)
EPFO Advance Claim: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಲಕ್ಷಾಂತರ EPFO ಸದಸ್ಯರಿಗೆ ಈ ಮೂಲಕ ಸಿಹಿ ಸುದ್ದಿ ನೀಡಿದೆ ಕೇಂದ್ರ ಸರ್ಕಾರ. ಇದರ ಪ್ರಕಾರ PF ಖಾತೆದಾರರು ಯಾವುದೇ ರೀತಿಯ ಮ್ಯಾನ್ಯುವೆಲ್ ವೆರಿಫಿಕೆಶನ್ ಇಲ್ಲದೆ ನೇರವಾಗಿ 5 ಲಕ್ಷ ರೂ.ಗಳವರೆಗಿನ ಅಡ್ವಾನ್ಸ್ ಡ್ ಕ್ಲೈಮ್ ಮಾಡಬಹುದು ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ.
ಪ್ರಸ್ತುತ, ಯಾರಾದರೂ 1 ಲಕ್ಷ ರೂ.ಗಿಂತ ಹೆಚ್ಚು ಹಣ ಹಿಂಪಡೆಯಬೇಕಾದರೆ, ಅವರು ಇಪಿಎಫ್ಒ ಕಚೇರಿಗೆ ಹೋಗಿ ಮ್ಯಾನ್ಯುವೆಲ್ ವೆರಿಫಿಕೆಶನ್ ಮಾಡಿಸಿಕೊಳ್ಳಬೇಕಾಗಿತ್ತು. ಈ ಪ್ರಕ್ರಿಯೆ ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಸರ್ಕಾರದ ಈ ನಿರ್ಧಾರದ ನಂತರ, ಈಗ ಇಪಿಎಫ್ ಸದಸ್ಯರು ತುರ್ತು ಸಂದರ್ಭಗಳಲ್ಲಿ ಅಥವಾ ಅಗತ್ಯವಿದ್ದಾಗ 5 ಲಕ್ಷ ರೂ.ಗಳವರೆಗೆ ಹಣ ಹಿಂಪಡೆಯುವುದು ಸಾಧ್ಯವಾಗುತ್ತದೆ.
ಮೇ 2024 ರಲ್ಲಿ ಈ ಮಿತಿಯಲ್ಲಿ ಹೆಚ್ಚಳ :
ಮಾರ್ಚ್ 2025 ರಲ್ಲಿ, ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಕಾರ್ಯಕಾರಿ ಸಮಿತಿ (EC) ಸ್ವಯಂ-ಇತ್ಯರ್ಥ ಮಿತಿಯನ್ನು (ASAC) 5 ಲಕ್ಷ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿತು. 2024ರ ಮೇ ತಿಂಗಳಲ್ಲಿ, ಈ ಮಿತಿಯನ್ನು 50,000 ರೂ.ಗಳಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಲಾಯಿತು.
ಇಪಿಎಫ್ಒದ ಈ ನಿರ್ಧಾರದ ನಂತರ, ಆಟೋ-ಸೆಟಲ್ಮೆಂಟ್ ಕ್ಲೈಮ್ಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. 2023-24ರ ಹಣಕಾಸು ವರ್ಷದಲ್ಲಿ, ಸುಮಾರು 90 ಲಕ್ಷ ಜನರು ಆಟೋ-ಸೆಟಲ್ಮೆಂಟ್ ಅನ್ನು ಕ್ಲೈಮ್ ಮಾಡಿದ್ದರು. ಅದೇ ಸಮಯದಲ್ಲಿ, 2024-25ರ ಹಣಕಾಸು ವರ್ಷದಲ್ಲಿ, ಈ ಸಂಖ್ಯೆ ಸುಮಾರು 2 ಕೋಟಿಗೆ ಏರಿತು.
ಆಟೋ-ಸೆಟಲ್ಮೆಂಟ್ ಸೌಲಭ್ಯದಡಿಯಲ್ಲಿ, ಇಪಿಎಫ್ಒ ಸದಸ್ಯರು ಅನಾರೋಗ್ಯದ ಚಿಕಿತ್ಸೆ, ಮಕ್ಕಳ ಶಿಕ್ಷಣ, ಮದುವೆ ಅಥವಾ ಕಟ್ಟಡ ನಿರ್ಮಾಣ ಅಥವಾ ಮನೆ ಖರೀದಿಯಂತಹ ಪ್ರಮುಖ ಕೆಲಸಗಳಿಗಾಗಿ ಮುಂಗಡವಾಗಿ 5 ಲಕ್ಷ ರೂ.ಗಳವರೆಗೆ ಹಿಂಪಡೆಯಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.