ಟ್ರಂಪ್ ನ ಒಂದು ನಿರ್ಧಾರದಿಂದ ಮತ್ತೆ ಕುಸಿದ ಬಂಗಾರದ ಬೆಲೆ !ಆಭರಣ ಪ್ರಿಯರ ಮೊಗದಲ್ಲಿ ಮೂಡಿದೆ ಸಂತಸ

Gold Price Today :ಬಹಳ ದಿನಗಳ ನಂತರ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಈ ಇಳಿಕೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ತೆಗೆದುಕೊಂಡಿರುವ ನಿರ್ಧಾರವೇ ಕಾರಣವಾಗಿದೆ.  

Written by - Ranjitha R K | Last Updated : May 26, 2025, 06:02 PM IST
  • ಕೆಲವು ಸಮಯದಿಂದ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ.
  • ಇದೀಗ ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ.
  • ಇದರ ಪರಿಣಾಮ ಸೋಮವಾರ ಭಾರತೀಯ ಮಾರುಕಟ್ಟೆ ಮೇಲೂ ಗೋಚರ
ಟ್ರಂಪ್ ನ ಒಂದು ನಿರ್ಧಾರದಿಂದ ಮತ್ತೆ ಕುಸಿದ ಬಂಗಾರದ ಬೆಲೆ !ಆಭರಣ ಪ್ರಿಯರ ಮೊಗದಲ್ಲಿ ಮೂಡಿದೆ ಸಂತಸ

Gold Price Today : ಕಳೆದ ಕೆಲವು ಸಮಯದಿಂದ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ. ಒಂದು ಸಮಯದಲ್ಲಿ ಇನ್ನು ಚಿನ್ನ ಖರೀದಿ ಬರೀ ಕನಸು ಅನ್ನುವ ಮಟ್ಟಿಗೆ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡಿತ್ತು. ಆದರೆ ಇದೀಗ ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಯುರೋಪಿಯನ್ ಒಕ್ಕೂಟದ (EU) ಜೊತೆಗಿನ ವ್ಯಾಪಾರ ಒಪ್ಪಂದದ ಮಾತುಕತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 9 ರವರೆಗೆ ಕಾಲಾವಕಾಶ ವಿಸ್ತರಿಸಿದ ನಂತರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಇದರ ಪರಿಣಾಮ ಸೋಮವಾರ ಭಾರತೀಯ ಮಾರುಕಟ್ಟೆ ಹಾಗೂ MCX ಮೇಲೂ ಕಂಡುಬಂದಿದೆ. 

Add Zee News as a Preferred Source

ಫ್ಯೂಚರ್ಸ್ ಮಾರುಕಟ್ಟೆಯಲ್ಲಿ, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಜೂನ್ 5, 2025ರ ಚಿನ್ನದ ಕಾಂಟಾಕ್ಟ್ ಬೆಲೆ ಶೇ. 0.76 ರಷ್ಟು ಇಳಿದು 10 ಗ್ರಾಂ ಬಂಗಾರದ ಬೆಲೆ 95,690 ರೂ.ಗೆ ತಲುಪಿದೆ. ಜುಲೈ 4, 2025 ರ ಬೆಳ್ಳಿ ಕಾಂಟಾಕ್ಟ್ ಬೆಲೆ ಪ್ರತಿ ಕೆಜಿಗೆ ಸುಮಾರು 98,048 ರೂ.ಗಳಷ್ಟಾಗಿದೆ.

ಇದನ್ನೂ ಓದಿ : ಪಿಎಫ್ ಬಡ್ಡಿದರ ಏರಿಕೆ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ !ಇನ್ನು ಮುಂದೆ ಈ ಕಾರಣಕ್ಕೆ ಕ್ಲೈಂ ತಿರಸ್ಕರಿಸುವ ಹಾಗಿಲ್ಲ

ಎಷ್ಟು ಅಗ್ಗವಾಗಿದೆ ಚಿನ್ನದ ಬೆಲೆ :
ಭವಿಷ್ಯದ ವಹಿವಾಟಿನ ಜೊತೆಗೆ, ಸ್ಪಾಟ್ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಇಂಡಿಯಾ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(ಐಬಿಜೆಎ) ಪ್ರಕಾರ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ಗ್ರಾಂಗೆ 95,382 ರೂ.ಗೆ ಇಳಿದಿದೆ. ಅಂದರೆ ಹಳದಿ ಲೋಹದ ಬೆಲೆ 10 ಗ್ರಾಂಗೆ 432 ರೂ.ಗಳ ಇಳಿಕೆ ಕಂಡಿದೆ. ಇದಲ್ಲದೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87,370 ರೂ.ಗೆ ಇಳಿದಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 71,537 ರೂ. ಆಗಿದೆ. 

ಸ್ಪಾಟ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಬೆಳ್ಳಿ ಬೆಲೆ ಕೆಜಿಗೆ 54 ರೂ. ಏರಿಕೆಯಾಗಿ 97,710 ರೂ.ಗೆ ತಲುಪಿದೆ. ದೊಡ್ಡ ಸಂಸ್ಥೆಗಳಿಂದ ಬಾಂಡ್ ಖರೀದಿಯಲ್ಲಿನ ಬೆಳವಣಿಗೆ ಸುರಕ್ಷಿತ ಸ್ವತ್ತುಗಳತ್ತ ಬದಲಾವಣೆಯ ಸೂಚನೆಯಾಗಿದೆ ಎಂದು LKP ಸೆಕ್ಯುರಿಟೀಸ್‌ನ ಜತಿನ್ ತ್ರಿವೇದಿ ಹೇಳಿದ್ದಾರೆ. 

ಇದನ್ನೂ ಓದಿ : ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ಅಸ್ತು!ಪಿಯೂನ್ ನಿಂದ ಅಧಿಕಾರಿಯವರೆಗೆ ಯಾರಿಗೆ ಎಷ್ಟು ವೇತನ ಹೆಚ್ಚಳ ? ಇಲ್ಲಿದೆ ಸ್ಪಷ್ಟ ಚಿತ್ರಣ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News