EPFO Update: ನೀವು ಸಂಘಟಿತ ವಲಯದ ಉದ್ಯೋಗಿ ಆಗಿದ್ದು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಖಾತೆ ಹೊಂದಿದ್ದರೆ ಇಪಿಎಫ್ ಖಾತೆಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಯುಎಎನ್ ಸಕ್ರಿಯವಾಗಿರುವುದು ತುಂಬಾ ಅಗತ್ಯವಾಗಿದೆ. ಇಲ್ಲದಿದ್ದರೆ, ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದರಿಂದ ಹಿಡಿದು ಯಾವುದೇ ಸಣ್ಣ ಕೆಲಸವೂ ಸಾಧ್ಯವಾಗುವುದಿಲ್ಲ. ಇದೀಗ ಇಪಿಎಫ್‌ಒ ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ. ಈಗ ನೀವು ಹಿಂದಿನ ವಿಧಾನವನ್ನು ಬಳಸಿ ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸಲು ಸಾಧ್ಯವಾಗುವುದಿಲ್ಲ.
ವಾಸ್ತವವಾಗಿ, ಇಪಿಎಫ್ಒ ನಿಯಮಗಳ ಪ್ರಕಾರ, ಉದ್ಯೋಗಿಗಳ ಸಂಬಳದಿಂದ ಪಿಎಫ್ ಅನ್ನು ಕಡಿತಗೊಳಿಸಲಾಗುತ್ತದೆ. ಪ್ರತಿ ತಿಂಗಳು ಉದ್ಯೋಗಿಗಳ ಸಂಬಳದಿಂದ ನಿಗದಿತ ಮೊತ್ತವನ್ನು ಭವಿಷ್ಯ ನಿಧಿಗಾಗಿ ಹಣವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಕಂಪನಿಯು ಕೂಡ ಪಿಎಫ್ ಖಾತೆಗಳಿಗೆ ತನ್ನ ಕೊಡುಗೆಯನ್ನು ಜಮಾ ಮಾಡಬೇಕಾಗುತ್ತದೆ. ಈ ಮೊತ್ತವು ವಾರ್ಷಿಕ ಬಡ್ಡಿಯನ್ನು ಸಹ ಗಳಿಸುತ್ತದೆ. ನೀವು ಹೊಸದಾಗಿ ಕೆಲಸಕ್ಕೆ ಸೇರಿದ್ದರೆ ಅಥವಾ ಈಗಾಗಲೇ ಪಿಎಫ್ ಖಾತೆಯನ್ನು ಹೊಂದಿದ್ದರೆ, ನೀವು ಪಿಎಫ್ ಸಂಖ್ಯೆ ಮತ್ತು ಯುಎಎನ್ ಸಂಖ್ಯೆಯನ್ನು ಪಡೆದಿರಬಹುದು. ಯುಎಎನ್ ಸಂಖ್ಯೆಯು ನಿಮ್ಮ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯುವುದು, ನಿಮ್ಮ ಪಾಸ್‌ಬುಕ್ ಅನ್ನು ಪರಿಶೀಲಿಸುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ತುಂಬಾ ಅಗತ್ಯ. ಆದಾಗ್ಯೂ, ಪಿಎಫ್ ಸಂಬಂಧಿಸಿದ ಯಾವುದೇ ಕೆಲಸ ಮಾಡಲು ನಿಮ್ಮ ಯುಎಎನ್ ಸಂಖ್ಯೆ ಸಕ್ರಿಯವಾಗಿರಬೇಕು. ಆದರೆ ನಿಮ್ಮ ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸುವ ಪ್ರಕ್ರಿಯೆಯು ಬದಲಾಗಿದೆ. ಹಿಂದಿನ ವಿಧಾನದಲ್ಲಿ ಯಾವ ರೀತಿ ಯುಎಎನ್ ಸಕ್ರಿಯಗೊಳಿಸಲಾಗುತ್ತಿತ್ತು? ಹೊಸದಾಗಿ ಜಾರಿಗೊಳಿಸಿರುವ ವಿಧಾನ ಯಾವುದು? ಎಂಬಿತ್ಯಾದಿ ಮಾಹಿತಿಗಾಗಿ ಮುಂದೆ ಓದಿ...
