EPFO News: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಇಪಿಎಸ್-95 (EPS-95) ಯೋಜನೆಯಡಿ ಪಿಂಚಣಿ ಹೆಚ್ಚಳ ಮಾಡಲಿದೆ ಎಂಬ ನಿರೀಕ್ಷೆಗಳ ನಡುವೆ, ಇದೀಗ ಮತ್ತೊಂದು ಹೊಸ ಹೆಜ್ಜೆ ಇಡಲು ಸಜ್ಜಾಗಿದೆ. ಇಪಿಎಫ್‌ಒ ಇಪಿಎಫ್ ಹಾಗೂ ಇಪಿಎಸ್ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ಕೈಗೊಳ್ಳಲು ತಯಾರಿ ನಡೆಸಿದೆ. ಈ ಹೊಸ ವ್ಯವಸ್ಥೆಯು ಕೇಂದ್ರೀಕೃತ ವ್ಯವಸ್ಥೆಯಾಗಿದ್ದು ಈ ಮೂಲಕ ಉದ್ಯೋಗದಾತರು ಮತ್ತು ಇಪಿಎಫ್‌ಒ ಕ್ಷೇತ್ರ ಕಚೇರಿಗಳು ಪ್ರಕ್ರಿಯೆಯನ್ನು ನಿರ್ವಹಿಸುತ್ತವೆ. ಇದರಿಂದ ಉದ್ಯೋಗಿಗಳು ಹಾಗೂ ಪಿಂಚಣಿದಾರರ ದಾಖಲೆಗಳು ನಿಖರವಾಗಿದ್ದಲ್ಲಿ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಲಾಗುತ್ತಿದೆ. ಏನೀ ಹೊಸ ಇಪಿಎಫ್‌ಒ ನಿಯಮ? ಇದರಿಂದ ನೌಕರರಿಗೆ ಏನು ಪ್ರಯೋಜನ? ಪಿಂಚಣಿದಾರರಿಗೆ ಹೇಗೆ ಲಾಭವಾಗಲಿದೆ ಎಂದು ತಿಳಿಯೋಣ.
ಇಪಿಎಸ್-95 ಪಿಂಚಣಿ ಹೆಚ್ಚಳ:
ಇಪಿಎಫ್‌ಒ ಇಪಿಎಸ್-95 ಪಿಂಚಣಿ ನಿಯಮಗಳಲ್ಲಿ ಬರೋಬ್ಬರಿ 11ವರ್ಷಗಳ ಬಳಿಕ ಬದಲಾವಣೆಗೆ ಮುಂದಾಗಿದ್ದು ಇಪಿಎಫ್‌ಒ ಕನಿಷ್ಠ ಪಿಂಚಣಿ ಮೊತ್ತವನ್ನು ತಿಂಗಳಿಗೆ ₹1,000 ರಿಂದ ₹2,500 ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ, ಜೊತೆಗೆ ವೇತನ ಮಿತಿ ಪರಿಷ್ಕರಣೆ ಬಗ್ಗೆಯೂ ಯೋಚಿಸುತ್ತಿದೆ.
ವೇತನ ಮಿತಿ ಪರಿಷ್ಕರಣೆ:
ಇಪಿಎಫ್‌ಒ ಪಿಎಫ್ ವೇತನ ಮಿತಿ ಪರಿಷ್ಕರಣೆ ಬಗ್ಗೆ ಯೋಚಿಸುತ್ತಿರುವುದು ವಿಶೇಷವಾಗಿ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ವೇತನ ಮಿತಿ ಪರಿಷ್ಕರಣೆಯನ್ನು ₹15,000 ರಿಂದ ₹25,000 ವರೆಗೆ ಏರಿಸುವ ಬಗ್ಗೆ ಚಿಂತಿಸಲಾಗುತ್ತಿದ್ದು, ಉದ್ಯೋಗದಾತರ ಕೊಡುಗೆಯ ಹೆಚ್ಚಳವನ್ನು ತಿಂಗಳಿಗೆ ₹1,250 ರಿಂದ ₹2,083 ಏರಿಕೆ ಮಾಡಲು ಸಹ ತಯಾರಿ ನಡೆಸಲಾಗಿದೆ.
ಇದನ್ನೂ ಓದಿ- EPFO ಹೊಸ ನಿಯಮ.. ಪಿಎಫ್ ಖಾತೆ ವರ್ಗಾವಣೆ ಇನ್ಮುಂದೆ ತುಂಬಾ ಸುಲಭ!
