EPFO ಮಹತ್ವದ ಬದಲಾವಣೆ, ಪಿ‌ಎಫ್ ಪಡೆಯುವವರಿಗೆ ಗುಡ್ ನ್ಯೂಸ್

EPFO: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಒ ಚಂದಾದಾರರಿಗೆ ಅನುಕೂಲ ಕಲ್ಪಿಸಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಶೀಘ್ರದಲ್ಲೇ ಇಪಿಎಫ್ಒ 3.0 ಆವೃತ್ತಿ ಬರಲಿದ್ದು ಕೋಟ್ಯಾಂತರ ಜನರಿಗೆ ಪ್ರಯೋಜನವಾಗಲಿದೆ. 

Written by - Yashaswini V | Last Updated : Apr 22, 2025, 09:11 AM IST
  • ಇಪಿಎಫ್ಒ 3.0 ಆವೃತ್ತಿ ಶೀಘ್ರದಲ್ಲೇ ಜಾರಿ
  • ಡಿಜಿಟಲ್ ಸೇವೆಗಳನ್ನು ಸುಗಮಗೊಳಿಸಲಿರುವ ಇಪಿಎಫ್ಒ 3.0
  • ಇಪಿಎಫ್ಒ 3.0 ಆವೃತ್ತಿಯಿಂದ ಕೋಟ್ಯಾಂತರ ಜನರಿಗೆ ಪ್ರಯೋಜನ
EPFO ಮಹತ್ವದ ಬದಲಾವಣೆ, ಪಿ‌ಎಫ್ ಪಡೆಯುವವರಿಗೆ ಗುಡ್ ನ್ಯೂಸ್

EPFO 3.0:  ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಒ ಪಿ‌ಎಫ್ ಹಣ ವಿತ್ ಡ್ರಾ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗೆ ಮೋದಿ ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತಂತೆ ಸ್ವತಃ ಕೇಂದ್ರ ಕಾರ್ಮಿಕ ಸಚಿವ ಮುನ್ಸುಖ್ ಮಾಂಡವಿಯಾ ಅವರೇ ಘೋಷಿಸಿದ್ದು, ಪಿ‌ಎಫ್ ಹಣ ಹಿಂಪಡೆಯುವ ಪ್ರಕ್ರಿಯೆ ಇನ್ನೂ ಸುಲಭವಾಗಲಿದೆ ಎಂದು ತಿಳಿಸಿದ್ದಾರೆ. 

ಶೀಘ್ರದಲ್ಲೇ ಇಪಿಎಫ್ಒ 3.0 ಆವೃತ್ತಿ ಜಾರಿ: 
ಕೋಟ್ಯಂತರ ಇಪಿಎಫ್ಒ ಚಂದಾದಾರರಿಗೆ ಅನುಕೂಲವಾಗಲೆಂದು ಶೀಘ್ರದಲ್ಲೇ ಇಪಿಎಫ್ಒ 3.0 ಆವೃತ್ತಿ ಜಾರಿಯಾಗಲಿದ್ದು, ಹೊಸ ವ್ಯವಸ್ಥೆಯು ಪಿಎಫ್ ಖಾತೆದಾರರು ನೇರವಾಗಿ ಎಟಿಎಂಗಳಿಂದಲೇ ತಮ್ಮ ಪಿ‌ಎಫ್ ಹಣವನ್ನು ವಿತ್ ಡ್ರಾ ಮಾಡಲು ಅನುವು ಮಾಡಿಕೊಡಲಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- Gold ಲೋನ್ ಸಂಬಂಧ ಹೊಸ ರೂಲ್ಸ್ ಜಾರಿಗೊಳಿಸಿದ ರಿಸರ್ವ್ ಬ್ಯಾಂಕ್! ನಿಮ್ಮ ಮೇಲೆ ಏನು ಪರಿಣಾಮ...!

ವಾಸ್ತವವಾಗಿ, ಇಪಿಎಫ್ಒ 3.0 ಆವೃತ್ತಿಯು ಉದ್ಯೋಗಿಗಳ ಭವಿಷ್ಯ ನಿಧಿ ಮಂಡಳಿ ಕೈಗೊಂಡಿರುವ ಪ್ರಮುಖ ಡಿಜಿಟಲ್ ಪರಿಷ್ಕರಣೆಯಾಗಿದ್ದು, ಇದರ ನೆರವಿನಿಂದಾಗಿ ಇಪಿಎಫ್ಒ ಚಂದಾದಾರರು ತಮ್ಮ ವೃತ್ತಿ ಬದುಕಿನ ಉದ್ದಕ್ಕೂ ಕೂಡಿಟ್ಟ ಭವಿಷ್ಯ ನಿಧಿಯ ಹಣವನ್ನು ಹಿಂಪಡೆಯಲು ತಿಂಗಳುಟ್ಟಲೆ ಅಥವಾ ದಿನಗಟ್ಟಲೆ ಕಾಯುವ ಪ್ರಮೇಯವನ್ನು ತಪ್ಪಿಸಲಿದೆ. 

ಕಾರ್ಮಿಕ ಮತ್ತು ಉದ್ಯೋಗ ಸಚಿವ ಮುನ್ಸುಖ್ ಮಾಂಡವಿಯಾ ಅವರು ನೀಡಿರುವ ಮಾಹಿತಿಯ ಪ್ರಕಾರ, 2025ರ ಮೇ, ಜೂನ್ ಹೊತ್ತಿಗೆ ಇಪಿಎಫ್ಒ 3.0 ಆವೃತ್ತಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು ಇಪಿಎಫ್ಒ ಚಂದಾದಾರರು, ಬಹಳ ಸುಲಭವಾಗಿ ಪಿ‌ಎಫ್ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡಲಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- Pension Hike: ಇಪಿಎಫ್ಒ ಚಂದಾದಾರಿಗೆ ಗುಡ್ ನ್ಯೂಸ್.. ಪಿಂಚಣಿ ಹೆಚ್ಚಳದ ಜೊತೆಗೆ ಸಿಗುತ್ತೆ ಡಿಎ ಸೌಲಭ್ಯ

ಇಪಿಎಫ್ಒ 3.0 ಪ್ರಯೋಜನಗಳು: 
* ಮೊದಲೇ ತಿಳಿಸಿದಂತೆ ಇಪಿಎಫ್ಒ ಚಂದಾದರರು ತಮ್ಮ -ಕ್ಲೇಮ್ ಸೆಟಲ್ಮೆಂಟ್‌ಗಳನ್ನು ಪಡೆಯುವ ಪ್ರಕ್ರಿಯೆ ಸರಳಗೊಳ್ಳಲಿದೆ. 
* ಇಪಿಎಫ್ಒ 3.0 ಆವೃತ್ತಿಯು ಬಲಿಷ್ಠ ಐಟಿ ವೇದಿಕೆ ಆಗಿದ್ದು ಎಟಿಎಂ ಮೂಲಕವೇ ಪಿ‌ಎಫ್ ಹಿಂಪಡೆಯುವಿಕೆಗೆ ಅನುವು ಮಾಡಿಕೊಡಲಿದೆ. 
* ಇಪಿಎಫ್ಒ 3.0 ಆವೃತ್ತಿ ಜಾರಿಯೊಂದಿಗೆ ಚಂದಾದಾರರು ಕಡಿಮೆ ಸಮಯದಲ್ಲಿ ತಮ್ಮ ಕ್ಲೈಮ್ ಸೆಟಲ್ಮೆಂಟ್‌ಗಳನ್ನು ಮಾಡಿಕೊಳ್ಳಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News