)
ನಿರಂತರವಾಗಿ ಏರುತ್ತಿರುವ ಬೆಲೆಗಳಿಂದಾಗಿ ಚಿನ್ನ ಸುದ್ದಿಯಲ್ಲಿದೆ. ಚಿನ್ನದ ಬೆಲೆಯಲ್ಲಿನ ನಿರಂತರ ಏರಿಕೆಯು ಸಾಮಾನ್ಯ ಜನ ಚಿನ್ನದಿಂದ ಮಾರು ದೂರ ಸರಿಯುವಂತೆ ಮಾಡಿದೆ. ಆದರೆ, ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. ಇಂದು, ಸತತ ಎರಡನೇ ದಿನವೂ, ಚಿನ್ನದ ಬೆಲೆ ಇಳಿಕೆ ಕಂಡಿದೆ. ಕಳೆದ 6-7 ತಿಂಗಳುಗಳಿಂದ ಮುಂದುವರಿದಿರುವ ಏರಿಕೆಯ ಪ್ರವೃತ್ತಿ ನವರಾತ್ರಿಯ ಸಮಯದಲ್ಲಿ ತಗ್ಗಿದೆ. ಚಿನ್ನ ಅಗ್ಗವಾಗಿದ್ದರೂ, ಬೆಳ್ಳಿ ಮಾತ್ರ ಇನ್ನು ಕೂಡಾ ಗರಿಷ್ಟ ಮಟ್ಟದಲ್ಲಿಯೇ ಸಾಗುತ್ತಿದೆ.
ಚಿನ್ನದ ಬೆಲೆಯಲ್ಲಿ ಕುಸಿತ :
ಚಿನ್ನದ ಬೆಲೆ ಸತತ ಎರಡನೇ ದಿನವೂ ಕುಸಿದಿದೆ. ಇಂದು ಚಿನ್ನದ ಬೆಲೆ ಮತ್ತೆ ಅಗ್ಗವಾಗಿದೆ. ಇಂದು ಚಿನ್ನದ ಬೆಲೆ 800 ರೂ. ಯಷ್ಟು ಕುಸಿದಿದೆ. ಇದಕ್ಕೂ ಮೊದಲು, ಗುರುವಾರ ಕೂಡಾ ಬಂಗಾರದ ಬೆಲೆಯಲ್ಲಿ 882 ರಷ್ಟು ಕುಸಿತ ದಾಖಲಾಗಿತ್ತು. ಅಂದರೆ, ಸತತ ಎರಡು ದಿನಗಳಲ್ಲಿ ಚಿನ್ನ ಸುಮಾರು 1,600 ರಷ್ಟು ಕುಸಿದಿದೆ. ಇದನ್ನು 100 ಗ್ರಾಂ. ಗೆ ಲೆಕ್ಕ ಹಾಕಿ ನೋಡಿದರೆ ಇಂದು ಚಿನ್ನದ ಬೆಲೆಯಲ್ಲಿ 8 ಸಾವಿರ ಕಡಿತವಾದರೆ ಎರಡು ದಿನಗಳಲ್ಲಿ
ಸುಮಾರು 16 ಸಾವಿರ ಇಳಿಕೆ ಕಂಡ ಹಾಗೆ ಆಗಿದೆ.
24 ಕ್ಯಾರೆಟ್ ನಿಂದ 18 ಕ್ಯಾರೆಟ್ ವರೆಗೆ ಚಿನ್ನದ ಬೆಲೆ :
ಸತತ ಎರಡು ದಿನಗಳ ಕುಸಿತದ ನಂತರ, ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ವೆಬ್ಸೈಟ್ನಲ್ಲಿ ಬಿಡುಗಡೆಯಾದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಈ ಕೆಳಗಿನಂತಿವೆ :
ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,13,300.
22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹103,780.
18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹84,970.
14 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹66,280.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ :
ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಜೈಪುರ ಮತ್ತು ನೋಯ್ಡಾ ಸೇರಿದಂತೆ ದೇಶದ ಹೆಚ್ಚಿನ ಭಾಗಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,14,500 ರಷ್ಟಿದೆ. ಬೆಳ್ಳಿ ಬೆಲೆ 1,39,900 ರೂ.ಗೆ ತಲುಪಿದೆ. ಚಿನ್ನದ ಬೆಲೆ ಇಂದು ಕುಸಿದಿದ್ದರೂ, ತನ್ನ ಆ ವೇಗವನ್ನು ಕಾಯ್ದುಕೊಂಡಿದೆ.