)
EPFO Good News: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಲಕ್ಷಾಂತರ ಇಪಿಎಫ್ ಸದಸ್ಯರಿಗೆ ಭರ್ಜರಿ ಗುಡ್ನ್ಯೂಸ್ ಇದೆ. ಪಿಎಫ್(PF) ಖಾತೆಯುಳ್ಳ ಉದ್ಯೋಗಿಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಸಾವಿರಾರು ರೂಪಾಯಿ ಖಾತೆ ಸೇರಲಿದೆ. ಮೂಲಗಳ ಪ್ರಕಾರ, ಪ್ರಾವಿಡೆಂಟ್ ಫಂಡ್ (Provident Fund) ಖಾತೆಯಲ್ಲಿ ಇರುವ ಹಣಕ್ಕೆ ನೀಡುತ್ತಿದ್ದ ಬಡ್ಡಿ ದರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪವನೆ ಸಲ್ಲಿಸಲಾಗಿದೆ. ಮೋದಿ ಸರ್ಕಾರವು ಆ ಪ್ರಸ್ತಾಪವನ್ನು ಪರಿಶೀಲನೆ ಮಾಡುತ್ತಿದ್ದು ಹೋಳಿ ಹಬ್ಬದ ವೇಳೆಗೆ ಅದಕ್ಕೆ ಅನುಮೋದನೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಎಷ್ಟು ಜನರಿಗೆ ಸಿಗುತ್ತೆ ಇದರ ಲಾಭ?
ಪ್ರಾವಿಡೆಂಟ್ ಫಂಡ್ (PF) ಖಾತೆಯಲ್ಲಿ ಇರುವ ಹಣಕ್ಕೆ ನೀಡುತ್ತಿದ್ದ ಬಡ್ಡಿ ದರವನ್ನು ಹೆಚ್ಚಿಸಬೇಕೆಂಬುದು ನೌಕರರ ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹೋಳಿ ಹಬ್ಬದ ವೇಳೆಗೆ ಕೇಂದ್ರ ಸರ್ಕಾರವು ಇಪಿಎಫ್ ಸದಸ್ಯರಿಗೆ 2025 ಮತ್ತು 2026ರ ಹಣಕಾಸು ವರ್ಷಗಳ ಬಡ್ಡಿದರವನ್ನು ಅನುಮೋದಿಸಬಹುದು ಎನ್ನಲಾಗುತ್ತಿದ್ದು, ಇದರಿಂದ ಸುಮಾರು 7.7 ಕೋಟಿ ಉದ್ಯೋಗಿಗಳಿಗೆ ಲಾಭವಾಗಲಿದೆ.
ಬಡ್ಡಿ ದರವನ್ನು ಎಷ್ಟು ಹೆಚ್ಚಳ ಮಾಡಬಹುದು?
ಸದ್ಯ ಕೇಂದ್ರ ಸರ್ಕಾರದ ಮೂಲಗಳು ಹೇಳುವ ಪ್ರಕಾರ ಪ್ರಾವಿಡೆಂಟ್ ಫಂಡ್ (PF) ಖಾತೆಯಲ್ಲಿ ಇರುವ ಹಣಕ್ಕೆ ನೀಡುತ್ತಿದ್ದ ಬಡ್ಡಿ ದರವನ್ನು ಶೇಕಡಾ 1ರಷ್ಟನ್ನು ಹೆಚ್ಚಳ ಮಾಡಬಹುದು. ಅಲ್ಲಿಗೆ ಪ್ರಾವಿಡೆಂಟ್ ಫಂಡ್ (PF) ಖಾತೆ ಹೊಂದಿರುವವರಿಗೆ ಶೇಕಡಾ 9.25ರಷ್ಟು ಬಡ್ಡಿ ಸಿಗಲಿದೆ. ಏಕೆಂದರೆ ಹಿಂದೆ (ಕಳೆದ ವರ್ಷ) ಇದು ಶೇಕಡಾ 8.2ರಷ್ಟು ಬಡ್ಡಿ ಸಿಗುತ್ತಿತ್ತು. 2024 ಮತ್ತು 2025ರ ಆರ್ಥಿಕ ವರ್ಷದಲ್ಲಿ ಹೆಚ್ಚಳವಾಗಿದ್ದ ಬಡ್ಡಿದರದಿಂದ ಉದ್ಯೋಗಿಗಳಿಗೆ ಗಮನಾರ್ಹವಾದ ಲಾಭವಾಗಿತ್ತು. ಈ ವರ್ಷವೂ ಅಂಥದೇ ನಿರೀಕ್ಷೆಗಳಿವೆ. ಇದರಿಂದ ಇಪಿಎಫ್ಒ ಪಿಂಚಣಿಯಲ್ಲಿ (EPFO Pension) ಭಾರೀ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಖಾತೆ ಸೇರಲಿದೆ 75,000 ರೂಪಾಯಿ!