ಯುಎಎನ್ ಸಕ್ರಿಯಗೊಳಿಸಲು ಹಿಂದಿನ ವಿಧಾನ:
ಈ ಮೊದಲು ಇಪಿಎಫ್ಒ ನಿಯಮದಡಿ, ಮೊದಲು ಇಪಿಎಫ್‌ಒ ಅಧಿಕೃತ ವೆಬ್‌ಸೈಟ್ https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಿ. 'UAN ಸಕ್ರಿಯಗೊಳಿಸಿ' ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸಬಹುದಾಗಿತ್ತು. ಆದರೆ, ಇನ್ನುಮುಂದೆ ಇದರ ಬದಲಿಗೆ ಇನ್ನೂ ಸುಲಭವಾಗಿ ಯುಎಎನ್ ಸಕ್ರಿಯಗೊಳಿಸಬಹುದು.
ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸಲು ಹೊಸ ಮಾರ್ಗ:-
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO 3.0) ಜಾರಿಮಾಡಿರುವ ಹೊಸ ವಿಧಾನದಲ್ಲಿ ಇಪಿಎಫ್ಒದ ಅಧಿಕೃತ ವೆಬ್‌ಸೈಟ್ https://unifiedportal-mem.epfindia.gov.in ಗೆ ಭೇಟಿ ನೀಡಬೇಕಿಲ್ಲ. ಇಪಿಎಫ್ಒ ಡಿಜಿಟಲ್ ಆವೃತ್ತಿಯಲ್ಲಿ ಮೂರು ಹಂತಗಳನ್ನು ಅನುಸರಿಸುವ ಮೂಲಕ ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸಬಹುದಾಗಿದೆ.
ಹಂತ-1:
ನಿಮ್ಮ ಮೊಬೈಲ್‌ನಲ್ಲಿ ಉಮಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಆ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಕು.
ಹಂತ-2:
ಮೊಬೈಲ್‌ನಲ್ಲಿ ಉಮಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ಅಳಿಕ ಕೆಲವು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅಪ್ಲಿಕೇಶನ್‌ಗೆ ಲಾಗಿನ್ ಆಗಿ.
ಹಂತ-3:
ಉಮಂಗ್ ಅಪ್ಲಿಕೇಶನ್'ನಲ್ಲಿ ಕಾಣುವ ಯುಎಎನ್ ಸಕ್ರಿಯಗೊಳಿಸಿ ಆಯ್ಕೆಯನ್ನು ಆರಿಸಿ, ಫೇಸ್ ದೃಢೀಕರಣದ ಮೂಲಕ ಯುಎಎನ್ ಸೇವೆಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಯುಎಎನ್ ಸಂಖ್ಯೆಯನ್ನು ಸಕ್ರಿಯಗೊಳಿಸಬಹುದು. ಆ ಬಳಿಕ ನಿಮ್ಮ ಪಿಎಫ್ ಖಾತೆಗೆ ಲಾಗಿನ್ ಆಗಬಹುದಾಗಿದೆ.
ಇದನ್ನೂ ಓದಿ- 8th Pay Commission: ಈ ಉದ್ಯೋಗಿಗಳ ವೇತನ ಹೆಚ್ಚಳಕ್ಕೆ ಕೊಕ್ಕೆ! ಪಿಂಚಣಿದಾರರಿಗೂ ಕಹಿ ಸುದ್ದಿ!
ಇದನ್ನೂ ಓದಿ- EPF ಖಾತೆಯಿಂದ ಹಣ ಹಿಂಪಡೆಯಲು 7 ಹೊಸ ನಿಯಮ ಜಾರಿ: ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ ಫುಲ್ ಡೀಟೇಲ್ಸ್









