ನವದೆಹಲಿ: EPFO Latest News - ಎಲ್ಲಾ ವೇತನ ವರ್ಗದ ನೌಕರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ನೌಕರರ ಭವಿಷ್ಯ ನಿಧಿ ಸಂಘಟನೆ (EPFO), ತನ್ನೆಲ್ಲಾ ಚಂದಾದಾರರಿಗೆ ಸಲಹೆಯೊಂದನ್ನು ನೀಡಿದ್ದು, ಇ-ನಾಮಿನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೇಳಿದೆ. ಇದರಿಂದ ನೌಕರರ ಕುಟುಂಬ ಸದಸ್ಯರಿಗೆ ಭಾರಿ ನೆಮ್ಮದಿ ಸಿಗಲಿದೆ. EPFO ಈ ಕುರಿತು ಟ್ವೀಟ್ ವೊಂದನ್ನು ಮಾಡಿ  EPF/EPS ಸದಸ್ಯರಿಗೆ  ಇ-ನಾಮಿನೆಶನ್ ಮಾಡಿಸಲು ಸೂಚಿಸುತ್ತಿದೆ.


COMMERCIAL BREAK
SCROLL TO CONTINUE READING

EPFO e-Nomiation ಅನಿವಾರ್ಯ
EPFO ನಾಮಿನಿ ಮಾಹಿತಿ ನೀಡಲು e-Nomination ಸೇವೆ ಆರಂಭಿಸಿದೆ. ಇದರಲ್ಲಿ ಯಾವ ಚಂದಾದಾರರು ತಮ್ಮ ಖಾತೆಗೆ ನಾಮಿನೆಶನ್ ಒದಗಿಸಿಲ್ಲವೋ ಅವರು ಆನ್ಲೈನ್ ನಲ್ಲಿ ನಾಮಿನಿ ಮಾಹಿತಿ ಒದಗಿಸಬೇಕು. ಇದಾದ ಬಳಿಕ ನಾಮಿನಿಯ ಹೆಸರು, ಹುಟ್ಟಿದ ದಿನಾಂಕವನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ. EPFO ತನ್ನ ಚಂದಾದಾರರಿಗೆ EPF ಖಾತೆದಾರರು ಇ-ನಾಮಿನೇಷನ್ (EPF / EPS ನಾಮಿನೇಷನ್) ಮಾಡಬೇಕು ಎಂದು ಹೇಳಿದೆ. ಇದನ್ನು ಮಾಡುವ ಮೂಲಕ, ಖಾತೆದಾರನ ಮರಣದ ಸಂದರ್ಭದಲ್ಲಿ ಪಿಎಫ್, ಪಿಂಚಣಿ (ಇಪಿಎಸ್) ಮತ್ತು ವಿಮೆ (EDLI) ಗೆ ಸಂಬಂಧಿಸಿದ ಹಣವನ್ನು ಹಿಂಪಡೆಯಲು ಇದು ನಾಮನಿರ್ದೇಶಿತ / ಕುಟುಂಬ ಸದಸ್ಯರಿಗೆ ಸಹಾಯ ಮಾಡುತ್ತದೆ. ಇದರೊಂದಿಗೆ, ನಾಮನಿರ್ದೇಶಿತರು ಆನ್‌ಲೈನ್‌ನಲ್ಲಿ ಕ್ಲೈಮ್ ಮಾಡಬಹುದು.


EPFO ಸದಸ್ಯರಿಗೆ ವಿಮಾ ರಕ್ಷಣೆ ಕೂಡ ಸಿಗುತ್ತದೆ. ಈ ರಕ್ಷಣಾ ಎಂಪ್ಲಾಯಿ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್ ಸ್ಕೀಮ್ (EDLI Insurance cover) ಅಡಿ ಸಿಗುತ್ತದೆ. ಯೋಜನೆಯಲ್ಲಿ, ನಾಮಿನಿಗೆ ಗರಿಷ್ಠ 7 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ನಾಮಿನೆಶನ್ ಒದಗಿಸದಯೇ ಒಂದು ವೇಳೆ ಸದಸ್ಯರು ಮೃತಪಟ್ಟರೆ,ನಂತರ ಕ್ಲೈಮ್ ಪ್ರಕ್ರಿಯೆಗೊಳಿಸುವಲ್ಲಿ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಆನ್‌ಲೈನ್‌ನಲ್ಲಿ ನಾಮನಿರ್ದೇಶನವನ್ನು ಹೇಗೆ ತುಂಬುವುದು ಎಂದು ತಿಳಿಯೋಣ ಬನ್ನಿ.


