ಖಾಸಗಿ ವಲಯದ ಉದ್ಯೋಗಿಗಳಿಗೆ ಅಕ್ಷಯ ತೃತೀಯದಲ್ಲಿ ಇಪಿಎಫ್ಒದಿಂದ ಡಬಲ್ ಧಮಾಕ

EPFO: ಅಕ್ಷಯ ತೃತೀಯ ಸಂದರ್ಭದಲ್ಲಿ ಖಾಸಗಿ ವಲಯದ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಡಬಲ್ ಪೇ ಜೊತೆಗೆ ಪಿಂಚಣಿ ವಿಚಾರವಾಗಿಯೂ ಭರ್ಜರಿ ಗುಡ್ ನ್ಯೂಸ್ ನೀಡಿದೆ. 

Written by - Yashaswini V | Last Updated : Apr 30, 2025, 09:16 AM IST
  • ಖಾಸಗಿ ವಲಯದ ಉದ್ಯೋಗಿಗಳಿಗೆ ಬಂಪರ್ ಕೊಡುಗೆ
  • ಡಬಲ್ ಪೇ ಜೊತೆಗೆ ಪಿಂಚಣಿ ಹೆಚ್ಚಳ
  • ಇಪಿಎಫ್ಒದ ಈ ನಿರ್ಧಾರದಿಂದ ಯಾರಿಗೆ ಲಾಭ...
ಖಾಸಗಿ ವಲಯದ ಉದ್ಯೋಗಿಗಳಿಗೆ ಅಕ್ಷಯ ತೃತೀಯದಲ್ಲಿ ಇಪಿಎಫ್ಒದಿಂದ ಡಬಲ್ ಧಮಾಕ

EPFO Latest News: ನೂತನ ವೇತನ ಹಾಗೂ ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ - ಇಪಿಎಫ್ಒ ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಷಯ ತೃತೀಯ ಸಂದರ್ಭದಲ್ಲಿ ಇಪಿಎಫ್ಒ ಕೈಗೊಂಡಿರುವ ಈ ನಿರ್ಧಾರದಿಂದ ಲಕ್ಷಾಂತರ ಉದ್ಯೋಗಿಗಳಿಗೆ ದುಪ್ಪಟ್ಟು ಹಣಕಾಸಿನ ಪ್ರಯೋಜನ ಲಭ್ಯವಾಗಲಿದ್ದು ಇದೊಂದು ರೀತಿ ಡಬಲ್ ಧಮಾಕ ಎಂತಲೇ ಹೇಳಬಹುದು. 

Add Zee News as a Preferred Source

ವಾಸ್ತವವಾಗಿ, ನೌಕರರ ಪಿಂಚಣಿ ಯೋಜನೆ ಎಂದರೆ ಇಪಿಎಸ್ ಹಾಗೂ ನೌಕರರ  ಭವಿಷ್ಯ ನಿಧಿ- ಇಪಿ‌ಎಫ್ ಯೋಜನೆಗಳ ಅಡಿಯಲ್ಲಿ ಪ್ರತಿ ಉದ್ಯೋಗಿಗೂ ಸಾಮಾಜಿಕ ಭದ್ರತೆಯನ್ನು ಮೇಲ್ದರ್ಜೆಗೇರಿಸುವುದು ಹಾಗೂ ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ನಿವೃತ್ತಿಯ ನಂತರ ಪ್ರಯೋಜನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಪಿಎಫ್ಒ ಮಹತ್ವದ ನಿರ್ಧಾರ ಕಓಗೊಂಡಿದೆ. 

ಇಪಿಎಫ್ಒ ಪಿಂಚಣಿ ಪಾವತಿಯಲ್ಲಿ ಹೆಚ್ಚಳದ ಜೊತೆಗೆ ಇದು ಟೇಕ್ ಹೋಂ ವೇತನವನ್ನು ಭವಿಷ್ಯದ ಪಿಂಚಣಿ ಮೊತ್ತದೊಂದಿಗೆ ದ್ವಿಗುಣಗೊಳಿಸಲು ಅನುವು ಮಾಡಿಕೊಡುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿವೃತ್ತಿಯ ನಂತರ ಉತ್ತಮ ಭದ್ರತೆಯನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. 

