EPFO: ತಿಂಗಳ ಸಂಬಳದ ಮೇಲೆ ಜೀವನ ಅವಲಂಬನೆಯಾಗಿರುವವರು ತಿಳಿದುಕೊಳ್ಳಲೇಬೇಕು ವಿಷಯ ಇದು. ನಿಮ್ಮ ಸಂಬಳದಿಂದ ಕಡಿತ ಮಾಡುವ PF ಹಣವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹೇಗೆ ನಿಮಗೆ ಲಾಭದ ರೂಪದಲ್ಲಿ ವಾಪಸ್ ನೀಡುತ್ತದೆ ಎನ್ನುವ ವಿಷಯ. ಯಾವ ರೀತಿಯ EPFO ಖಾತೆ ಇದ್ದರೆ ಅಂಥ ಕುಟುಂಬಗಳಿಗೆ 15 ಲಕ್ಷ ರೂ. ಸಿಗುತ್ತೆ ಗೊತ್ತಾ?

EPFO Latest news: ಮನುಷ್ಯನಿಗೆ ಎಷ್ಟೇ ದುಡಿದರೂ ಉಳಿತಾಯ ಎನ್ನುವುದು ಮುಖ್ಯ. ಇದೇ ಕಾರಣಕ್ಕೆ ಸರ್ಕಾರವೇ ನೌಕರರ ಪ್ರತಿ ತಿಂಗಳ ಸಂಬಳ ಹಣದಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಕಡಿತ ಮಾಡಿ (Provident Fund) ಅದನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿ ಠೇವಣಿ ಇಡುವಂತಹ ನಿಯಮವನ್ನು ರೂಪಿಸಿದೆ. ಈ ನಿಯಮದ ಪ್ರಕಾರವಾಗಿ ಪ್ರತಿ ತಿಂಗಳು ಉದ್ಯೋಗಿಯ ಸಂಬಳದ ನಿಗದಿತ ಮೊತ್ತ PF ಖಾತೆಗೆ ಜಮೆಯಾಗುತ್ತಿರುತ್ತದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿ ಜಮಾ ಆಗುವ PF ಹಣಕ್ಕೆ ವಾರ್ಷಿಕ ಬಡ್ಡಿ ನೀಡಲಾಗುತ್ತದೆ. ಅಲ್ಲದೆ ಇದೀಗ 15 ಲಕ್ಷ ರೂಪಾಯಿಗಳನ್ನು ನೀಡಲು ನಿರ್ಧರಿಸಲಾಗಿದೆ. ಇದು ನಿಜಕ್ಕೂ ಎಲ್ಲಾ ಉದ್ಯೋಗಿಗಳು ತಿಳಿದುಕೊಳ್ಳಬೇಕಾದ ವಿಷಯ ಮತ್ತು ಇದು ಎಲ್ಲರಿಗೂ ಸಿಹಿಯಾದ ಸಮಾಚಾರ.
ಹಾಗೆಂದ ಮಾತ್ರಕ್ಕೆ PF ಖಾತೆ ಇರುವ ಎಲ್ಲರಿಗೂ 15 ಲಕ್ಷ ರೂಪಾಯಿಗಳು ಸಿಗುತ್ತವೆ ಎಂದು ಅರ್ಥ ಅಲ್ಲ. ನೌಕರರ ಭವಿಷ್ಯ ನಿಧಿ ಸಂಸ್ಥೆಯ ‘ಮರಣ ಪರಿಹಾರ ನಿಧಿ’ ಯೋಜನೆಯಡಿ ನೀಡುವ ಎಕ್ಸ್-ಗ್ರೇಷಿಯಾ ಮೊತ್ತವನ್ನು ಈಗ 15 ಲಕ್ಷ ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಈವರೆಗೆ ಎಕ್ಸ್-ಗ್ರೇಷಿಯಾ ಮೊತ್ತ ಕೇವಲ 8.8 ಲಕ್ಷ ರೂಪಾಯಿವರೆಗೆ ಇತ್ತು.
ಎಕ್ಸ್-ಗ್ರೇಷಿಯಾ ಮೊತ್ತವನ್ನು 8.8 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿವರೆಗೆ ಹೆಚ್ಚಿಸಿರುವ ಹೊಸ ಯೋಜನೆಯೂ 2025ರ ಏಪ್ರಿಲ್ ತಿಂಗಳಿನಿಂದ ಜಾರಿಗೆ ಬಂದಿದೆ. ಈ ಹೊಸ ನಿಯಮ ಜಾರಿಯಾದ ಬಳಿಕ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿ ಠೇವಣಿ ಹೊಂದಿರುವ ಉದ್ಯೋಗಿಯೂ ಮರಣ ಹೊಂದಿದರೆ ಅವರ ಕುಟುಂಬಗಳಿಗೆ 15 ಲಕ್ಷ ರೂಪಾಯಿ ಸಿಗಲಿದೆ.
ಕೇಂದ್ರ ಮಂಡಳಿಯ ಉದ್ಯೋಗಿಗಳಾಗಿದ್ದು, ಸೇವೆಯ ಸಮಯದಲ್ಲಿ ಸಾವನ್ನಪ್ಪುವ ನೌಕರರ ಕುಟುಂಬ, ಕಾನೂನುಬದ್ಧ ಉತ್ತರಾಧಿಕಾರಿ ಅಥವಾ ನಾಮನಿರ್ದೇಶಿತರಿಗೆ 15 ಲಕ್ಷ ರೂಪಾಯಿಗಳ ಎಕ್ಸ್-ಗ್ರೇಷಿಯಾ ಮೊತ್ತ ದೊರೆಯಲಿದೆ. ಸಿಬ್ಬಂದಿ ಕಲ್ಯಾಣ ನಿಧಿಯಿಂದ ಈ ಹಣವನ್ನು ನೀಡಲಾಗುವುದು. ಸರ್ಕಾರ, ಉದ್ಯೋಗದಾತರು ಮತ್ತು ಉದ್ಯೋಗಿ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.