1. ಇದಕ್ಕಾಗಿ ಮೊದಲು ನೀವು EPFO ಅಧಿಕೃತ ವೆಬ್ ಸೈಟ್ ಆಗಿರುವ https://www.epfindia.gov.in/ ಗೆ ಭೇಟಿ ನೀಡಿ.


2. ಈಗ Services ಸೆಕ್ಷನ್ ನಲ್ಲಿ FOR EMPLOYEES ಮೇಲೆ ಕ್ಲಿಕ್ಕಿಸಿ. ನಂತರ Member UAN/Online Service (OCS/OTCP) ಮೇಲೆ ಕ್ಲಿಕ್ಕಿಸಿ.


ಇದನ್ನೂ ಓದಿ-PF ಖಾತೆದಾರರಿಗೆ ಸಿಹಿ ಸುದ್ದಿ  : ಖಾತೆಗೆ ಶೀಘ್ರದಲ್ಲೇ ಜಮಾ ಆಗಲಿದೆ 8.5% ಬಡ್ಡಿ ಹಣ


3. ಇದೀಗ ನಿಮ್ಮ ಮುಂದೆ ಒಂದು ಹೊಸ ಪುಟ ತೆರೆದುಕೊಳ್ಳಲಿದ್ದು, ಅದರಲ್ಲಿ UAN ಹಾಗೂ Password ನಮೂದಿಸಿ ಲಾಗಿನ್ ಆಗಿ.


4. ಈಗ Manage Tab ಅಡಿ E-Nomination ಆಯ್ಕೆ ಮಾಡಿ. ಹೀಗೆ ಮಾಡುವುದರಿಂದ ಸ್ಕ್ರೀನ್ ಮೇಲೆ Provide Details ಟ್ಯಾಬ್ ತೆರೆದುಕೊಳ್ಳಲಿದ್ದು, Save ಮೇಲೆ ಕ್ಲಿಕ್ಕಿಸಿ.


5. ಈಗ ನಿಮ್ಮ ಕುಟುಂಬವನ್ನು ಘೋಷಿಸಲು Yes ಮೇಲೆ ಕ್ಲಿಕ್ಕಿಸಿ, ಬಳಿಕ Add family details ಮೇಲೆ ಕ್ಲಿಕ್ಕಿಸಿ (ಇಲ್ಲಿ ನೀವು ಒಂದಕ್ಕಿಂತ ಹೆಚ್ಚು ನಾಮಿನಿ ಘೋಷಿಸಬಹುದು)


ಇದನ್ನೂ ಓದಿ-EPF ಖಾತೆದಾರರು ತಕ್ಷಣ ಈ ಕೆಲಸ ಮಾಡಿ, ಇಲ್ಲವಾದರೆ 7 ಲಕ್ಷ ರೂ ಗಳ ನಷ್ಟವಾಗಬಹುದು


6. ಬಳಿಕ ಒಟ್ಟು ಹಣವನ್ನು ಹಂಚಿಕೆಗಾಗಿ Nomination Details ಮೇಲೆ ಕ್ಲಿಕ್ಕಿಸಿ, ನಂತರ Save EPF Nomination ಮೇಲೆ ಕ್ಲಿಕ್ಕಿಸಿ.


7. ಈಗ OTP ಸಿದ್ಧಪಡಿಸಲು E-sign ಮೇಲೆ ಕ್ಲಿಕ್ಕಿಸಿ. ಈಗ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಮೂದಾಗಿರುವ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದೆ. 


8. ಈ ರೇತಿ ಮಾಡುವುದರಿಂದ ನಿಮ್ಮ ಇ-ನಾಮಿನೆಶನ್ EPFO ಜೊತೆಗೆ ನಮೂದಾಗಲಿದೆ. ಇದಾದ ಬಳಿಕ ನೀವು ಯಾವುದೇ ರೀತಿಯ ಹಾರ್ಡ್ ಕಾಪಿ ಕಳುಹಿಸುವಂತಿಲ್ಲ.


ಇದನ್ನೂ ಓದಿ-EPFO- ಆಧಾರ್ ಲಿಂಕ್ Alert! ಈ ದಿನಾಂಕದ ಒಳಗೆ ಈ ದಾಖಲೆಗಳನ್ನು ಲಿಂಕ್ ಮಾಡಿ! ಹೇಗೆ ಇಲ್ಲಿದೆ ನೋಡಿ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