)
EPFO New Circular: ಪಿಂಚಣಿದಾರರು ಮತ್ತು PF ಖಾತೆದಾರರು ಖಾತೆ ನಿರ್ವಹಣೆ ವೇಳೆ ಕೆಲಮೊಮ್ಮೆ ತಪ್ಪುಗಳಾಗುತ್ತವೆ. ಸರಿಯಾದ ಮಾಹಿತಿಗಳನ್ನು ನೀಡಿರುವುದಿಲ್ಲ. ಅಥವಾ ನೀಡಲು ಸಾಧ್ಯವಾಗಿರುವುದಿಲ್ಲ. ಇದಲ್ಲದೆ ಕೆಲವೊಮ್ಮೆ ಗೊತ್ತಿಲ್ಲದೆ ತಪ್ಪಾಗಿ ನಮೂದಾಗಿರುತ್ತದೆ. ಪರಿಣಾಮವಾಗಿ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಹೆಣಗಾಡಬೇಕಾಗುತ್ತಿತ್ತು ಮತ್ತು ಅದಕ್ಕಾಗಿ ಹಣ ಕೂಡ ಕಡಿತವಾಗುತ್ತಿತ್ತು. ಆದರೀಗ EPFO ಕಚೇರಿ ಹೊರಡಿಸಿರುವ ಹೊಸ ಸುತ್ತೋಲೆಯಿಂದ ಈ ಸಮಸ್ಯೆಗೆ ಪರಿಹಾರ ದೊರಕಿದೆ.
ಕೆಲವೊಮ್ಮೆ ಉದ್ಯೋಗದಾತರು ಅಂದರೆ ಕಂಪನಿಗಳು ಎಸಗುವ ತಪ್ಪಿಗೆ ಉದ್ಯೋಗಿಗಳು ದೊಡ್ಡ ಹಿಂಸೆ ಅನುಭವಿಸಬೇಕಾಗುತ್ತದೆ. ಅದರಲ್ಲೂ ನಿವೃತ್ತಿಯಾದ ಮೇಲಂತೂ ತುಂಬಾ ಸಮಸ್ಯೆಯನ್ನು ತಂದೊಡ್ಡುತ್ತದೆ. ಏಕೆಂದರೆ ಈ ಪ್ರಮಾದಗಳು ನಿವೃತ್ತಿ ನಿಧಿಯ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತವೆ. ಇದಕ್ಕಾಗಿಯೇ ಈಗ EPFO ಕಚೇರಿ ಹೊಸ ನಿಯಮಗಳನ್ನು ತಂದಿದೆ ಮತ್ತು ಅದಕ್ಕೆ ಪೂರಕವಾಗಿ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದೆ.
EPFO ಕಚೇರಿ ಹೊರಡಿಸಿರುವ ಹೊಸ ಸುತ್ತೋಲೆ ಒಂದು ರೀತಿಯಲ್ಲಿ ಪಿಂಚಣಿದಾರರು ಮತ್ತು PF ಖಾತೆದಾರರರಿಗೆ ಬಿಗ್ ರಿಲೀಫ್ ತಂದುಕೊಟ್ಟಿದೆ. ಕಂಪನಿ ಕಡೆಯಿಂದ ತಪ್ಪು ಮಾಹಿತಿಗಳು ಅಪ್ಲೋಡ್ ಆಗಿದ್ದರೆ ಅದರಿಂದಾಗಿ ಸಮಸ್ಯೆಯಾಗುತ್ತಿದ್ದರೆ ನಿಮ್ಮ ಮೂಲ ದಾಖಲೆಗಳನ್ನು ಆಧರಿಸಿ EPFO ಕಚೇರಿ ತನ್ನಿಂದ ತಾನೇ ನಿಮಗೆ ಸಂಬಂದಿಸಿದ ಮಾಹಿತಿಗಳನ್ನು ಸರಿ ಮಾಡಿಕೊಳ್ಳುತ್ತದೆ. ಜೊತೆಗೆ ಈ ರೀತಿ ಕರೆಕ್ಷನ್ ಹಾಕಿಕೊಳ್ಳುವುದಕ್ಕೆ ಯಾವುದೇ ರೀತಿಯ ಸರ್ವಿಸ್ ಚಾರ್ಜ್ ಕಟ್ಟಾಗುವುದಿಲ್ಲ.
