ಆಗಸ್ಟ್ 1 ರಿಂದ ಇಪಿಎಫ್‌ಒ ಸದಸ್ಯರಿಗೆ ಸಿಗುವುದು 15,000 ರೂ. : ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಘೋಷಣೆ

ಇಪಿಎಫ್‌ಒದ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್‌ಐ) ಯೋಜನೆ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಇದನ್ನು ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್‌ಗಾರ್ ಯೋಜನೆ ಎಂದು ಕರೆಯಲಾಗುತ್ತದೆ. 

Written by - Ranjitha R K | Last Updated : Jul 28, 2025, 01:50 PM IST
  • ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ
  • ಆಗಸ್ಟ್ 1 ರಿಂದ ಜಾರಿಗೆ ಬರಲಿದೆ ಹೊಸ ಸ್ಕೀಮ್
  • ಇಪಿಎಫ್‌ಒ ಸದಸ್ಯರಿಗೆ ಸಿಗುವುದು 15,000 ರೂ.
ಆಗಸ್ಟ್ 1 ರಿಂದ ಇಪಿಎಫ್‌ಒ ಸದಸ್ಯರಿಗೆ ಸಿಗುವುದು  15,000 ರೂ. : ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಘೋಷಣೆ

ಇಪಿಎಫ್‌ಒ ಸದಸ್ಯರಿಗೆ ಪ್ರಮುಖ ಸುದ್ದಿ. ದೇಶದ ಎಲ್ಲರಿಗೂ ಸಮಗ್ರ ಮತ್ತು ಸುಸ್ಥಿರ ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿಯನ್ನು ಇಟ್ಟುಕೊಂಡು ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಇದರ ಅನ್ವಯ ಇಪಿಎಫ್‌ಒದ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್‌ಐ) ಯೋಜನೆ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಇದನ್ನು ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್‌ಗಾರ್ ಯೋಜನೆ ಎಂದು ಕರೆಯಲಾಗುತ್ತದೆ. 

Add Zee News as a Preferred Source

ಪ್ರಧಾನಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ: 
- ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್‌ಗಾರ್  (PM-VBRY) ಯೋಜನೆಯಡಿ ಮೊದಲ ಬಾರಿಗೆ ಇಪಿಎಫ್‌ಒನಲ್ಲಿ ನೋಂದಾಯಿಸಿಕೊಳ್ಳುವ ಉದ್ಯೋಗಿಗಳಿಗೆ ಆಗಸ್ಟ್ 1ರಿಂದ ಸರ್ಕಾರ 15,000 ರೂ.ಗಳನ್ನು ನೀಡಲಾಗುವುದು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಶುಕ್ರವಾರ ಈ ವಿಚಾರವನ್ನು ತಿಳಿಸಿದೆ. 
- PM-VBRY ಅನ್ನು ಹಿಂದೆ ಉದ್ಯೋಗ-ಸಂಬಂಧಿತ ಪ್ರೋತ್ಸಾಹಕ (ELI) ಯೋಜನೆ ಎಂದು ಕರೆಯಲಾಗುತ್ತಿತ್ತು. 
- ಇದಕ್ಕಾಗಿ 99,446 ಕೋಟಿ ರೂ.ಗಳ ಹಂಚಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಎರಡೆರಡು ಸಿಹಿ ಸುದ್ದಿ: ಶೇ.4 ರಷ್ಟು ಡಿಎ ಹೆಚ್ಚಳ, ಬಾಕಿ ಅರಿಯರ್ಸ್ ಕೂಡಾ ಖಾತೆಗೆ

 2 ಕಂತುಗಳಲ್ಲಿ ಈ ಹಣ ಪಾವತಿ :
"ಇಪಿಎಫ್‌ಒನಲ್ಲಿ ಮೊದಲ ಬಾರಿಗೆ ನೋಂದಾಯಿಸಿಕೊಳ್ಳುವ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು, ಈ ಯೋಜನೆಯಡಿಯಲ್ಲಿ  15,000 ರೂ.ಗಳವರೆಗಿನ ಇಪಿಎಫ್ ವೇತನವನ್ನು ಎರಡು ಕಂತುಗಳಲ್ಲಿ ಪಾವತಿಸಲಾಗುವುದು" ಎಂದು ಸಚಿವಾಲಯ ತಿಳಿಸಿದೆ.

