)
EPFO Service: ಉದ್ಯೋಗಸ್ಥರಿಗೆ ನಿವೃತ್ತಿ ನಂತರದ ಜೀವನವನ್ನು ಸುಭದ್ರಗೊಳಿಸಲು ನೌಕರರ ಭವಿಷ್ಯ ನಿಧಿ (ಇಪಿಎಫ್) ಒಂದು ಪ್ರಮುಖ ಉಳಿತಾಯದ ಯೋಜನೆಯಾಗಿದೆ. ಭವಿಷ್ಯ ನಿಧಿಯಲ್ಲಿ ಉದ್ಯೋಗಿಗಳು ನೀಡುವ ಕೊಡುಗೆಯೊಂದಿಗೆ ಉದ್ಯೋಗದಾತರೂ ಸಹ ಕೊಡುಗೆ ನೀಡುತ್ತಾರೆ. ಆದರೆ, ಈ ಬಗ್ಗೆ ವಿವರ ಪರಿಶೀಲಿಸುವ ಬಗ್ಗೆ ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಇಪಿಎಫ್ಒ ಸುಲಭ ಮಾರ್ಗವನ್ನು ಪರಿಚಯಿಸಿದೆ.
ವಾಸ್ತವವಾಗಿ, ಇಪಿಎಫ್ ಬ್ಯಾಲೆನ್ಸ್ ಮತ್ತು ಕೊನೆಯ ಕೊಡುಗೆ ವಿವರಗಳನ್ನು ಪರಿಶೀಲಿಸುವುದು ಕ್ಲಿಷ್ಟಕರ, ಜೊತೆಗೆ ಇಂಟರ್ನೆಟ್ ಇಲ್ಲದೆ ಈ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಹುತೇಕ ಪಿಎಫ್ ಚಂದಾದಾರರು ಭಾವಿಸುತ್ತಾರೆ. ಆದರೆ, ಇಂಟರ್ನೆಟ್ ಇಲ್ಲದೆಯೂ ಈ ಕೆಲಸಗಳನ್ನು ಸುಲಭವಾಗಿ ಮಾಡಬಹುದು.
ಕೇವಲ ಕರೆ ಮತ್ತು ಎಸ್ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಮಾಹಿತಿಯನ್ನು ಪರಿಶೀಲಿಸಬಹುದು. ಈ ಎರಡೂ ಸೇವೆಯನ್ನು ಬಳಸಲು ಇಂಟರ್ನೆಟ್ ಅವಶ್ಯಕತೆ ಇರುವುದಿಲ್ಲ. ಈ ಸೇವೆಗಳನ್ನು ಹೇಗೆ ಬಳಸುವುದು ಎಂಬ ವಿವರ ಇಲ್ಲಿದೆ.
ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನ:
ನಿಮ್ಮ UAN (ಯೂನಿವರ್ಸಲ್ ಖಾತೆ ಸಂಖ್ಯೆ) ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಿಂದ 9966044425 ಗೆ ಮಿಸ್ಡ್ ಕಾಲ್ ನೀಡಿ ಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿಯಬಹುದು. ಹೆಸರೇ ಸೂಚಿಸುವಂತೆ ಇದು ಮಿಸ್ಡ್ ಕಾಲ್ ಸರ್ವಿಸ್ ಆಗಿರುವುದರಿಂದ ಎರಡು ರಿಂಗ್ ಆಗುತ್ತಿದ್ದಂತೆಯೇ ಕರೆ ಕಡಿತಗೊಳ್ಳುತ್ತದೆ. ಈ ಕರೆಗೆ ಯಾವುದೇ ಶುಲ್ಕವನ್ನು ಸಹ ವಿಧಿಸುವುದಿಲ್ಲ.
ಎಸ್ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಹಂತ-ಹಂತದ ಪ್ರಕ್ರಿಯೆ:
ಮಿಸ್ಡ್ ಕಾಲ್ ಮಾತ್ರವಲ್ಲದೆ ಎಸ್ಎಂಎಸ್ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಇದರ ಹಂತ-ಹಂತದ ಪ್ರಕ್ರಿಯೆ ಹೀಗಿದೆ...
ಹಂತ 1: ನಿಮ್ಮ ಫೋನ್ನಲ್ಲಿ ಎಸ್ಎಂಎಸ್ ವಿಭಾಗಕ್ಕೆ ಹೋಗಿ.
ಹಂತ 2: ಎಸ್ಎಂಎಸ್ ನಲ್ಲಿ ಸಂದೇಶವನ್ನು ಈ ಕೆಳಗಿನ ಸ್ವರೂಪದಲ್ಲಿ ಬರೆಯಿರಿ: EPFOHO UAN (ಆಂಗ್ಲ ಬಿಟ್ಟು ಬೇರೆ ಭಾಷೆಯಲ್ಲಿ ಬ್ಯಾಲೆನ್ಸ್ ತಿಳಿಯಲು ಬಯಸಿದರೆ ಸಂದೇಶದ ಕೊನೆಯಲ್ಲಿ ಭಾಷೆ ಹೆಸರಿನ ಮೊದಲ ಮೂರು ಅಕ್ಷರಗಳನ್ನು ಸೇರಿಸಿ. ಉದಾಹರಣೆಗೆ: ಕನ್ನಡ ಭಾಷೆಯಲ್ಲಿ ಸಂದೇಶವನ್ನು ಪಡೆಯಲು EPFOHO UAN KAN) ಎಂದು ಟೈಪ್ ಮಾಡಿ.
ಹಂತ 3: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಈ ಸಂದೇಶವನ್ನು 7738299899 ಸಂಖ್ಯೆಗೆ ಕಳುಹಿಸಿ.
ಸಂದೇಶ ಕಳುಹಿಸಿದ ಒಂದೆರಡು ನಿಮಿಷಗಳಲ್ಲಿ ಪೂರ್ವನಿಯೋಜಿತವಾಗಿ ಇಂಗ್ಲಿಷ್ನಲ್ಲಿ ಉತ್ತರ ಸ್ವೀಕರಿಸುತ್ತೀರಿ.
ಈ ರೀತಿಯಾಗಿ ಇಂಟರ್ನೆಟ್ ಇಲ್ಲದೆಯೂ ಸಹ ಎಪಿಎಫ್ಓ ಚಂದಾದಾರರು ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.