EPFO Lates Update: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಕೋಟ್ಯಾಂತರ ಪಿಂಚಣಿದಾರರಿಗೆ "ಜೀವನ್ ಪ್ರಮಾಣ ಪತ್ರ"ಕ್ಕೆ ಸಂಬಂಧಿಸಿದಂತೆ ಬಿಗ್ ರಿಲೀಫ್ ನೀಡಿದೆ. ಇನ್ಮುಂದೆ ಯಾವುದ ಶುಲ್ಕವಿಲ್ಲದೆ ಉಚಿತವಾಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಅವಕಾಶ ಕಲ್ಪಿಸಿರುವ ಇಪಿಎಫ್ಒ ಈ ಸೇವೆಯನ್ನು ಮನೆಯಲ್ಲಿಯೇ ಪಡೆಯಲು ಅನುವಾಗುವಂತೆ ಹೊಸ ಸೇವೆಯನ್ನು ಆರಂಭಿಸಿದೆ.
ವಾಸ್ತವವಾಗಿ ಈ ಮೊದಲು ಲೈಫ್ ಸರ್ಟಿಫಿಕೇಟ್ ಎಂದರೆ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಪಿಂಚಣಿದಾರರು ನಿಗದಿತ ಶುಲ್ಕವನ್ನು ಪಾವತಿಸಬೇಕಿತ್ತು. ಅಲ್ಲದೆ, ಇದಕ್ಕಾಗಿ, ಬ್ಯಾಂಕುಗಳು ಅಥವಾ ಅಂಚೆ ಕಚೇರಿಗೆ ಅಲೆದಾಡಬೇಕಿತ್ತು. ಇದೀಗ ಈ ಎರಡರಿಂದಲೂ ಪರಿಹಾರ ನೀಡಿರುವ ಇಪಿಎಫ್ಒ ಲೈಫ್ ಸರ್ಟಿಫಿಕೇಟ್ ಅನ್ನು ಆನ್‌ಲೈನ್‌ನಲ್ಲಿಯೇ ಪಡೆದು ಸಲ್ಲಿಸಲು ಹೊಸ ವ್ಯವಸ್ಥೆ ಘೋಷಿಸುವುದರ ಜೊತೆಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಪಾಲುದಾರಿಕೆಯೊಂದಿಗೆ ಅದಕ್ಕಾಗಿ ತಗುಲುವ ವೆಚ್ಚವನ್ನು ಕೂಡ ಸ್ವತಃ ಭರಿಸಲಿದೆ.
ಆನ್‌ಲೈನ್‌ನಲ್ಲಿ ಶುಲ್ಕ ರಹಿತವಾಗಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಒದಗಿಸುವ ಇಪಿಎಫ್ಒದ ಹೊಸ ಸೌಲಭಯವು ದೇಶಾದ್ಯಂತ ಕೋಟ್ಯಾಂತರ ಪಿಂಚಣಿದಾರರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಆನ್‌ಲೈನ್‌ನಲ್ಲಿಯೇ ಈ ಸೇವೆ ಲಭ್ಯವಾಗುವುದರಿಂದ ಪಿಂಚಣಿ ಪಡೆಯುವಂತಹ ಹಿರಿಯ ನಾಗರೀಕರು ಬ್ಯಾಂಕ್ ಅಥವಾ ಕಚೇರಿಗಳಿಗೆ ಭೇಟಿ ನೀಡದೆಯೇ, ಮನೆಯಲ್ಲಿಯೇ ಇದ್ದು ಬಯೋಮೆಟ್ರಿಕ್ ದೃಢೀಕರಣದ ಮೂಲಕ 'ಜೀವನ್ ಪ್ರಮಾಣ ಪತ್ರ' ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ- ಇಡೀ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಹೊಂದಿರುವ ದೇಶ ಯಾವುದು? ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ!
ಆನ್‌ಲೈನ್‌ನಲ್ಲಿ ಜೀವನ್ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡುವುದು ಹೇಗೆ?
