EPFO: ಇಪಿಎಫ್ಒ ಪಿಎಫ್ ಹಿಂಪಡೆಯುವಿಕೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದರಿಂದಾಗಿ ಈಗ ಇಪಿಎಫ್ಒದಿಂದ ಹಣ ಹಿಂಪಡೆಯುವುದು ಈಗ ತುಂಬಾ ಸುಲಭವಾಗಿದೆ.

Big Change In EPFO: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ - ಇಪಿಎಫ್ಒನಿಂದ ಈಗ ಭವಿಷ್ಯ ನಿಧಿ ಎಂದರೆ ಪಿಎಫ್ ವಿತ್ ಡ್ರಾ ಮಾಡುವುದು ತುಂಬಾ ಸುಲಭವಾಗಿದೆ. ಈ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡಿರುವ ಇಪಿಎಫ್ಒ ಆನ್ಲೈನ್ನಲ್ಲಿ ಪಿಎಫ್ ಹಿಂಪಡೆಯುವಾಗ ಈಗ ಕ್ಯಾನ್ಸಲ್ ಚೆಕ್ ನೀಡಬೇಕಿಲ್ಲ ಅಥವಾ ಕಂಪನಿ/ಉದ್ಯೋಗದಾತರಿಂದ ಅನುಮೋದನೆ ಪಡೆಯುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಪಿಎಫ್ ವಿತ್ ಡ್ರಾ ಮಾಡುವ ನಿಯಮದಲ್ಲಿ ಏನೆಲ್ಲಾ ಬದಲಾವಣೆ ಮಾಡಲಾಗಿದೆ?
* ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಕ್ಯಾನ್ಸಲ್ ಚೆಕ್ ಅಥವಾ ಪಾಸ್ಬುಕ್ ಫೋಟೋ ಅಪ್ಲೋಡ್ ಮಾಡುವ ಅಗತ್ಯವಿಲ್ಲ.
* ಪಿಎಫ್ ಚಂದಾದಾರರ ಬ್ಯಾಂಕ್ ಖಾತೆ ಪರಿಶೀಲನೆಗೆ ಕಂಪನಿಯ ಅನುಮೋದನೆ ಬೇಕಿಲ್ಲ.
* ಇಪಿಎಫ್ಒ ಚಂದಾದಾರರು ಒಂದೊಮ್ಮೆ ಬ್ಯಾಂಕ್ ಖಾತೆ ಬದಲಾಯಿಸಲು ಬಯಸಿದರೆ ಆಧಾರ್ ಒಟಿಪಿ ಸಹಾಯದಿಂದ ಆನ್ಲೈನ್ನಲ್ಲಿ ಸ್ವತಃ ತಾವೇ ಹೊಸ ಖಾತೆಯನ್ನು ಸೇರಿಸಬಹುದು.
ಇಪಿಎಫ್ಒದ ಈ ನಿರ್ಧಾರ ಯಾರಿಗೆ ಲಾಭದಾಯಕ?
ಇಪಿಎಫ್ಒದ ಈ ನಿರ್ಧಾರದಿಂದ ಕೋಟ್ಯಾಂತರ ಚಂದಾದಾರಿಗೆ ಪ್ರಯೋಜನವಾಗಲಿದೆ. ವಾಸ್ತವವಾಗಿ, ಇಪಿಎಫ್ಒ ಸದ್ಯ ಸುಮಾರು 7.74ಕೋಟಿ ಚಂದಾದಾರರನ್ನು ಹೊಂದಿದೆ. ಅವರಲ್ಲಿ 4.83 ಕೋಟಿ ಜನರ ಬ್ಯಾಂಕ್ ಖಾತೆ ಯುಎಎನ್ಗೆ ಲಿಂಕ್ ಆಗಿದೆ. ಉದ್ಯೋಗದಾತಾರ ಅನುಮೋದನೆ ಸಿಗದೆ ಸುಮಾರು 15 ಲಕ್ಷ ಜನರ ಪಿಎಫ್ ಕ್ಲೈಮ್ ಕ್ಲಿಯರ್ ಆಗಿಲ್ಲ. ಇಪಿಎಫ್ಒದ ಈ ಹೊಸ ಹೆಜ್ಜೆಯಿಂದಾಗಿ ಈ ಇವರೆಲ್ಲರಿಗೂ ಪ್ರಯೋಜನಕಾರಿ ಆಗಲಿದೆ.
ಇಪಿಎಫ್ಒ ನಿರ್ಧಾರದಿಂದ ಏನು ಪ್ರಯೋಜನ?
ಇನ್ಮುಂದೆ ಪಿಎಫ್ ವಿತ್ ಡ್ರಾ ಮಾಡಲು ಕ್ಯಾನ್ಸಲ್ ಚೆಕ್, ಉದ್ಯೋಗದಾತಾರ ಅನುಮೋದನೆ ಅವಶ್ಯಕತೆ ಇಲ್ಲ ಎಂಬ ಇಪಿಎಫ್ಒ ನಿರ್ಧಾರದಿಂದ ಪಿಎಫ್ ಚಂದಾದಾರರಿಗೆ ಹಲವು ಪ್ರಯೋಜನಗಳಿವೆ. ಅದರಲ್ಲಿ ಪ್ರಮುಖ ಪ್ರಯೋಜನಗಳೆಂದರೆ...
* ಪಿಎಫ್ ವಿತ್ ಡ್ರಾ ಈಗ ತುಂಬಾ ಸರಳ ಮತ್ತು ಸುಲಭವಾಗಿದೆ.
* ಹೆಚ್ಚು ದಾಖಲೆಗಳನ್ನು ಅಪ್ಲೋಡ್ ಮಾಡುವ ಅಗತ್ಯವಿರುವುದಿಲ್ಲ.
* ಪಿಎಫ್ ಚಂದಾದಾರರು ಕೆಲವೇ ಕೆಲವು ಹಂತಗಳನ್ನು ಅನುಸರಿಸಿ ಆನ್ಲೈನ್ನಲ್ಲಿ ಸುಲಭವಾಗಿ ಕ್ಲೈಮ್ ಮಾಡಬಹುದು.
* ಪಿಎಫ್ ವಿತ್ ಡ್ರಾ ಕ್ಲೈಮ್ ಮಾಡಿದ ಒಂದೆರಡು ದಿನಗಳಲ್ಲಿ ಹಣ ಖಾತೆ ಸೇರುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.