)
EPFO 3.0: ಇತ್ತೀಚಿಗೆ ಜಿಎಸ್ಟಿಯಲ್ಲಿ ಸುಧಾರಣೆ ಘೋಷಿಸುವ ಮೂಲಕ ಕೇಂದ್ರ ಸರ್ಕಾರ ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ಪರಿಹಾರ ನೀಡಿದೆ. ಇದೀಗ ದೀಪಾವಳಿಗೂ ಮುನ್ನ ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಭಾರೀ ಬದಲಾವಣೆಗೆ ಸಿದ್ಧತೆ ನಡೆಸಿದೆ. ಪಿಎಫ್ ಸಂಬಂಧಿತ ಈ ಬದಲಾವಣೆಯು ದೇಶಾದ್ಯಂತ ಸುಮಾರು 8ಕೋಟಿ ನೌಕರರು, ಪಿಂಚಣಿದಾರರಿಗೆ ನೇರ ಪ್ರಯೋಜನವನ್ನು ನೀಡಲಿದೆ.
ಇಪಿಎಫ್ಒ 3.0 ಶೀಘ್ರದಲ್ಲೇ ಜಾರಿಯಾಗಲಿದ್ದುಕ್ ಇದಾದ ಬಳಿಕ ಪಿಎಫ್ ಬಳಕೆದಾರರು ಎಟಿಎಂ, ಯುಪಿಐನಿಂದ ಸುಲಭವಾಗಿ ಪಿಎಫ್ ಹಣವನ್ನು ಹಿಂಪಡೆಯಬಹುದಾಗಿದೆ. ಪಿಎಫ್ ವಿತ್ ಡ್ರಾ ಸುಲಭತೆಯು ಲಕ್ಷಾಂತರ ಮಂದಿ ನೌಕರರು, ಪಿಂಚಣಿದಾರರಿಗೆ ಸಹಕಾರಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇಪಿಎಫ್ಒ ಹೊಸ ವ್ಯವಸ್ಥೆಯಲ್ಲಿ ಪಿಎಫ್ ಸದಸ್ಯರು ಎಟಿಎಂ ಮೂಲಕ ನೇರವಾಗಿ ತಮ್ಮ ಪಿಎಫ್ ನಿಧಿಯಿಂದ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಇಪಿಎಫ್ಒದ ಈ ಸೌಲಭ್ಯವನ್ನು ಪಡೆಯಲು ಸದಸ್ಯರ ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಸಕ್ರಿಯವಾಗಿರಬೇಕು. ಜೊತೆಗೆ ಬ್ಯಾಂಕ್ ಖಾತೆ ಆಧಾರ್ ಗೆ ಲಿಂಕ್ ಆಗಿರುವುದು ಕಡ್ಡಾಯವಾಗಿದೆ.
ಪಿಎಫ್ ಹಣವನ್ನು ಎಟಿಎಂ ಮೂಲಕ ಮಾತ್ರವಲ್ಲದೆ, ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಮೂಲಕವೂ ಡೈರೆಕ್ಟ್ ಆಗಿ ಹಣ ವರ್ಗಾಯಿಸಬಹುದು. ಇದಲ್ಲದೆ, ಪಿಎಫ್ ಹಣಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕ್ಲೇಮ್'ಗಳನ್ನು ಆನ್ಲೈನ್ ಮೂಲಕ ಸಲ್ಲಿಸುವ ಪ್ರಕ್ರಿಯೆಯೂ ಸರಳಗೊಂಡಿದೆ. ಇದು ಶ್ರಮವನ್ನು ಕಡಿಮೆ ಮಾಡುವುದರ ಜೊತೆಗೆ ಸಮಯವನ್ನು ಕೂಡ ಉಳಿಸುತ್ತದೆ.
ಕನಿಷ್ಠ ಪಿಂಚಣಿ ಏರಿಕೆ:
10, 11 ಅಕ್ಟೋಬರ್ 2025ರಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನೌಕರರ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಯಲಿದ್ದು,
ಈ ಸಭೆಯಲ್ಲಿ ದೀರ್ಘಕಾಲದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಮಾಸಿಕ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.