ಹಂತ-1:
ನಿಮ್ಮ ಮೊಬೈಲ್/ಲ್ಯಾಪ್‌ಟಾಪ್‌ನಲ್ಲಿ jeevanpramaan.gov.in ಪೋರ್ಟಲ್ ತೆರೆಯಿರಿ, ಇದು ಬಯೋಮೆಟ್ರಿಕ್ ಸಾಧನಕ್ಕೆ ಸಂಪರ್ಕಗೊಂಡಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಹಂತ-2:
ವೆಬ್‌ಸೈಟ್‌ನಲ್ಲಿ ಪ್ರಮಾಣಪತ್ರ ಪಡೆಯಿರಿ ಎಂಬ ಆಯ್ಕೆಯನ್ನು ಆರಿಸಿ, ಬಳಿಕ ನೀವು ಯಾವ ಸಾಧನದಲ್ಲಿ (ಮೊಬೈಲ್/ಪಿಸಿ) ಇದನ್ನು ತೆರೆಯಲು ಬಯಸುತ್ತೀರಿ ಎಂಬ ಆಯ್ಕೆಯನ್ನು ಆರಿಸಿ ಅರ್ಜಿಯನ್ನು ಡೌನ್‌ಲೋಡ್ ಮಾಡಿ.
ಹಂತ-3:
ಅರ್ಜಿ ತೆರೆದ ಬಳಿಕ ಆಧಾರ್ ಮಾಹಿತಿ, ಪಿಪಿಒ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭಾರ್ತಿ ಮಾಡಿ.
ಹಂತ-4:
ನಿಗದಿತ ಜಾಗದಲ್ಲಿ ಕ್ಲಿಕ್ ಮಾಡಿ, ನಿಮ್ಮ ಬಯೋಮೆಟ್ರಿಕ್ ಮಾಹಿತಿ (ಬೆರಳಚ್ಚು ಅಥವಾ ಐರಿಸ್ ಸ್ಕ್ಯಾನ್) ಒದಗಿಸಿ.
ಹಂತ-5:
ಬಯೋಮೆಟ್ರಿಕ್ ಮಾಹಿತಿಯನ್ನು ಯಶಸ್ವಿಯಾಗಿ ದೃಢಪಡಿಸಿದ ಬಳಿಕ ‘Life Certificate Depository’ಯಲ್ಲಿ ನಿಮ್ಮ ಜೀವನ್ ಪ್ರಮಾಣ ಪತ್ರ ಎಂದರೆ ಲೈಫ್ ಸರ್ಟಿಫಿಕೇಟ್ ಅನ್ನು ಸೇವ್ ಮಾಡಲಾಗುತ್ತದೆ.
ಹಂತ-6:
ಈ ರೀತಿಯಾಗಿ ಆನ್‌ಲೈನ್‌ನಲ್ಲಿ ನಿಮ್ಮ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವ್ ಮಾಡಿದ ಬಳಿಕ ಪಿಂಚಣಿ ವಿತರಣಾ ಸಂಸ್ಥೆ (ಬ್ಯಾಂಕ್ ಅಥವಾ ಅಂಚೆ ಕಚೇರಿ) ಅದನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ.
ಇದನ್ನೂ ಓದಿ- ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್: VRS ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ
ಇದೇ ರೀತಿಯಾಗಿ ನೀವು ಭಾರತ ಸರ್ಕಾರಿ ಸೇವೆಗಳಿಗೆ ಡಿಜಿಟಲ್ ಪ್ರವೇಶವನ್ನು ಒದಗಿಸುವ ವೇದಿಕೆಯಾಗಿರುವ ಉಮಾಂಗ್ ಅಪ್ಲಿಕೇಶನ್ ಮೂಲಕವೂ ಡಿಜಿಟಲ್ ಜೀವನ್ ಪ್ರಮಾಣ ಪತ್ರವನ್ನು ರಚಿಸಬಹುದು.