- ಈ ಯೋಜನೆಯಡಿಯಲ್ಲಿ, ಮೊದಲ ಕಂತನ್ನು ಕೆಲಸ ಪ್ರಾರಂಭಿಸಿದ ಆರು ತಿಂಗಳ ನಂತರ ಪಾವತಿಸಲಾಗುತ್ತದೆ. ಎರಡನೇ ಕಂತನ್ನು ಉದ್ಯೋಗಿ 12 ತಿಂಗಳ ಸೇವೆ ಮತ್ತು ಹಣಕಾಸು ಸಾಕ್ಷರತಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಪಾವತಿಸಲಾಗುತ್ತದೆ. 
- ಒಂದು ಲಕ್ಷ ರೂಪಾಯಿಗಳವರೆಗೆ ಸಂಬಳ ಪಡೆಯುವ ಜನರು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. 
- ಇದು ಜನರಲ್ಲಿ ಉಳಿತಾಯದ ಅಭ್ಯಾಸವನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ : ಬರೋಬ್ಬರಿ 90 ಟನ್ ಚಿನ್ನ ಮಾರಾಟ: ಶೀಘ್ರವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ?

ಉಳಿತಾಯ ಯೋಜನೆ : 
"ಪ್ರೋತ್ಸಾಹಕ ಮೊತ್ತದ ಒಂದು ಭಾಗವನ್ನು ಉಳಿತಾಯ ಯೋಜನೆಗಳು ಅಥವಾ ಠೇವಣಿ ಖಾತೆಗಳಲ್ಲಿ ನಿರ್ದಿಷ್ಟ ಅವಧಿಗೆ ಇಡಲಾಗುತ್ತದೆ. ನಂತರ ಅದನ್ನು ಉದ್ಯೋಗಿ ಹಿಂಪಡೆಯಬಹುದು" ಎಂದು ಸಚಿವಾಲಯ ತಿಳಿಸಿದೆ.

- ಈ ಕಾರ್ಯಕ್ರಮವು ಉದ್ಯೋಗದಾತರು/ಕಂಪನಿಗಳು ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಪ್ರೋತ್ಸಾಹಿಸುತ್ತದೆ.
- ಇದು ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಿ, ವಿವಿಧ ವಲಯಗಳಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ. 
- ಉದ್ಯೋಗದಾತರು/ಕಂಪನಿಗಳಿಗೆ, ಈ ಯೋಜನೆಯು ಎಲ್ಲಾ ವಲಯಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯನ್ನು ಒಳಗೊಂಡಿರುತ್ತದೆ.
- ಇದು ಉತ್ಪಾದನಾ ವಲಯದ ಮೇಲೆ ಕೇಂದ್ರೀಕರಿಸುತ್ತದೆ.