ಇದನ್ನೂ ಓದಿ- ಮೋದಿ ಸರ್ಕಾರದ ಮಹತ್ವದ ನಿರ್ಧಾರ: ಲಕ್ಷಾಂತರ ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಬಂಪರ್

ಇನ್ನೂ ಇಪಿಎಫ್ಒದ ಈ ನಿರ್ಧಾರದಿಂದ ಖಾಸಗಿ ವಲಯದ ಉದ್ಯೋಗಿಗಳಿಗೆ  ಉದ್ಯೋಗದಾತರು ಮತ್ತು ಉದೋಗಿಗಳಿಂದ ಹೆಚ್ಚಿನ ಇಪಿಎಫ್ ಕೊಡುಗೆಗಳು ನಿವೃತ್ತಿಯ ಸಮಯದಲ್ಲಿ ದೊಡ್ಡ ನಿಧಿಯನ್ನು ಕಲೆಹಾಕಲು ಸಾಧ್ಯವಾಗುತ್ತದೆ. ಇತ್ತೀಚೆಗಷ್ಟೇ ₹7,500ಕ್ಕೆ ಏರಿಕೆಯಾಗಿರುವ ಕನಿಷ್ಠ ಮಾಸಿಕ ಪಿಂಚಣಿ ಮೊತ್ತವು ಇನ್ನೂ ಹೆಚ್ಚಾಗಲಿದೆ. 

ದುಡಿಯುವ ಸಮಯದಲ್ಲಿ ಪಿಎಫ್‌ಗೆ ಹೆಚ್ಚಿನ ಕೊಡುಗೆ ನೀಡುವ ಉದ್ಯೋಗಿಗಳು ನಿವೃತ್ತಿ ವೇಳೆಗೆ ಉತ್ತಮ ಲಾಭ ಮತ್ತು ಒಂದು ದೊಡ್ಡ ಮೊತ್ತವನ್ನು ಕೂಡಿಡಲು ಸಾಧ್ಯವಾಗುತ್ತದೆ. ಇದಲ್ಲದೆ, ಹೆಚ್ಚಿನ ಪಿಂಚಣಿ ಕೊಡುಗೆ ಆಯ್ಕೆಯೂ ಸ್ವಯಂಪ್ರೇರಿತವಾಗಿರುವುದರಿಂದ ಇದು ಉದ್ಯೋಗಿಗಳ ನಿರ್ಧಾರವೇ ಆಗಿರುತ್ತದೆ. ಇದರಲ್ಲಿ ಯಾವುದೇ ಹೇರಿಕೆ ಇರುವುದಿಲ್ಲ. 

ಇದನ್ನೂ ಓದಿ- EPFO: ಪಿಂಚಣಿಯಲ್ಲಿ ಭಾರೀ ಹೆಚ್ಚಳ: ಯಾರಿಗೆಲ್ಲಾ ಜಾಕ್‌ಪಾಟ್‌..!

ಇಪಿಎಫ್ಒ ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ನೌಕರರ ಭವಿಷ್ಯ ನಿಧಿ ಸಂಸ್ಥೆಯು ಈ ಬದಲಾವಣೆಗಳನ್ನು ಹಂತ-ಹಂತವಾಗಿ ಪರಿಚಯಿಸಲು ತಯಾರಿ ನಡೆಸಿದೆ. ನೌಕರರು ಹೆಚ್ಚಿನ ಪಿಂಚಣಿ ಕೊಡುಗೆಗಳನ್ನು ನೀಡಲು ನಿಖರವಾದ ಅರ್ಹತಾ ಮಾನದಂಡಗಳು ಮತ್ತು ಕೆಲವು ಶರತ್ತುಗಳನು ವ್ಯಾಖ್ಯಾನಿಸಲಾಗುತ್ತದೆ. ಇಪಿಎಫ್ಒದ ಈ ನಿರ್ಧಾರವೂ ಖಾಸಗಿ ವಲಯದ ಉದ್ಯೋಗಿಗಳಿಗೆ ಸಮಾನ ಸಾಮಾಜಿಕ ಭದ್ರತೆಯನ್ನು ಒದಗಿಸುವ ಬದ್ದತೆಯನ್ನು ಪುನರುಚ್ಚರಿಸುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News