Diwali Holidays: ದೀಪಾವಳಿ ಹಬ್ಬದ ಸಮಯದಲ್ಲಿ ಸರ್ಕಾರಿ ಉದ್ಯೋಗಿಗಳು ಡಿಎ, ಅರಿಯರ್ಸ್ ಗಾಗಿ ಕಾಯುತ್ತಿದ್ದರೆ, ಕಾರ್ಪೋರೆಟ್ ವಲಯದ ಉದ್ಯೋಗಿಗಳು ಬೋನಸ್‌ಗಳು, ಉಡುಗೊರೆಗಳ ಬಗ್ಗೆ ಕಾಯುತ್ತಿರುತ್ತಾರೆ. ಏತನ್ಮದ್ಯೆ, ದೆಹಲಿ ಮೂಲದ ಪಿಆರ್ ಸಂಸ್ಥೆಯಾದ ಎಲೈಟ್ ಮಾರ್ಕ್ (Elite Mark) ತನ್ನ ಉದ್ಯೋಗಿಗಳಿಗೆ ಬರೋಬ್ಬರಿ 9 ದಿನಗಳ ಕಾಲ ದೀಪಾವಳಿ ರಜೆ (Diwali Holidays) ಘೋಷಿಸುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ.
ದೀಪಾವಳಿ ರಜೆ:
ದೀಪಾವಳಿ (Diwali) ಹಬ್ಬಕ್ಕೆ ತನ್ನ ಉದ್ಯೋಗಿಗಳಿಗೆ 9 ದಿನಗಳ ಕಾಲ ದೀಪಾವಳಿ ರಜೆ (Diwali Holiday) ನೀಡಿರುವ ಎಲೈಟ್ ಮಾರ್ಕ್ ಕಂಪನಿಯ ಸಂಸ್ಥಾಪಕ & ಸಿಇಒ ರಜತ್ ಗ್ರೋವರ್, "ಇದು ಉದ್ಯೋಗಿಗಳು ತಮ್ಮ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಲು, ವಿಶ್ರಾಂತಿ ಪಡೆಯಲು ಮತ್ತು ಕೆಲಸದ ಒತ್ತಡದಿಂದ ಹೊರಬ ಅಂದು ತಮ್ಮನ್ನು ತಾವು ರಿಫ್ರೆಶ್ ಮಾಡಿಕೊಳ್ಳಲು ಸಹಾಯ ಮಾಡಲಿದೆ" ಎಂದು ತಿಳಿಸಿದ್ದಾರೆ.
ಲಿಂಕ್ಡ್‌ಇನ್‌ನಲ್ಲಿ ಸಂತಸ ವ್ಯಕ್ತಪಡಿಸಿರುವ ಉದ್ಯೋಗಿಗಳು:
ಎಲೈಟ್ ಮಾರ್ಕ್‌ನ ಹೆಚ್ಆರ್ ಈ ಸುದ್ದಿಯನ್ನು ಲಿಂಕ್ಡ್‌ಇನ್‌ನಲ್ಲಿ ಶೇರ್ ಮಾಡಿದ್ದು, ನಿಜವಾದ ವೃತ್ತಿ ಸಂಸೃತಿ ಎಂದರೆ ಉದ್ಯೋಗದಾತರು ಸದಾ ತಮ್ಮ ಉದ್ಯೋಗಿಗಳ ಯೋಗಕ್ಷೇಮ ಮತ್ತು ಅಗತ್ಯತೆಗಳಿಗೆ ಆದ್ಯತೆ ನೀಡುವುದು. ಸಂತೋಷ ಮತ್ತು ತೃಪ್ತ ತಂಡವು ಕಂಪನಿಯ ಯಶಸ್ಸಿನ ನಿಜವಾದ ಅಡಿಪಾಯ ಎಂದವರು ಹೇಳುತ್ತಾರೆ. ದೀಪಾವಳಿ ಹಬ್ಬಕ್ಕೆ 9 ದಿನಗಳ ರಜೆ ಘೋಷಣೆ ಬಗ್ಗೆ ಹೆಚ್ಆರ್ ತಂಡಕ್ಕೂ ಯಾವುದೇ ಮಾಹಿತಿ ಇರಲಿಲ್ಲ. ಇಮೇಲ್ ಮುಖಾಂತರವೇ ಎಲ್ಲರಿಗೂ ಈ ಬಗ್ಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಸಿಇಒ ವಿಶೇಷ ಇಮೇಲ್:
ಇನ್ನು ದೀಪಾವಳಿ ಹಬ್ಬಕ್ಕಾಗಿ 9 ದಿನಗಳ ರಜೆಯನ್ನು ಘೋಷಿಸಿರುವ ಸಂದರ್ಭದಲ್ಲಿ ಸಂಸ್ಥೆಯ ಸಿಇಒ ತನ್ನ ಉದ್ಯೋಗಿಗಳಿಗೆ ಹಾಸ್ಯಮಯ ಇಮೇಲ್ ಒಂದನ್ನು ಕಳುಹಿಸಿದ್ದು, "ಮನೆಯನ್ನು ಕ್ಲೀನ್ ಮಾಡಲು, ಸಿಹಿ ಖಾದ್ಯಗಳನ್ನು ಆನಂದಿಸಲು, 'ನೀವು ಯಾವಾಗ ಮದುವೆಯಾಗುತ್ತೀರಿ?' ಎಂಬಿತ್ಯಾದಿ ಸಾಂಪ್ರದಾಯಿಕ ಪ್ರಶ್ನೆಗಳನ್ನು ಎದುರಿಸುವುದು ಸೇರಿದಂತೆ, ತಮ್ಮ ಕುಟುಂಬಗಳೊಂದಿಗೆ ಹಬ್ಬವನ್ನು ಪೂರ್ಣ ಮನಸ್ಸಿನಿಂದ ಆನಂದಿಸಲು ಉದ್ಯೋಗಿಗಳಿಗೆ ದೀಪಾವಳಿ ಹಬ್ಬಕ್ಕಾಗಿ 9 ದಿನ ರಜೆ ಇರಲಿದೆ ಎಂದಿದ್ದಾರೆ. ಇದರೊಂದಿಗೆ, ಈ ದೀಪಾವಳಿಗೆ 2ಕೆಜಿ ಭಾರ, 10ಪಟ್ಟು ಹೆಚ್ಚು ಸಂತೋಷ ಮತ್ತು ಹೊಸ ಸವಾಲುಗಳಿಗೆ ಉಲ್ಲಾಸದಿಂದ ಹಿಂದಿರುಗುವಂತೆ ತಮಾಷೆಯಾದ ಸೂಚನೆಯನ್ನು ಸಿಇಒ ನೀಡಿದ್ದಾರೆ.
ಇದನ್ನೂ ಓದಿ- ನೌಕರರಿಗೆ ದೀಪಾವಳಿ ಗಿಫ್ಟ್.. 150% ಪಿಂಚಣಿ ಹೆಚ್ಚಳ! ಹೊರಬೀಳಲಿದೆ ಮಹತ್ವದ ಮಾಹಿತಿ..









