723 ರೂ. ಸಿಗುತ್ತದೆ. ಇದರಲ್ಲಿ 38,723 ರೂ. ಸ್ಥಿರ ಬಡ್ಡಿಯೂ ಸೇರಿರುತ್ತದೆ. ಎಫ್‌ಡಿ ಯೋಜನೆಯಡಿ ನಿಗದಿತ ಅವಧಿಯ ನಂತರ ನಿಮಗೆ ಸ್ಥಿರ ಬಡ್ಡಿ ಸಿಗುತ್ತದೆ. ಸುರಕ್ಷಿತ ಮತ್ತು ಉತ್ತಮ ಆದಾಯ ಬೇಕಾದರೆ ನೀವು ಇಂತಹ FD ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ಅಂಚೆ ಕಚೇರಿಯ ಈ ಯೋಜನೆಯಲ್ಲಿ ₹3,50,000 ಹೂಡಿಕೆ ಮಾಡಿದ್ರೆ ₹1,57,162 ಬಡ್ಡಿ ಸಿಗುತ್ತೆ..!
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)