ಈ ಉದ್ಯೋಗಿಗಳಿಗೆ ಲಾಭ :
"ಒಂದು ಲಕ್ಷ ರೂ.ವರೆಗೆ ಆದಾಯ ಗಳಿಸುವ ಉದ್ಯೋಗಿಗಳಿಗೆ ಉದ್ಯೋಗದಾತರು/ಕಂಪನಿಗಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತದೆ. ಕನಿಷ್ಠ ಆರು ತಿಂಗಳ ಕಾಲ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಎರಡು ವರ್ಷಗಳವರೆಗೆ ಸರ್ಕಾರವು ಉದ್ಯೋಗದಾತರು/ಕಂಪನಿಗಳಿಗೆ ತಿಂಗಳಿಗೆ 3,000 ರೂ. ವರೆಗೆ ಪ್ರೋತ್ಸಾಹ ಧನ ನೀಡುತ್ತದೆ" ಎಂದು ಸಚಿವಾಲಯ ತಿಳಿಸಿದೆ.
- ಉತ್ಪಾದನಾ ವಲಯಕ್ಕೆ ಪ್ರೋತ್ಸಾಹ ಧನವನ್ನು ಮೂರನೇ ಮತ್ತು ನಾಲ್ಕನೇ ವರ್ಷಗಳಿಗೆ ವಿಸ್ತರಿಸಲಾಗುವುದು. 
- ಈ ಯೋಜನೆಯನ್ನು ಪಡೆಯಲು, ಇಪಿಎಫ್‌ಒದಲ್ಲಿ ನೋಂದಾಯಿಸಲಾದ ಕಂಪನಿಗಳು ಕನಿಷ್ಠ ಆರು ತಿಂಗಳ ಕಾಲ ಕನಿಷ್ಠ ಇಬ್ಬರು ಹೆಚ್ಚುವರಿ ಉದ್ಯೋಗಿಗಳನ್ನು (50 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗೆ) ಅಥವಾ ಐದು ಹೆಚ್ಚುವರಿ ಉದ್ಯೋಗಿಗಳನ್ನು (50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗೆ) ನೇಮಿಸಿಕೊಳ್ಳಬೇಕು.
- ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಿಗೆ ಆಧಾರ್ ಬ್ರಿಡ್ಜ್ ಪೇಮೆಂಟ್ ಸಿಸ್ಟಮ್ (ABPS) ಬಳಸಿಕೊಂಡು DBT (ನೇರ ಪ್ರಯೋಜನ ವರ್ಗಾವಣೆ) ವಿಧಾನದ ಮೂಲಕ ಪಾವತಿ ಮಾಡಲಾಗುತ್ತದೆ ಮತ್ತು ಉದ್ಯೋಗದಾತರು/ಕಂಪನಿಗಳಿಗೆ ಅವರ ಪ್ಯಾನ್-ಲಿಂಕ್ಡ್ ಖಾತೆಗಳಿಗೆ ನೇರವಾಗಿ ಪಾವತಿ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. 
- PM-VBRY ಯೋಜನೆಯು ಎರಡು ವರ್ಷಗಳಲ್ಲಿ ದೇಶದಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಕಾರ್ಯಪಡೆ ನೇಮಕಾತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಅತ್ಯಂತ ಅಗ್ಗದ ಬೆಲೆಗೆ TVS Ntorq 125 ಸೂಪರ್ ಸೋಲ್ಜರ್ ಸ್ಕೂಟರ್‌ ಖರೀದಿಸಿ: ಭಾರೀ ಡಿಸ್ಕೌಂಟ್‌ ಲಭ್ಯ

ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ: 
- ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ.
- ಇದರ ಅಡಿಯಲ್ಲಿ, ಸರ್ಕಾರವು ಆಗಸ್ಟ್ 1 ರಿಂದ ಇಪಿಎಫ್‌ಒದಲ್ಲಿ ನೋಂದಾಯಿಸಲಾದ ಉದ್ಯೋಗಿಗಳಿಗೆ 15,000 ರೂ.ಗಳನ್ನು ಒದಗಿಸುತ್ತದೆ.
- ಒಂದು ಲಕ್ಷ ರೂಪಾಯಿಗಳವರೆಗೆ ಸಂಬಳ ಪಡೆಯುವ ಜನರು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯುತ್ತಾರೆ.
- ಜನರಲ್ಲಿ ಉಳಿತಾಯದ ಅಭ್ಯಾಸವನ್ನು ಬೆಳೆಸುವುದು ಇದರ ಉದ್ದೇಶ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News