ಬಿಗ್ ಅಪ್‌ಡೇಟ್: EPFO ಚಂದಾದಾರರಿಗೆ ಸಿಗಲಿದೆ ಈ ವಿಶೇಷ ಸೌಲಭ್ಯ, ಇಷ್ಟೆಲ್ಲಾ ಪ್ರಯೋಜನ

EPFO: ಇಪಿಎಫ್‌ಓ ಪರಿಚಯಿಸಿರುವ ಈ ಸೌಲಭ್ಯದಿಂದ ಹಿರಿಯ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಅಥವಾ ದೂರದ ಪ್ರದೇಶಗಳಲ್ಲಿರುವ ಡಿಜಿಟಲ್ ಮೂಲಸೌಕರ್ಯ ಲಭ್ಯವಿಲ್ಲದ ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ. 

Written by - Yashaswini V | Last Updated : Apr 12, 2025, 01:38 PM IST
  • ಮುಖ ದೃಢೀಕರಣ ತಂತ್ರಜ್ಞಾನ ವ್ಯಕ್ತಿಯ ಮುಖ ಗುರುತಿಸುವ/ಪರಿಶೀಲಿಸುವ ಪ್ರಕ್ರಿಯೆಯಾಗಿದೆ.
  • ಇದು ವಿಶೇಷವಾಗಿ ಸವೆದ ಬೆರಳಚ್ಚುಗಳಿಂದ ಪಿಂಚಣಿ/ಇತರ ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರೀಕರಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ.
  • ಇದು ಬಯೋಮೆಟ್ರಿಕ್ ಸಾಧನದ ಮುಂದೆ ವ್ಯಕ್ತಿಯ ಉಪಸ್ಥಿತಿಯ ಅನಿವಾರ್ಯತೆಯನ್ನು ತಪ್ಪಿಸಲಿದೆ.
ಬಿಗ್ ಅಪ್‌ಡೇಟ್: EPFO ಚಂದಾದಾರರಿಗೆ ಸಿಗಲಿದೆ ಈ ವಿಶೇಷ ಸೌಲಭ್ಯ, ಇಷ್ಟೆಲ್ಲಾ ಪ್ರಯೋಜನ

EPFO Latest News: ಇಪಿಎಫ್‌ಓದ ಎಲ್ಲಾ ಚಂದಾದಾರರು, ಪಿಂಚಣಿದಾರರಿಗೆ ಎಲ್ಲಾ ರೀತಿಯ ಮೂಲಸೌಕರ್ಯಗಳು ಸುಲಭವಾಗಿ ಲಭ್ಯವಾಗುವಂತಾಗಬೇಕು ಎಂಬ ಉದ್ದೇಶದಿಂದ  ನೌಕರರ ಭವಿಷ್ಯ ನಿಧಿ ಸಂಸ್ಥೆ- ಇಪಿಎಫ್‌ಒ "ಮುಖ ದೃಢೀಕರಣ ತಂತ್ರಜ್ಞಾನ"ವನ್ನು ಪರಿಚಯಿಸಿದೆ. ಇಪಿಎಫ್‌ಒದ ಈ ನಿರ್ಧಾರದಿಂದ ಕೋಟ್ಯಾಂತರ ಸದಸ್ಯರಿಗೆ ಅದರಲ್ಲೂ ವಿಶೇಷವಾಗಿ ದಾಖಲಾತಿ ಸಮಸ್ಯೆ ಅಥವಾ ಬಯೋಮೆಟ್ರಿಕ್ ಹೊಂದಾಣಿಕೆಯಿಲ್ಲದೆ ಅಗತ್ಯ ಸೇವೆಗಳನ್ನು ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿರುವ ಪಿಂಚಣಿದಾರರಿಗೆ ಇದರಿಂದ ಅನುಕೂಲವಾಗಲಿದೆ. 

Add Zee News as a Preferred Source

ಇಪಿಎಫ್‌ಒದ ಮುಖ ದೃಢೀಕರಣ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ? 
ಮುಖ ದೃಢೀಕರಣ ತಂತ್ರಜ್ಞಾನ ವ್ಯಕ್ತಿಯ ಮುಖ ಗುರುತಿಸುವ/ಪರಿಶೀಲಿಸುವ ಪ್ರಕ್ರಿಯೆಯಾಗಿದೆ. ಇದು ವಿಶೇಷವಾಗಿ ಸವೆದ ಬೆರಳಚ್ಚುಗಳಿಂದ ಪಿಂಚಣಿ/ಇತರ ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರೀಕರಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಇದು ಬಯೋಮೆಟ್ರಿಕ್ ಸಾಧನದ ಮುಂದೆ ವ್ಯಕ್ತಿಯ ಉಪಸ್ಥಿತಿಯ ಅನಿವಾರ್ಯತೆಯನ್ನು ತಪ್ಪಿಸಲಿದ್ದು ಸ್ಮಾರ್ಟ್‌ಫೋನ್ ಅಥವಾ ಯಾವುದೇ ಇತರ ಕ್ಯಾಮೆರಾ-ಸಕ್ರಿಯಗೊಳಿಸಿದ ಸಾಧನದ ಮೂಲಕ ಕಾರ್ಯನಿರ್ವಹಿಸುತ್ತದೆ. 

ಇದನ್ನೂ ಓದಿ- ಭತ್ಯೆ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ಮಹತ್ವದ ಘೋಷಣೆ; ಇದಕ್ಕಿಂತ ಸಿಹಿ ಸುದ್ದಿ ಮತ್ತೊಂದಿಲ್ಲ!!

