ಇಪಿಎಫ್ ಸದಸ್ಯರಿಗೆ ನಿವೃತ್ತಿ ಬಳಿಕ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ...!

EPFO Pension: ತಮ್ಮ ನಿವೃತ್ತಿಯ ಬಳಿಕವೂ ಜೀವನ ಸುಭದ್ರವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿಯೇ ತಮ್ಮ ವೇತನದ ಒಂದು ಭಾಗವನ್ನು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ, ನೀವು ಇಪಿಎಫ್ಒಗೆ ಗರಿಷ್ಠ ಕೊಡುಗೆ ನೀಡಿದರೆ ನಿವೃತ್ತಿಯಲ್ಲಿ ಎಷ್ಟು ಪಿಂಚಣಿ ಪಡೆಯಬಹುದು ಗೊತ್ತಾ... 

Written by - Yashaswini V | Last Updated : Mar 12, 2025, 10:53 AM IST
  • ಇಪಿಎಫ್ಒ ಸದಸ್ಯರು ಗರಿಷ್ಠ 35ವರ್ಷಗಳವರೆಗೆ ಪಿಂಚಣಿಗೆ ಕೊಡುಗೆ ನೀಡಬಹುದಾಗಿದೆ.
  • ನಿವೃತ್ತಿ ಬಳಿಕ ಪಿಂಚಣಿ ನೀಡಲು ಇಪಿಎಫ್ಒ ಉದ್ಯೋಗಿಯ ಕೆಲಸದ ಒಟ್ಟು ಅವಧಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
  • ಹಾಗಾಗಿ ನೀವು ನಿವೃತ್ತಿಯ ನಂತರ ಎಷ್ಟು ಪಿಂಚಣಿ ಪಡೆಯುತ್ತೀರಿ ಎಂಬುದು ಇಪಿಎಫ್ಒ ಸದಸ್ಯರಾಗಿ ನೀವು ಎಷ್ಟು ವರ್ಷ ಕೊಡುಗೆ ನೀಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಇಪಿಎಫ್ ಸದಸ್ಯರಿಗೆ ನಿವೃತ್ತಿ ಬಳಿಕ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ...!

EPFO Pension: ಉದ್ಯೋಗಸ್ಥರು ತಮ್ಮ ವೇತನದ ಒಂದು ಭಾಗವನ್ನು ಪ್ರತಿ ತಿಂಗಳು ಇಪಿ‌ಎಫ್ಒಗೆ ಕೊಡುಗೆ ನೀಡುತ್ತಾರೆ. ನೀವೂ ಉದ್ಯೋಗಸ್ಥರಾಗಿದ್ದರೆ 'ಉದ್ಯೋಗಿ ಪಿಂಚಣಿ ಯೋಜನೆ'ಯಲ್ಲಿ ನಿರಂತರ ಕೊಡುಗೆ ನೀಡಿದರೆ ನಿವೃತ್ತಿ ಬಳಿಕ ಎಷ್ಟು ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತೀರಿ ಎಂಬುದನ್ನು ತಿಳಿದಿರುವುದು ಅಗತ್ಯವಾಗಿದೆ. ಇಪಿಎಫ್ಒ ಪಿಂಚಣಿ ಲೆಕ್ಕಾಚಾರಕ್ಕಾಗಿ ಒಂದು ಸೂತ್ರವನ್ನು ಅನುಸರಿಸುತ್ತದೆ. 

Add Zee News as a Preferred Source

ವಾಸ್ತವವಾಗಿ, ಇಪಿಎಫ್ಒ ಸದಸ್ಯರು ಗರಿಷ್ಠ 35ವರ್ಷಗಳವರೆಗೆ ಪಿಂಚಣಿಗೆ ಕೊಡುಗೆ ನೀಡಬಹುದಾಗಿದೆ. ನಿವೃತ್ತಿ ಬಳಿಕ ಪಿಂಚಣಿ ನೀಡಲು ಇಪಿಎಫ್ಒ ಉದ್ಯೋಗಿಯ ಕೆಲಸದ ಒಟ್ಟು ಅವಧಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಹಾಗಾಗಿ ನೀವು ನಿವೃತ್ತಿಯ ನಂತರ ಎಷ್ಟು ಪಿಂಚಣಿ ಪಡೆಯುತ್ತೀರಿ ಎಂಬುದು ಇಪಿಎಫ್ಒ ಸದಸ್ಯರಾಗಿ ನೀವು ಎಷ್ಟು ವರ್ಷ ಕೊಡುಗೆ ನೀಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 

ಇದನ್ನೂ ಓದಿ- ದುಬೈ ಅಲ್ಲ... ನಮ್ಮ ರಾಜ್ಯದ ಪಕ್ಕದಲ್ಲೇ ಅತಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು..!

ಇಪಿಎಫ್ಒ ಪಿಂಚಣಿ ಲೆಕ್ಕಾಚಾರ: 
ಇಪಿ‌ಎಸ್=ಸರಾಸರಿ ಸಂಬಳ x ಪಿಂಚಣಿ ಸೇವೆ/ 70ರ ಸೂತ್ರದಡಿಯಲ್ಲಿ ಇಪಿಎಫ್ಒ ತನ್ನ ಸದಸ್ಯರಿಗೆ ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಈ ಸೂತ್ರದಲ್ಲಿ ಸರಾಸರಿ ಸಂಬಳವೂ ಮೂಲ ವೇತನ + ಡಿಎ. ಇದನ್ನು ಕಳೆದ 12 ತಿಂಗಳ ಆಧಾರದ ಮೇಲೆ ಲೆಕ್ಕಾಹಾಕಲಾಗುತ್ತದೆ. ಗರಿಷ್ಠ 35ವರ್ಷಗಳ ಸೇವಾವಧಿಯಲ್ಲಿ ಇಪಿಎಫ್ಒ ಸದಸ್ಯರು ಪಿಂಚಣಿಗಾಗಿ ಗರಿಷ್ಠ 15,000 ರೂ. ಕೊಡುಗೆ ನೀಡಬಹುದು.  

ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! EPFO ಹಣವನ್ನು ಈಗ ನಿಮಿಷದಲ್ಲಿ ಪಡೆಯಬಹುದು! ಹೇಗೆ ಗೊತ್ತೇ?  

ಗರಿಷ್ಠ ಪಿಂಚಣಿ ಲೆಕ್ಕಾಚಾರ:
ಇಪಿಎಫ್ಒ ಸದಸ್ಯರು ಒಟ್ಟು 35ವರ್ಷಗಳವರೆಗೆ ಇಪಿಎಫ್ಒಗೆ ಗರಿಷ್ಠ ಕೊಡುಗೆ ನೀಡಿದ್ದರೆ ಇಪಿಎಫ್ ಲೆಕ್ಕಾಚಾರ ಈ ಕೆಳಗಿನಂತಿರುತ್ತದೆ. ಇಪಿಎಸ್= 15000 x 35/70 = ತಿಂಗಳಿಗೆ 7,5000 ರೂ. ಪಿಂಚಣಿ ಪಡೆಯಬಹುದು. ಇದು ಇಪಿಎಸ್‌ನಿಂದ ಲಭ್ಯವಿರುವ ಗರಿಷ್ಠ ಪಿಂಚಣಿ ಆಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News