ಇಪಿಎಫ್‌ಒ ಡಿಜಿಟಲ್ ಪಿಂಚಣಿ:
ಇದಲ್ಲದೆ, ನೌಕರರ ಭವಿಷ್ಯ ನಿಧಿ ಸಂಸ್ಥೆಯು ಡಿಜಿಟಲ್ ರೂಪದಲ್ಲಿ ಪಿಂಚಣಿ ಪ್ರಕ್ರಿಯೆಗೆ ಯೋಜನೆ ರೂಪಿಸಿದೆ. ಇಪಿಎಫ್‌ಒದ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಮೂಲಕ ಕಾರ್ಯನಿರ್ವಹಿಸುವ ಈ ಇಪಿಎಫ್‌ಒ ಡಿಜಿಟಲ್ ಪಿಂಚಣಿ ವ್ಯವಸ್ಥೆಯ ಮುಖ್ಯ ಉದ್ದೇಶ 6.5 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರ, ವಿಶೇಷವಾಗಿ ಖಾಸಗಿ ವಲಯದ ಕಾರ್ಮಿಕರ ನಿವೃತ್ತಿ ಪ್ರಯೋಜನಗಳನ್ನು ಹೆಚ್ಚಿಸುವುದಾಗಿದೆ.
ನೌಕರರ ಪಿಂಚಣಿ ವಿವರಗಳನ್ನು ಯಾರು ನವೀಕರಿಸುತ್ತಾರೆ?
ನೌಕರರ ಪಿಂಚಣಿ ದಾಖಲೆಗಳನ್ನು ನವೀಕರಿಸುವುದು ಉದ್ಯೋಗದಾತರು ಮತ್ತು ಇಪಿಎಫ್‌ಒ ಕ್ಷೇತ್ರ ಕಚೇರಿಗಳಿಗೆ ಒಂದು ದೊಡ್ಡ ಕೆಲಸವಾಗಿದೆ. ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡುವುದಾದರೆ...
* ಉದ್ಯೋಗದಾತರು ವೇತನ ಮತ್ತು ಕೊಡುಗೆ ಮಾಹಿತಿಯನ್ನು ಇಪಿಎಫ್‌ಒಗೆ ವರದಿ ಮಾಡಬೇಕಾಗುತ್ತದೆ.
* ಇಪಿಎಫ್‌ಒ ಕಚೇರಿಗಳು ಪಿಂಚಣಿ ಬದಲಾವಣೆಗಳನ್ನು ಪರಿಶೀಲಿಸಿ ನಂತರ ಪ್ರಕ್ರಿಯೆಗೊಳಿಸುತ್ತವೆ.
* ಪಿಂಚಣಿದಾರರು ತಮ್ಮ ಕೆವೈಸಿ ನವೀಕರಿಸಲಾಗಿದೆಯೇ? ಆಧಾರ್ ಮತ್ತು ಯುಎಎನ್ ಮಾಹಿತಿಯು ಲಿಂಕ್ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು.
* ವಿಳಂಬ ಮತ್ತು ಹೊಂದಾಣಿಕೆಯನ್ನು ನಿವಾರಿಸಲು, ಇಪಿಎಫ್‌ಒ ಫಾರ್ಮ್ 13 ಮತ್ತು ಫಾರ್ಮ್ 19 ಕಾರ್ಯವಿಧಾನಗಳನ್ನು ಕಡಿಮೆ ಕಷ್ಟಕರವಾಗಿಸಿದೆ.
ಇದನ್ನೂ ಓದಿ- ಪಿಎಫ್ ಹಣ ವಿತ್ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾ... ಇಪಿಎಫ್ಒ ನಿಯಮವೇನು!
ಇಪಿಎಸ್-95 ಹೊಸ ನಿಯಮ ಯಾರಿಗೆ ಹೇಗೆ ಪರಿಣಾಮ ಬೀರುತ್ತದೆ?
ಇಪಿಎಫ್‌ಒ ಇಪಿಎಸ್-95ನಲ್ಲಿ ಜಾರಿಗೆ ತರಲು ಪರಿಷ್ಕರಿಸಲಾಗುತ್ತಿರುವ ಹೊಸ ನಿಯಮವು ಇಪಿಎಸ್-95 ರ ಪಿಂಚಣಿದಾರರು, ವಿಶೇಷವಾಗಿ ಕನಿಷ್ಠ ಪಿಂಚಣಿ ಪಡೆಯುವವರಿಗೆ, ಖಾಸಗಿ ವಲಯಗಳಿಂದ ನಿವೃತ್ತರಾದ ಕಾರ್ಮಿಕರು, ನಿವೃತ್ತಿಯ ಸಮಯದಲ್ಲಿ ಸಾಮಾನ್ಯವಾಗಿ ಬೇರೆ ಯಾವುದೇ ಆದಾಯದ ಮೂಲವನ್ನು ಹೊಂದಿಲ್ಲದವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ, ಇಪಿಎಫ್‌ಒ ಪಿಂಚಣಿಗಳ ಮೇಲೆ ಹಣ ಹೂಡುವ ಸಣ್ಣ ಕೈಗಾರಿಕೆಗಳಲ್ಲಿನ ಕಡಿಮೆ ವೇತನದ ಕಾರ್ಮಿಕರಿಗೆ ಈ ಬದಲಾವಣೆಯು ಹೆಚ್ಚಿನ ಲಾಭವನ್ನು ನೀಡಲಿದೆ.