ಇಪಿಎಫ್‌ಒದ ಮುಖ ದೃಢೀಕರಣದ ಮೂಲಕ ಯಾವೆಲ್ಲಾ ಸೇವೆಗಳು ಲಭ್ಯವಿದೆ: 
ಇಪಿಎಫ್‌ಒದ ಮುಖ ದೃಢೀಕರಣದ ಮೂಲಕ ಯಾವೆಲ್ಲಾ ಸೌಲಭ್ಯಗಳನ್ನು ಪಡೆಯಬಹುದು ಎಂಬ ಬಗ್ಗೆಯೂ ನೌಕರರ ಭವಿಷ್ಯ ನಿಧಿ ಸಂಸ್ಥೆ ದೃಢಪಡಿಸಿದೆ. ಅವುಗಳೆಂದರೆ... 
* ಜೀವನ ಪ್ರಮಾಣಪತ್ರ/ಲೈಫ್ ಸರ್ಟಿಫಿಕೇಟ್: 
ಪಿಂಚಣಿದಾರರು ಪಿಂಚಣಿ ಸೌಲಭ್ಯವನ್ನು ಪಡೆಯಲು ಲೈಫ್ ಸರ್ಟಿಫಿಕೇಟ್ ಒದಗಿಸುವುದು ಅತ್ಯಾವಶ್ಯಕ. ಇದೀಗ ಮುಖ ದೃಢೀಕರಣದ ಸೌಲಭ್ಯದ ಮೂಲಕ ಯಾವುದೇ ಬ್ಯಾಂಕ್ ಅಥವಾ ಪಿಂಚಣಿ ಕಚೇರಿಗೆ ಹೋಗದೆಯೇ ಈ ಕೆಲಸ ಸಾಧ್ಯವಾಗುತ್ತದೆ. 

* ಕೆ‌ವೈ‌ಸಿ: 
ಪಿಂಚಣಿದಾರರು ಈಗ ತಮ್ಮ ಕೆ‌ವೈ‌ಸಿ ವಿವರಗಳನ್ನು ನವೀಕರಣಗೊಳಿಸಲು ಮುಖ ಧೃಢೀಕರಣ ಸೌಲಭ್ಯ ಲಾಭದಾಯಕವಾಗಿದೆ. 

* ಪಿಂಚಣಿ ಕ್ಲೈಮ್:
ಇಪಿಎಫ್‌ಒ ಸದಸ್ಯರು ಪಿಂಚಣಿ ಹಿಂಪಡೆಯಲು ಇಲ್ಲವೇ ಪಿಂಚಣಿ ಕ್ಲೈಮ್ ಮಾಡಲು ಸಹ ಈ ಮುಖ ದೃಢೀಕರಣದ ಸೌಲಭ್ಯ ಅನುಕೂಲಕರ ಎಂದು ಸಾಬೀತುಪಡಿಸುತ್ತದೆ. 

* ಟ್ರ್ಯಾಕಿಂಗ್: 
ಇಪಿಎಫ್‌ಒ ಸದಸ್ಯರು  ಪೋರ್ಟಲ್‌ಗೆ ಮುಖ ದೃಢೀಕರಣದ ಮೂಲಕ  ಲಾಗಿನ್ ಆಗಿ ಇಪಿಎಫ್‌ಒ ಕ್ಲೈಮ್ ಸ್ಥಿತಿಯನ್ನು ಸಹ ಪರಿಶೀಲಿಸಬಹುದು. 

ಇದನ್ನೂ ಓದಿ- ಎಲ್ಲರಂಥಲ್ಲ ಆನಂದ್ ಮಹೀಂದ್ರ !313030000000 ಕೋಟಿ ಸಂಪತ್ತಿನ ಒಡೆಯನಾಗಿದ್ದರೂ ಅವರು ನೆಲೆಸಿರುವುದು ಹಳೆಯದಾದ ಈ ಮನೆಯಲ್ಲಿಯೇ !

ಇಪಿಎಫ್‌ಒ ಈ ನಿರ್ಧಾರದಿಂದ ಯಾರಿಗೆ ಲಾಭ? 
ಇಪಿಎಫ್‌ಓ ಪರಿಚಯಿಸಿರುವ ಈ ಸೌಲಭ್ಯದಿಂದ ಹಿರಿಯ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಅಥವಾ ದೂರದ ಪ್ರದೇಶಗಳಲ್ಲಿರುವ ಡಿಜಿಟಲ್ ಮೂಲಸೌಕರ್ಯ ಲಭ್ಯವಿಲ್ಲದ ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ. 

ಇಪಿಎಫ್‌ಒದ ಈ ತಂತ್ರಜ್ಞಾನವನ್ನು ಹೇಗೆ ಬಳಸಬೇಕು?
ಮೊದಲಿಗೆ ಇಪಿಎಫ್‌ಒ ಸದಸ್ಯರು ಯುಐಡಿಎಐಯ 'ಮುಖ ದೃಢೀಕರಣ ಅಪ್ಲಿಕೇಷನ್'ಗೆ ಅನ್ನು ಡೌನ್‌ಲೋಡ್ ಮಾಡಬೇಕು. ನಂತರ ಇಪಿಎಫ್‌ಒ ​​ಪೋರ್ಟಲ್‌ನಲ್ಲಿ ಸಂಯೋಜಿಸಲಾದ ಹಂತಗಳನ್ನು ಬಳಸಿ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು. ಇದರಲ್ಲಿ ಫೇಸ್ ಸ್ಕ್ಯಾನ್ ನಡೆಸಲಾಗಿದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕು. ನಂತರ ಇಪಿಎಫ್‌ಒದ ಮೇಲೆ ತಿಳಿಸಿದ ಎಲ್ಲಾ ಸೇವೆಗಳನ್ನು ಫೇಸ್ ಸ್ಕ್ಯಾನ್ ಮುಖಾಂತರವೇ ಪಡೆಯಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News