EPFO: ನೌಕರರ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಒ ಪಿಂಚಣಿ ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗೆ ಮುಂದಾಗಿದ್ದು ಇದರಿಂದಾಗಿ ಲಕ್ಷಾಂತರ ಮಂದಿ ಇಪಿಎಫ್ ಪಿಂಚಣಿದಾರರಿಗೆ ನೇರ ಲಾಭವಾಗಲಿದೆ.

EPF Pension: ಪಿಂಚಣಿದಾರರಿಗೆ ಅನುಕೂಲವಾಗಲೆಂದು ನೌಕರರ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಒ ಇಪಿಎಫ್ ಪಿಂಚಣಿಯಲ್ಲಿ ಮಹತ್ವದ ಬದಲಾವಣೆ ಕೈಗೊಂಡಿದ್ದು ಪಿಂಚಣಿ ವಿತರಣಾ ವ್ಯವಸ್ಥೆಯನ್ನು ಪರಿಷ್ಕರಿಸಿದೆ. ಇಪಿಎಫ್ಒ ದ ಈ ಕ್ರಮದಿಂದಾಗಿ ಇನ್ಮುಂದೆ ಇಪಿಎಫ್ ಪಿಂಚಣಿ ಮೊತ್ತ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೇ ವರ್ಗಾವಣೆಯಾಗಲಿದ್ದು, ಲಕ್ಷಾಂತರ ಪಿಂಚಣಿದಾರರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ, ಪಿಂಚಣಿದಾರರಿಗೆ ಇದರಿಂದ ಏನು ಲಾಭವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಪಿಎಫ್ ಪಿಂಚಣಿ ವಿತರಣಾ ಪ್ರಕ್ರಿಯೆಯನ್ನು ಸುಗಮಗೊಳಿಸಿರುವ ಇಪಿಎಫ್ಒ, ಇಪಿಎಫ್ ಪಿಂಚಣಿ ಚೌಕಟ್ಟಿನಲ್ಲಿ ಮಧ್ಯವರ್ತಿಗಳ ಉಪಸ್ಥಿತಿಯನ್ನು ತೆಗೆದುಹಾಕುವ ಗುರಿಯನ್ನು ಹೊಂದಿದ್ದು, ಸುರಕ್ಷಿತವಾಗಿ, ವಿಳಂಬವಿಲ್ಲದೆಯೇ ವೇಗವಾಗಿ ಪಿಂಚಣಿದಾರರಿಗೆ ಅವರ ಹಣ ಕೈ ಸೇರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಪಿಂಚಣಿದಾರರಿಗೆ ನೇರವಾಗಿ ಹಣ ಸಂದಾಯ:
ಇಪಿಎಫ್ಒ ಈಗ ಇಪಿಎಫ್ ಪಿಂಚಣಿದಾರರ ಖಾತೆಗೇ ನೇರವಾಗಿ ಹಣ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಇನ್ಮುಂದೆ ಯಾವುದೇ ರೀತಿಯ್ ಬಾಹ್ಯ ಪಾವತಿ ಮಧ್ಯವರ್ತಿಗಳ ಅವಲಂಬನೆ ಇಲ್ಲದೆಯೇ ಸುಗಮವಾಗಿ ಮತ್ತು ವೇಗವಾಗಿ ಪಿಂಚಣಿಯು ಇಪಿಎಫ್ ಚಂದಾದಾರರ ಲಿಂಕ್ಡ್ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗಲಿದೆ.
ವಾಸ್ತವವಾಗಿ, ಹಳೆಯ ಪಿಂಚಣಿ ವಿತರಣಾ ವ್ಯವಸ್ಥೆಯಲ್ಲಿ ಅನಗತ್ಯವಾಗಿ ಏಜೆಂಟ್ಗಳ ಒಳಗೊಳ್ಳುವಿಕೆ ಅಥವಾ ಭೌತಿಕ ಪರಿಶೀಲನೆಗಳು ಸೇರಿದಂತೆ ಹಲವಾರು ಸಮಸ್ಯೆಗಳಿಂದಾಗಿ ಪಿಂಚಣಿದಾರರು ಸರಿಯಾದ ಸಮಯಕ್ಕೆ ಪಿಂಚಣಿಯನ್ನು ಪಡೆಯುತ್ತಿರಲಿಲ್ಲ. ಈ ಬಗ್ಗೆ ಹಲವು ದೂರುಗಳನ್ನು ಸ್ವೀಕರಿಸಿರುವ ಹಿನ್ನಲೆಯಲ್ಲಿ ಈ ಮಹತ್ವದ ಬದಲಾವಣೆಗೆ ಮುಂದಾಗಿರುವ ಇಪಿಎಫ್ಒ, ಇನ್ಮುಂದೆ ಇಪಿಎಫ್ ಪಿಂಚಣಿಯನ್ನು ನೇರ ಬ್ಯಾಂಕ್ ವರ್ಗಾವಣೆ ಮಾದರಿಗೆ ಬದಲಾಯಿಸಲು ನಿರ್ಧರಿಸಿದೆ. ಇಪಿಎಫ್ಒದ ಈ ಮಹತ್ವದ ನಿರ್ಧಾರದಿಂದಾಗಿ ಪಿಂಚಣಿದಾರರು ಸಮಯಕ್ಕೆ ಸರಿಯಾಗಿ ಪಿಂಚಣಿಯನ್ನು ಪಡೆಯುವುದನ್ನು ಇದು ಖಚಿತಪಡಿಸಿಕೊಳ್ಳುತ್ತದೆ.
ಇಪಿಎಫ್ ಪಿಂಚಣಿದಾರರು ಇದರ ಲಾಭ ಪಡೆಯುವುದು ಹೇಗೆ?
ಇಪಿಎಫ್ಒ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ನೇರ ಬ್ಯಾಂಕ್ ವರ್ಗಾವಣೆ ಲಾಭವನ್ನು ಪಡೆಯಲು ಕೆಲವು ನಿಯಮಗಳಿವೆ. ಅವೇನೆಂದರೆ...
* ಪಿಂಚಣಿದಾರರು ತಮ್ಮ ಯುಎಎನ್ ಜೋಗೆಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿರಬೇಕು.
* ಇಪಿಎಫ್ಒ ಪೋರ್ಟಲ್ ಅಥವಾ ಉದ್ಯೋಗದಾತಾರ ಮೂಲಕ ನವೀಕರಿಸಿದ ಬ್ಯಾಂಕ್ ವಿವರಗಳು ಹಾಗೂ ಕೆವೈಸಿ ಪೂರ್ಣಗೊಳಿಸೈರಬೇಕು.
* ಸಕ್ರಿಯ ಬ್ಯಾಂಕ್ ಖಾತೆ, ಯುಎಎನ್ ಜೊತೆಗೆ ಲಿಂಕ್ ಮಾಡಿರಬೇಕು.
ಪಿಂಚಣಿದಾರರು ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಪ್ರತಿ ತಿಂಗಳು ನೇರವಾಗಿ ಖಾತೆಗೆ ಪಿಂಚಣಿ ಜಮೆ ಆಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.