ಕೇಂದ್ರ ಸರ್ಕಾರ ಈಗ ಪಿಎಫ್ ಬಡ್ಡಿದರವನ್ನು ಶೇಕಡಾ 1ರಷ್ಟು ಹೆಚ್ಚಳ ಮಾಡಿದರೆ, ಅಂದರೆ ಶೇಕಡಾ 9.25ರಷ್ಟು ಬಡ್ಡಿ ನಿಗದಿ ಮಾಡಿದರೆ ಪ್ರಾವಿಡೆಂಟ್ ಫಂಡ್ (PF) ಖಾತೆಗಳಿಗೆ ದೊಡ್ಡ ಮೊತ್ತ ಜಮಾ ಆಗಲಿದೆ. ಉದ್ಯೋಗಿಗಳು ಈಗ ತಮ್ಮ ಖಾತೆಯಲ್ಲಿ ಎಷ್ಟು ಹಣ ಇಟ್ಟಿದ್ದಾರೆ ಎಂಬುದರ ಮೇಲೆ ಎಷ್ಟು ಹಣ ಬಡ್ಡಿ ರೂಪದಲ್ಲಿ ಜಮಾ ಆಗಲಿದೆ ಎಂಬುದು ನಿರ್ಧಾರವಾಗಲಿದೆ. ಒಂದೊಮ್ಮೆ PF ಖಾತೆಯುಳ್ಳ ನೌಕರರು ತಮ್ಮ ಖಾತೆಯಲ್ಲಿ 8 ಲಕ್ಷ ರೂಪಾಯಿವರೆಗೆ ಹಣ ಹೊಂದಿದ್ದರೆ ಅವರಿಗೆ ಸುಮಾರು ಶೇಕಡಾ 9ರ ಬಡ್ಡಿ ದರದಲ್ಲಿ ಲೆಕ್ಕ ಹಾಕಿದರೂ 75,000 ರೂಪಾಯಿವರೆಗೆ ಹಣ ಖಾತೆ ಸೇರಲಿದೆ.
ಒಂದೊಮ್ಮೆ ಉದ್ಯೋಗಿಗಳು ತಮ್ಮ ಪ್ರಾವಿಡೆಂಟ್ ಫಂಡ್ (PF) ಖಾತೆಯಲ್ಲಿ 6 ಲಕ್ಷ ರೂ.ಗಳವರೆಗೆ ಠೇವಣಿ ಇಟ್ಟಿದ್ದರ ಅಂಥ ನೌಕರರಿಗೆ ಸುಮಾರು 58,000 ರೂಪಾಯಿಗಳವರೆಗೆ ಬಡ್ಡಿ ಸಿಗಲಿದೆ. ಇದರಿಂದ ಹಣದುಬ್ಬರ, ಬೆಲೆ ಏರಿಕೆಯಂಥ ಇಂಥ ಪರಿಸ್ಥಿತಿಯಲ್ಲಿ ಉದ್ಯೋಗಿಗಳಿಗೆ ಹೆಚ್ಚಿನ ಆರ್ಥಿಕ ಪ್ರಯೋಜನವನ್ನು ಒದಗಿಸಬಲ್ಲದು. ಪ್ರಾವಿಡೆಂಟ್ ಫಂಡ್ (PF) ಖಾತೆಯುಳ್ಳ ಉದ್ಯೋಗಿಗಳು ತಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ? ಎಷ್ಟು ಬಡ್ಡಿ ಬಂದಿದೆ ಅಥವಾ ಬರುತ್ತದೆ ಎನ್ನುವುದನ್ನು ಆನ್ಲೈನ್ ಮೂಲಕ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
ಪ್ರಾವಿಡೆಂಟ್ ಫಂಡ್ (PF) ಖಾತೆಯ ಬಾಕಿ ಹಣವನ್ನು ಚೆಕ್ ಮಾಡುವುದು ಹೇಗೆ?
ಮೊದಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899ಗೆ EPFOHO ಎಂದು SMS ಮಾಡಿ. ಬಳಿಕ ನಿಮ್ಮ UAN ಮತ್ತು ಭಾಷಾ ಕೋಡ್ (ಉದಾ. ENG, HIN, ಇತ್ಯಾದಿ) ಬರೆಯಿರಿ. ನಂತರ UMANG ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಅದಾದ ಮೇಲೆ EPFO ವಿಭಾಗಕ್ಕೆ ಹೋಗಿ ನಿಮ್ಮ ಪ್ರಾವಿಡೆಂಟ್ ಫಂಡ್ (PF) ಖಾತೆಯಲ್ಲಿ ಎಷ್ಟು ಹಣ ಇದೆ ಎನ್ನುವುದನ್ನು ತಿಳಿಯಿರಿ. ಹಾಗೆಯೇ ಬಡ್ಡಿ ಬಂದ ಬಳಿಕ ಎಷ್ಟು ಬಡ್ಡಿ ಬಂದಿದೆ ಎನ್ನುವುದನ್ನು ಚೆಕ್ ಮಾಡಿ.
Disclaimer: ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದು ಯಾವುದೇ ರೀತಿಯ ಸರ್ಕಾರದ ವೇತನ ಹೆಚ್ಚಳ ಅಥವಾ ಪಿಂಚಣಿ ಏರಿಕೆಯನ್ನು ಖಾತರಿಪಡಿಸುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್ಸೈಟ್ಗಳನ್ನು ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ.