)
Bank of Baroda Savings Scheme: ಬ್ಯಾಂಕ್ ಆಫ್ ಬರೋಡಾ ಕೇಂದ್ರ ಸರ್ಕಾರದ ಅಡಿಯಲ್ಲಿ ಸೇವೆಗಳನ್ನ ಒದಗಿಸುವ ಸರ್ಕಾರಿ ಬ್ಯಾಂಕ್ ಆಗಿದೆ. ಈ ಸರ್ಕಾರಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿಗಳ (FD) ಮೇಲೆ ಆಕರ್ಷಕ ಬಡ್ಡಿದರಗಳನ್ನ ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಕನಿಷ್ಠ 7 ದಿನಗಳಿಂದ ಗರಿಷ್ಠ 10 ವರ್ಷಗಳವರೆಗೆ ಎಫ್ಡಿ ಖಾತೆಗಳನ್ನ ತೆರೆಯಬಹುದು. ಬ್ಯಾಂಕ್ ಆಫ್ ಬರೋಡಾ ಎಫ್ಡಿಗಳ ಮೇಲೆ 3.50% ರಿಂದ 7.20% ವರೆಗಿನ ಬಡ್ಡಿಯನ್ನ ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾದ ಎಫ್ಡಿ ಯೋಜನೆಯಡಿ ಕೇವಲ 2 ಲಕ್ಷ ರೂ.ಗಳನ್ನ ಠೇವಣಿ ಮಾಡುವ ಮೂಲಕ, ನೀವು 47,015 ರೂ.ಗಳ ಸ್ಥಿರ ಮತ್ತು ಖಾತರಿಯ ಬಡ್ಡಿಯನ್ನ ಗಳಿಸಬಹುದು.
ಶೇ.7.10ರಷ್ಟು ಬಡ್ಡಿ
FD ಖಾತೆಗಳಲ್ಲಿ ಗ್ರಾಹಕರು ನಿಗದಿತ ಅವಧಿಯ ನಂತರ ಸ್ಥಿರ ಬಡ್ಡಿಯೊಂದಿಗೆ ಸಂಪೂರ್ಣ ಅಸಲು ಮೊತ್ತವನ್ನ ಮರಳಿ ಪಡೆಯುತ್ತಾರೆ. ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ 444 ದಿನಗಳ ಅವಧಿಯ FDಗಳ ಮೇಲೆ ಅತ್ಯಧಿಕ ಬಡ್ಡಿಯನ್ನ ನೀಡುತ್ತಿದೆ. ಈ ಸರ್ಕಾರಿ ಬ್ಯಾಂಕ್ 444 ದಿನಗಳ FDಯ ಮೇಲೆ ಸಾಮಾನ್ಯ ನಾಗರಿಕರಿಗೆ 6.60 ಪ್ರತಿಶತ, ಹಿರಿಯ ನಾಗರಿಕರಿಗೆ 7.10 ಪ್ರತಿಶತ ಮತ್ತು ಸೂಪರ್ ಹಿರಿಯ ನಾಗರಿಕರಿಗೆ (80 ವರ್ಷಕ್ಕಿಂತ ಮೇಲ್ಪಟ್ಟ ಜನರು) 7.20 ಪ್ರತಿಶತ ಬಡ್ಡಿಯನ್ನ ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾ 3 ವರ್ಷಗಳ FDಯ ಮೇಲೆ ಸಾಮಾನ್ಯ ನಾಗರಿಕರಿಗೆ 6.50 ಪ್ರತಿಶತ, ಹಿರಿಯ ನಾಗರಿಕರಿಗೆ 7.00 ಪ್ರತಿಶತ ಮತ್ತು ಸೂಪರ್ ಹಿರಿಯ ನಾಗರಿಕರಿಗೆ 7.10 ಪ್ರತಿಶತ ಬಡ್ಡಿಯನ್ನ ನೀಡುತ್ತಿದೆ.
47,015 ರೂ. ಸ್ಥಿರಬಡ್ಡಿ ಸಿಗುತ್ತದೆ
ನೀವು ಸಾಮಾನ್ಯ ನಾಗರಿಕರಾಗಿದ್ದರೆ (ಅಂದರೆ ನೀವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ) ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ 3 ವರ್ಷಗಳ FD ಯೋಜನೆಯಲ್ಲಿ ₹200,000 ಠೇವಣಿ ಇಟ್ಟರೆ, ನೀವು ಮುಕ್ತಾಯದ ಸಮಯದಲ್ಲಿ ಒಟ್ಟು ₹242,682 ಪಡೆಯುತ್ತೀರಿ, ಇದರಲ್ಲಿ ₹42,682 ಸ್ಥಿರಬಡ್ಡಿ ಸೇರಿರುತ್ತದೆ. ಅದೇ ರೀತಿ ನೀವು ಹಿರಿಯ ನಾಗರಿಕರಾಗಿದ್ದರೆ (ಅಂದರೆ ನೀವು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ) ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ ₹200,000 ಠೇವಣಿ ಇಟ್ಟರೆ, ನೀವು ಮುಕ್ತಾಯದ ಸಮಯದಲ್ಲಿ ಒಟ್ಟು ₹246,288 ಪಡೆಯುತ್ತೀರಿ, ಇದರಲ್ಲಿ ₹46,288 ಸ್ಥಿರಬಡ್ಡಿಯೂ ಸೇರಿರುತ್ತದೆ. ನೀವು ಸೂಪರ್ ಹಿರಿಯ ನಾಗರಿಕರಾಗಿದ್ದರೆ ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ 3 ವರ್ಷಗಳ FD ಯೋಜನೆಯಲ್ಲಿ ₹200,000 ಠೇವಣಿ ಇಟ್ಟರೆ, ನೀವು ಮುಕ್ತಾಯದ ಸಮಯದಲ್ಲಿ ಒಟ್ಟು ₹247,015 ಪಡೆಯುತ್ತೀರಿ, ಇದರಲ್ಲಿ ₹47,015 ಸ್ಥಿರ ಬಡ್ಡಿ ಸೇರಿರುತ್ತದೆ.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)