)
Indian Overseas Bank Savings Scheme: ಇಂಡಿಯನ್ ಓವರ್ಸೀಸ್ ಬ್ಯಾಂಕ್ ಒಂದು ಸರ್ಕಾರಿ ಬ್ಯಾಂಕ್ ಆಗಿದ್ದು, ಇದು ತನ್ನ ಗ್ರಾಹಕರಿಗೆ ಉಳಿತಾಯ ಯೋಜನೆಗಳ ಮೇಲೆ ಉತ್ತಮ ಲಾಭವನ್ನ ನೀಡುತ್ತಿದೆ. ಇಂದು ನಾವು ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಎಫ್ಡಿ ಯೋಜನೆಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇದರಲ್ಲಿ ನೀವು ಕೇವಲ 2 ಲಕ್ಷ ರೂಪಾಯಿಗಳನ್ನ ಠೇವಣಿ ಮಾಡುವ ಮೂಲಕ 30,908 ರೂಪಾಯಿಗಳ ಸ್ಥಿರ ಬಡ್ಡಿಯನ್ನ ಪಡೆಯಬಹುದು. ನೀವು ಇಂಡಿಯನ್ ಓವರ್ಸೀಸ್ ಬ್ಯಾಂಕಿನಲ್ಲಿ ಕನಿಷ್ಠ 7 ದಿನಗಳವರೆಗೆ ಎಫ್ಡಿ ಖಾತೆಯನ್ನ ತೆರೆಯಬಹುದು. ಇಂಡಿಯನ್ ಓವರ್ಸೀಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಎಫ್ಡಿ ಮೇಲೆ ಶೇ.3.50ರಿಂದ 7.50ರವರೆಗೆ ಬಡ್ಡಿಯನ್ನ ನೀಡುತ್ತಿದೆ.
444 ದಿನಗಳ ಎಫ್ಡಿಗಳಿಗೆ ಅತ್ಯಧಿಕ ಬಡ್ಡಿ
ಇಂಡಿಯನ್ ಓವರ್ಸೀಸ್ ಬ್ಯಾಂಕ್ 444 ದಿನಗಳ ವಿಶೇಷ ಎಫ್ಡಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇ.6.75 ಮತ್ತು ಹಿರಿಯ ನಾಗರಿಕರಿಗೆ ಶೇ.7.25ರಷ್ಟು ಅತ್ಯಧಿಕ ಬಡ್ಡಿಯನ್ನ ನೀಡುತ್ತಿದೆ. ಇಂಡಿಯನ್ ಓವರ್ಸೀಸ್ ಬ್ಯಾಂಕ್ ತನ್ನ ಸೂಪರ್ ಸೀನಿಯರ್ ಸಿಟಿಜನ್ ಗ್ರಾಹಕರಿಗೆ 444 ದಿನಗಳ ಎಫ್ಡಿ ಯೋಜನೆಯಲ್ಲಿ ಶೇ.7.50ರಷ್ಟು ಅತ್ಯಧಿಕ ಬಂಪರ್ ಬಡ್ಡಿದರವನ್ನ ನೀಡುತ್ತಿದೆ. ಈ ಸರ್ಕಾರಿ ಬ್ಯಾಂಕ್ 2 ವರ್ಷಗಳ ಎಫ್ಡಿ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇ.6.50, ಹಿರಿಯ ನಾಗರಿಕರಿಗೆ ಶೇ.7.00 ಮತ್ತು ಸೂಪರ್ ಸೀನಿಯರ್ ಸಿಟಿಜನ್ಗಳಿಗೆ ಶೇ.7.25ರಷ್ಟು ಬಡ್ಡಿಯನ್ನ ನೀಡುತ್ತಿದೆ.
₹2,00,000 ಠೇವಣಿ ಇರಿಸಿದ್ರೆ ₹30,908 ಸ್ಥಿರ ಬಡ್ಡಿ
ನೀವು ಸಾಮಾನ್ಯ ನಾಗರಿಕರಾಗಿದ್ದು ಇಂಡಿಯನ್ ಓವರ್ಸೀಸ್ ಬ್ಯಾಂಕಿನಲ್ಲಿ 2 ವರ್ಷಗಳ ಎಫ್ಡಿಯಲ್ಲಿ 2 ಲಕ್ಷ ರೂ.ಗಳನ್ನ ಠೇವಣಿ ಮಾಡಿದರೆ, ನಿಮಗೆ ಮೆಚ್ಯೂರಿಟಿಯ ಸಮಯದಲ್ಲಿ ಒಟ್ಟು 2,27,528 ರೂ.ಗಳನ್ನ ಪಡೆಯುತ್ತೀರಿ, ಇದರಲ್ಲಿ 27,528 ರೂ.ಗಳ ಸ್ಥಿರ ಬಡ್ಡಿ ಸೇರಿರುತ್ತದೆ. ನೀವು ಹಿರಿಯ ನಾಗರಿಕರಾಗಿದ್ದರೆ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕಿನಲ್ಲಿ 2 ವರ್ಷಗಳ ಎಫ್ಡಿಯಲ್ಲಿ 2 ಲಕ್ಷ ರೂ.ಗಳನ್ನ ಠೇವಣಿ ಮಾಡಿದರೆ, ನಿಮಗೆ ಮೆಚ್ಯೂರಿಟಿಯ ಸಮಯದಲ್ಲಿ ಒಟ್ಟು 2,29,776 ರೂ.ಗಳನ್ನ ಪಡೆಯುತ್ತೀರಿ, ಇದರಲ್ಲಿ 29,776 ರೂ.ಗಳ ಸ್ಥಿರ ಬಡ್ಡಿ ಸೇರಿದೆ.
ಅದೇ ರೀತಿ ನೀವು ಸೂಪರ್ ಸೀನಿಯರ್ ಸಿಟಿಜನ್ (80 ವರ್ಷಕ್ಕಿಂತ ಮೇಲ್ಪಟ್ಟವರು) ಆಗಿದ್ದರೆ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕಿನಲ್ಲಿ 2 ವರ್ಷಗಳ ಎಫ್ಡಿಯಲ್ಲಿ 2 ಲಕ್ಷ ರೂ.ಗಳನ್ನ ಠೇವಣಿ ಮಾಡಿದರೆ, ನಿಮಗೆ ಮೆಚ್ಯೂರಿಟಿಯ ಸಮಯದಲ್ಲಿ ಒಟ್ಟು 2,30,908 ರೂ.ಗಳನ್ನ ಪಡೆಯುತ್ತೀರಿ, ಇದರಲ್ಲಿ 30,908 ರೂ.ಗಳ ಸ್ಥಿರ ಬಡ್ಡಿ ಸೇರಿರುತ್ತದೆ.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)