EPFO ಹೊಸ ಮಾರ್ಗಸೂಚಿಗಳನ್ನು ನೋಡುವುದಾದರೆ ಸಾಮಾನ್ಯವಾಗಿ ಡೇಟಾ ಎಂಟ್ರಿ (ಮಾಹಿತಿಗಳನ್ನು ನಮೂದಿಸುವುದು) ಅಥವಾ ಕೆಲವು ತಾಂತ್ರಿಕ ಕಾರಣಗಳಿಂದ ಉದ್ಯೋಗ ನೀಡಿರುವ ಕಂಪನಿಗಳ ಕಡೆಯಿಂದ ತಪ್ಪಾಗುತ್ತವೆ. ಇದನ್ನು ಪರಿಶೀಲಿಸಿ ಇದು ಕಂಪನಿಯ ದೋಷ ಎಂದು ಪರಿಗಣಿಸಿರುವ EPFO ಕಚೇರಿ ಇದರಿಂದಾಗಿ ಪಿಂಚಣಿದಾರರಿಗೆ ಅಥವಾ PF ಖಾತೆ ಹೊಂದಿರುವವರಿಗೆ ತೊಂದರೆ ಆಗಬಾರದೆಂದು ಸ್ವಯಂಚಾಲಿತವಾಗಿ ತಪ್ಪುಗಳನ್ನು ಸರಿ ಪಡಿಸುವ ಕ್ರಮಕ್ಕೆ ಮುಂದಾಗಿದೆ.
ಇನ್ನೊಂದು ಪ್ರಮುಖ ಸಂಗತಿ ಏನೆಂದರೆ ಪಿಂಚಣಿಗೆ ಅರ್ಹರಾಗಿರುವ ನೌಕರರನ್ನು EPS ಖಾತೆಯ ಬದಲು PF ಖಾತೆಗೆ ವರ್ಗಾಯಿಸಿರುವ ಪ್ರಕರಣಗಳು ಕೂಡ ಇರುತ್ತವೆ. ಇದರಿಂದ ನೌಕರರು ನಿವೃತ್ತಿಯಾದಾಗ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ಪಿಂಚಣಿ ಪಡೆಯಲು ಹರಸಾಹಸ ಮಾಡಬೇಕಾಗುತ್ತದೆ. ಈ ಸಮಸ್ಯೆಗೂ ಪರಿಹಾರ ಸೂಚಿಸಿರುವ EPFO ಕಚೇರಿ EPSಗೆ ಅರ್ಹರಲ್ಲದಿದ್ದೂ ಕಂಪನಿಯು ಪಾಲನ್ನು ಅಲ್ಲಿ ಜಮಾ ಮಾಡಿದ್ದರೆ ಅದಕ್ಕೆ ಸಂಬಂಧಿಸಿದಂತೆ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ EPFO ಮುಂದಾಗಲಿದೆ.
ಇಂಥ ಸಂದರ್ಭದಲ್ಲಿ ಅಥವಾ ಪ್ರಕರಣದಲ್ಲಿ EPS ಖಾತೆಯಿಂದ ಹಣವನ್ನು ವಾಪಸ್ ಪಡೆದುಕೊಂಡು ಅದಕ್ಕೆ ಬಡ್ಡಿ ಸೇರಿಸಿ ಸರಿಯಾದ PF ಖಾತೆಗೆ ಸ್ವಯಂಚಾಲಿತವಾಗಿ ಜಮಾ ಮಾಡಲಲಿದೆ. ಇಷ್ಟು ಮಾತ್ರವಲ್ಲದೆ, ಭವಿಷ್ಯದಲ್ಲೂ ಈ ರೀತಿಯ ತಪ್ಪುಗಳು ಆಗಬಾರದು ಮತ್ತು ಪಿಂಚಣಿದಾರರಿಗೆ ಸಮಸ್ಯೆಯಾಗಬಾರದು ಎಂದು ತಪ್ಪಾದ ಪಿಂಚಣಿ ಸೇವಾ ಅವಧಿಯನ್ನು ತೆಗೆದುಹಾಕಲಾಗುತ್ತದೆ.