EPFO Latest News: ನೌಕರರ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಒ ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್‌ನೊಂದಿಗೆ ಶೀಘ್ರದಲ್ಲೇ ಇಪಿಎಫ್ಒ 3.0 ಆರಂಭಿಸಲಿದೆ ಎಂಬ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದೀಗ, ಅಕ್ಟೋಬರ್ 10, 11ರಂದು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಮಹತ್ವದ ಸಭೆ ನಡೆಯಲಿದ್ದು, ಇಪಿಎಫ್‌ಗೆ ಸಂಬಂಧಿಸಿದ ಇಪಿಎಫ್ಒ 3.0 ಬಿಡುಗಡೆ, ಎಟಿಎಂ ಅಥವಾ ಯುಪಿಐ ಮೂಲಕ ಪಿಎಫ್ ಹಣ ವಿತ್ ಡ್ರಾ, ಪಿಂಚಣಿ ಹೆಚ್ಚಳ, ವಿಮಾ ರಕ್ಷಣೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ದೀಪಾವಳಿ ಹಬ್ಬಕ್ಕೂ ಮೊದಲು ಇಪಿಎಫ್ಒದ ಪ್ರಮುಖ ನಿರ್ಧಾರಗಳು ದೇಶಾದ್ಯಂತ ಕೋಟ್ಯಾಂತರ ಪಿಎಫ್ ಚಂದಾದಾರರ ಮೇಲೆ ನೇರ ಪರಿಣಾಮ ಬೀರಲಿದೆ.
ದೀಪಾವಳಿ ಹಬ್ಬಕ್ಕೂ ಮೊದಲು ಇಪಿಎಫ್ಒ ಪ್ರಮುಖ ನಿರ್ಧಾರಗಳು!
EPFO 3.0 ಬಿಡುಗಡೆ:
ಡಿಜಿಟಲ್ ಯುಗದಲ್ಲಿ ಉದ್ಯೋಗಿಗಳ ಪಿಎಫ್, ಪಿಂಚಣಿ ಮತ್ತು ವಿಮೆಯನ್ನು ನಿರ್ವಹಿಸುವ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇಪಿಎಫ್ ಚಂದಾದಾರರಿಗೆ ನೈಜ ಸಮಯದಲ್ಲಿ ಪಿಎಫ್ ಖಾತೆ ಸಂಬಂಧಿತ ಮಾಹಿತಿ, ಕ್ಲೈಮ್ ಸ್ಥಿತಿಗತಿಯನ್ನು ವೀಕ್ಷಿಸಲು ಸಹಾಯಕವಾಗುವಂತೆ ಶೀಘ್ರದಲ್ಲೇ ಇಪಿಎಫ್ಒ 3.0ಅನ್ನು ಬಿಡುಗಡೆ ಮಾಡುವ ದಿನಾಂಕದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಬಹುದು.
ಇದನ್ನೂ ಓದಿ- ಸರ್ಕಾರಿ ನೌಕರರಿಗೆ ದೀಪಾವಳಿ ಜಾಕ್‌ಪಾಟ್: ನಗದು ರೂಪದಲ್ಲಿ ಕೈ ಸೇರಲಿದೆ 3% ತುಟ್ಟಿಭತ್ಯೆ!
ಕನಿಷ್ಠ ಪಿಂಚಣಿ ಹೆಚ್ಚಳ:
ಅಕ್ಟೋಬರ್ 10,11ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಪಿಎಫ್‌ಒ ಮಂಡಳಿ ಸಭೆಯಲ್ಲಿ ಇಪಿಎಸ್ (ಉದ್ಯೋಗ ಭವಿಷ್ಯ ನಿಧಿ) ಯೋಜನೆಯಡಿ ಕನಿಷ್ಠ ಪಿಂಚಣಿ ಮೊತ್ತವನ್ನು ಏರಿಕೆ ಮಾಡುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಕನಿಷ್ಠ ಪಿಂಚಣಿಯನ್ನು ಪ್ರಸ್ತುತ ಇರುವ ₹1,000ದಿಂದ ₹1,500 ಅಥವಾ ₹2,500ವರೆಗೆ ಏರಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಇದರಿಡ್ನ ಲಕ್ಷಾಂತರ ಪಿಂಚಣಿದಾರರಿಗೆ ನೇರ ಲಾಭವಾಗಲಿದೆ.
ಎಟಿಎಂ/ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವಿಕೆ:
ಇಪಿಎಫ್ಒ 3.0 ಬಿಡುಗಡೆಯೊಂದಿಗೆ ಇಪಿಎಫ್ ಗ್ರಾಹಕರು ಇನ್ಮುಂದೆ ಎಟಿಎಂ ಅಥವಾ ಯುಪಿಐ ಮೂಲಕವೇ ಪಿಎಫ್ ಹಣವಂನ್ ಕೆಲವೇ ನಿಮಿಷಗಳಲ್ಲಿ ಹಿಂಪಡೆಯಬಹುದಾಗಿದೆ. ಎಟಿಎಂಗಳಲ್ಲಿ ಇಪಿಎಫ್ ಹಣವನ್ನು ಹಿಂಪಡೆಯುವಾಗ ಒಮ್ಮೆಗೆ ಎಷ್ಟು ಭಾಗಶಃ ಮೊತ್ತವನ್ನು ವಿತ್ ಡ್ರಾ ಮಾಡಬಹುದು ಎಂಬ ಬಗ್ಗೆ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಇದು ಲಕ್ಷಾಂತರ ಪಿಎಫ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ಎಂತಲೇ ಹೇಳಬಹುದಾಗಿದೆ.
ಇದನ್ನೂ ಓದಿ- EPFO Rules: ಕೆಲಸ ಬಿಟ್ಟ ಬಳಿಕವೂ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಸಿಗುತ್ತಾ ಬಡ್ಡಿ?
ಇಡಿಎಲ್‌ಐ ವಿಮಾ ರಕ್ಷಣೆ:
ಪ್ರಸ್ತುತ, ಇಡಿಎಲ್‌ಐ ಯೋಜನೆಯ ಅಡಿಯಲ್ಲಿ ಪ್ರತಿ ಇಪಿಎಫ್ ಸದಸ್ಯರು ಕೂಡ ಒಂದೇ ಒಂದು ರೂಪಾಯಿಯನ್ನು ಖರ್ಚು ಮಾಡದೆ ಸುಮಾರು ₹7 ಲಕ್ಷದವರೆಗಿನ ಉಚಿತ ವಿಮಾ ರಕ್ಷಣೆಯನ್ನು ಪಡೆಯುತ್ತಿದ್ದಾರೆ. ಇಪಿಎಫ್‌ಒ 3.0 ಜಾರಿಯೊಂದಿಗೆ ಈ ವಿಮಾ ರಕ್ಷಣೆ ₹10 ಲಕ್ಷದವರೆಗೆ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.









