)
ಅಕ್ಟೋಬರ್ ಆರಂಭದಲ್ಲಿ, ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಗಳು ಉತ್ತುಂಗಕ್ಕೆ ಏರಿ ದಾಖಲೆ ನಿರ್ಮಿಸಿತ್ತು. ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಎರಡೂ ಅಮೂಲ್ಯ ಲೋಹಗಳು ಈಗ ಕುಸಿಯಲು ಪ್ರಾರಂಭಿಸಿವೆ. ಬುಧವಾರ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ. 2.9 ರಷ್ಟು ಕುಸಿದು ಪ್ರತಿ ಔನ್ಸ್ ಬೆಲೆ 4,004 ಡಾಲರ್ ಗೆ ಇಳಿದಿದೆ. ಮಂಗಳವಾರದಂದು, ಚಿನ್ನದ ಬೆಲೆ ಶೇ. 6.3 ರಷ್ಟು ಭಾರೀ ಕುಸಿತ ಕಂಡಿದೆ. ಇದು 12 ವರ್ಷಗಳಲ್ಲಿ ಒಂದೇ ದಿನದಲ್ಲಿ ಕಂಡ ಅತಿದೊಡ್ಡ ಕುಸಿತವಾಗಿದೆ. ಬೆಳ್ಳಿ ಕೂಡಾ ಶೇ. 2 ಕ್ಕಿಂತ ಹೆಚ್ಚು ಕುಸಿದು ಪ್ರತಿ ಔನ್ಸ್ಗೆ 47.6 ಡಾಲರ್ ತಲುಪಿದೆ.
ಪ್ರಾಫಿಟ್ ಬುಕಿಂಗ್ನಿಂದಾಗಿ ಕುಸಿತ :
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಈ ಹಠಾತ್ ಕುಸಿತಕ್ಕೆ ಹೂಡಿಕೆದಾರರ ಪ್ರಾಫಿಟ್ ಬುಕಿಂಗ್ ಕಾರಣವಾಗಿದೆ. ಕಳೆದ ತಿಂಗಳ ನಾಗಾಲೋಟದ ನಂತರ ವ್ಯಾಪಾರಿಗಳು ಲಾಭವನ್ನು ಕಾಯ್ದಿರಿಸಿದ್ದಾರೆ. ಕೆಸಿಎಂ ಟ್ರೇಡ್ನ ಮುಖ್ಯ ಮಾರುಕಟ್ಟೆ ವಿಶ್ಲೇಷಕ ಟಿಮ್ ವಾಟರರ್ ಬ್ಲೂಮ್ಬರ್ಗ್ಗೆ ತಿಳಿಸಿದಂತೆ ವ್ಯಾಪಾರಿಗಳು ಹೆಚ್ಚಿನ ಬೆಲೆಗಳಲ್ಲಿ ಲಾಭವನ್ನು ಕಾಯ್ದಿರಿಸಲು ಪ್ರಚೋದಿಸಲ್ಪಡುತ್ತಾರೆ. ಚಿನ್ನದ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಕುಸಿತವನ್ನು ಹಿಂದೆಂದೂ ನೋಡಿರಲಿಲ್ಲ. ದೀಪಾವಳಿ ಹಿನ್ನೆಲೆಯಲ್ಲಿ ಎಂಸಿಎಕ್ಸ್ ಮುಚ್ಚಲಾಗಿದ್ದು, ಜಾಗತಿಕ ಕುಸಿತವು ದೇಶೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿಲ್ಲ. ಆದ್ದರಿಂದ, ಅಕ್ಟೋಬರ್ 23 ರಂದು ವ್ಯಾಪಾರ ಪುನರಾರಂಭವಾದಾಗ, ಚಿನ್ನ ಮತ್ತು ಬೆಳ್ಳಿ ಎರಡೂ ಲೋಹಗಳ ಬೆಲೆಯ ಮೇಲೆ ಈ ಪರಿಣಾಮ ಕಾಣಿಸಬಹುದು.
ಜಾಗತಿಕ ಒತ್ತಡದಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿಯಲಿವೆ.ಡಿಸೆಂಬರ್ ತಿಂಗಳ ಚಿನ್ನದ ಫ್ಯೂಚರ್ಗಳು MCX ನಲ್ಲಿ 10 ಗ್ರಾಂಗೆ 1,28,000 ರೂ.ಗಳಲ್ಲಿವೆ. ಇದು ಹಿಂದಿನ ಮುಕ್ತಾಯಕ್ಕಿಂತ ಶೇ. 271 (0.21) ರಷ್ಟು ಕಡಿಮೆಯಾಗಿದೆ. ಜಾಗತಿಕ ಒತ್ತಡದಿಂದಾಗಿ, ಅಕ್ಟೋಬರ್ 23 (ಗುರುವಾರ) ರಂದು ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಐತಿಹಾಸಿಕ ದಾಖಲೆಯ ನಂತರ ಚಿನ್ನ ಮತ್ತು ಬೆಳ್ಳಿಯಲ್ಲಿ ಈ ಇಳಿಕೆ ಕಂಡುಬಂದಿದೆ.
ಚಿನ್ನದ ಬೆಲೆ ಏರಿಕೆಗೆ ಕಾರಣವೇನು? :
ಕೇಂದ್ರ ಬ್ಯಾಂಕ್ ಖರೀದಿಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಬಡ್ಡಿದರ ಕಡಿತದ ನಿರೀಕ್ಷೆಗಳು ಈ ಏರಿಕೆಗೆ ಕಾರಣವಾಗಿವೆ. ಹೂಡಿಕೆದಾರರು ಸೆಪ್ಟೆಂಬರ್ನಲ್ಲಿ ಯುಎಸ್ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ದತ್ತಾಂಶಕ್ಕಾಗಿ ಕಾಯುತ್ತಿದ್ದಾರೆ. ಕೆಲವು ವಿಶ್ಲೇಷಕರು ಮುಂದಿನ ವಾರ 25 ಬೇಸಿಸ್ ಪಾಯಿಂಟ್ ದರ ಕಡಿತ ಮತ್ತು ಡಿಸೆಂಬರ್ನಲ್ಲಿ ಮತ್ತೊಂದು ದರ ಕಡಿತವನ್ನು ನಿರೀಕ್ಷಿಸುತ್ತಾರೆ. ಲಾಭದ ಬುಕಿಂಗ್ನಿಂದಾಗಿ ಅಲ್ಪಾವಧಿಯ ಕುಸಿತದ ಹೊರತಾಗಿಯೂ, ಮಧ್ಯಮಾವಧಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬಲವಾಗಿ ಉಳಿಯಬಹುದು ಎನ್ನುವುದು ತಜ್ಞರು ಅಭಿಪ್ರಾಯ.