ನವದೆಹಲಿ : ಕೇಂದ್ರ ಸರ್ಕಾರ ಜನತೆಗೆ 5 ಲಕ್ಷ ರೂ. ಗೆಲ್ಲುವ ಸುವರ್ಣಾವಕಾಶ ನೀಡುತ್ತಿದೆ. ಈ ಹಣವನ್ನು ಗೆಲ್ಲಲು ನೀವೊಂದು ಸವಾಲನ್ನು ಪೂರ್ಣಗೊಳಿಸಬೇಕು. ಈ ಸವಾಲಿನಲ್ಲಿ ಗೆದ್ದರೆ, ದೊಡ್ಡ ಮೊತ್ತದ ಹಣವನ್ನು ಬಹುಮಾನವಾಗಿ ಕೇಂದ್ರ ಸರ್ಕಾರ ನೀಡಲಿದೆ. ಭಾರತ ಸರ್ಕಾರದ ಸ್ವಚ್ ಭಾರತ್ ಮಿಷನ್ (Swachh Bharat Mission) ಮತ್ತು ವಿಶ್ವಸಂಸ್ಥೆಯ  (UN) ಎಸ್‌ಡಿಜಿ ಬೆಂಬಲದೊಂದಿಗೆ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL), ಇನ್ವೆಸ್ಟ್ ಇಂಡಿಯಾ (Invest India)  ಸ್ಟಾರ್ಟ್ಅಪ್ ಇಂಡಿಯಾ (Startup India) ಮತ್ತು AGNIi  ಅಂತರ್ಜಲ ಉಳಿಸುವ ಅಭಿಯಾನವನ್ನು (Grand Water Saving Challenge) ಆರಂಭಿಸಿದೆ.  


COMMERCIAL BREAK
SCROLL TO CONTINUE READING

ಬಹುಮಾನ ಗೆಲ್ಲಲು ಏನು ಮಾಡಬೇಕು ? 
ಡಿಜಿಟಲ್ ಇಂಡಿಯಾದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನ ಟ್ವೀಟ್‌ನ ಪ್ರಕಾರ, ಈ ಸ್ಪರ್ಧೆಯಲ್ಲಿ ಭಾರತೀಯ ಶೌಚಾಲಯಕ್ಕಾಗಿ ನವೀನ ನೀರು ಉಳಿಸುವ ಫ್ಲಶ್ ವ್ಯವಸ್ಥೆಯನ್ನು (Innovative Water Saving Flush System)  ಸಿದ್ಧಪಡಿಸಬೇಕು. (Toilet)  ಶೌಚಾಲಯ ಸ್ವಚ್ಛವಾಗಿಡುವುದರ ಜೊತೆ ನೀರನ್ನು ಉಳಿತಾಯ ಮಾಡುವುದು ಇದರ ಉದ್ದೇಶ. ಈ ವಿನೂತನ ನೀರು ಉಳಿಸುವ ಫ್ಲಶ್ ವ್ಯವಸ್ಥೆಗಳು ಶೌಚಾಲಯವನ್ನು ಸ್ವಚ್ಛಗೊಳಿಸುವುದರ ಜೊತೆಗೆ ನೀರಿನ (water) ಬಳಕೆಯನ್ನು ಕಡಿಮೆ ಮಾಡುವಂತಿರಬೇಕು. ನೀರನ್ನು ಉಳಿಸುವುದು ಸದ್ಯದ ಮಟ್ಟಿಗಿರುವ ಬಹು ದೊಡ್ಡ ಬೇಡಿಕೆಯಾಗಿದೆ.  


ಇದನ್ನೂ ಓದಿ :  SBI Alert! ಬದಲಾಗಿದೆ ನಿಯಮ : ಈಗ ದಿನಕ್ಕೆ ಇಷ್ಟು ಹಣ ಮಾತ್ರ withdraw ಮಾಡಬಹುದು


ಬಹುಮಾನದ ಮೊತ್ತ : 
ಪ್ರಥಮ ಬಹುಮಾನ : ಈ ಸ್ಪರ್ಧೆಯ ವಿಜೇತರಿಗೆ 5 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುವುದು.
ಎರಡನೇ ಬಹುಮಾನ: ರನ್ನರ್ ಅಪ್ ಆದವರಿಗೆ ಅಂದರೆ ಎರಡನೇ ಸ್ಥಾನ ಪಡೆದವರಿಗೆ 2.50 ಲಕ್ಷ ರೂ.ಯನ್ನು ಬಹುಮಾನವಾಗಿ ನೀಡಲಾಗುವುದು


ನೋಂದಾಯಿಸುವುದು ಹೇಗೆ : 
ಸ್ಪರ್ಧೆಯಲ್ಲಿ ಭಾಗವಹಿಸಲು, ಸ್ಟಾರ್ಟ್ಅಪ್ ಇಂಡಿಯಾ ವೆಬ್‌ಸೈಟ್ https: //www.startupindia.gov.in/content/sih/en/ams-application/challenge ನ ಈ ಲಿಂಕ್‌ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.


ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು, ಸ್ಟಾರ್ಟ್ಅಪ್ ಇಂಡಿಯಾ ಹಬ್‌ನಲ್ಲಿ ತಮ್ಮ ಮಾಡಲ್ ಗಳನ್ನ ಸಲ್ಲಿಸಬಹುದು. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯ (DPIIT) ನೋಂದಾಯಿತ ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.


ಇದನ್ನೂ ಓದಿ :  Extremely Rare Notes: 5 ರೂ.ಗಳ ಈ ನೋಟು ನಿಮಗೆ ದೊಡ್ಡ ಆದಾಯ ನೀಡಲಿದೆ, ಇದರಲ್ಲಡಗಿವೆ ವಿಶೇಷ ಸಂಗತಿಗಳು


ಕೊನೆಯ ದಿನಾಂಕ : 
ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಮಾಡೆಲ್ ಅನ್ನು 25 ಜೂನ್ 2021 ರೊಳಗೆ ಸಲ್ಲಿಸಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.