EPFO EDLI Scheme Benefits: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಅನುಪಸ್ಥಿತಿಯಲ್ಲಿ ಅವರ ಕುಟುಂಬಕ್ಕೂ ನೆರವಾಗುವ ನಿಟ್ಟಿನಲ್ಲಿ ನೌಕರ ಠೇವಣಿ ಲಿಂಕ್ಡ್ ಇನ್ಶುರೆನ್ಸ್(ಇಡಿಎಲ್ಐ) ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದರ ಮುಖ್ಯವಾದ ಪ್ರಯೋಜನವೆಂದರೆ ಇಪಿಎಫ್ ಚಂದಾದಾರ ಖಾತೆ ಶೂನ್ಯವಗಿದ್ದರೂ ಕೂಡ ಅವರ ಕುಟುಂಬಕ್ಕೆ ₹50,000 ವಿಮಾ ಲಾಭ ದೊರೆಯುತ್ತದೆ. ಏನಿದು ಇಡಿಎಲ್ಐ ಯೋಜನೆ? ಇಪಿಎಫ್ ಚಂದಾದಾರರಿಗೆ ಇದು ಯಾವ ರೀತಿ ಸಹಕಾರಿ ಆಗಿದೆ? ಯಾರು? ಯಾವ ಸಂದರ್ಭದಲ್ಲಿ ಇಡಿಎಲ್ಐ ಪ್ರಯೋಜನವನ್ನು ಪಡೆಯಬಹುದು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಏನಿದು ಇಡಿಎಲ್ಐ ಯೋಜನೆ:
ಇಡಿಎಲ್ಐ ಎಂದರೆ ಉದ್ಯೋಗಿ ಠೇವಣಿ ಲಿಂಕ್ಡ್ ಇನ್ಶುರೆನ್ಸ್. ಇದು ಇಪಿಎಫ್ಒ ಸ್ವತಃ ನಡೆಸುವ ಉಚಿತವಾದ ವಿಮಾ ಯೋಜನೆಯಾಗಿದೆ. ಇಪಿಎಫ್ಒದ ಈ ಯೋಜನೆಯಡಿ ಇಪಿಎಫ್ ಚಂದಾದಾರರು ಸೇವೆಯಲ್ಲಿರುವಾಗಲೇ ಅಕಾಲಿಕ ಮರಣಕ್ಕೆ ತುತ್ತಾದಲ್ಲಿ ಅವರ ನಾಮಿನಿ ಅಥವಾ ಕುಟುಂಬಕ್ಕೆ ಒಂದು ನಿರ್ದಿಷ್ಟ ಮೊತ್ತವನ್ನು ಒದಗಿಸಿ, ಅವರ ಭವಿಷ್ಯಕ್ಕೆ ಒಂದು ರೀತಿಯ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಇಡಿಎಲ್ಐ ಯೋಜನೆ ಪ್ರಯೋಜನ:
ಇಡಿಎಲ್ಐ ಯೋಜನೆಯಲ್ಲಿ ಇಪಿಎಫ್ ಚಂದಾದಾರರಿಗೆ ಸ್ವಯಂಚಾಲಿತವಾಗಿ ₹2.5 ಲಕ್ಷದಿಂದ ₹7 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.
ಇದನ್ನೂ ಓದಿ- EPFO ದೀಪಾವಳಿ ಉಡುಗೊರೆ: ಕೋಟ್ಯಾಂತರ ಪಿಎಫ್ ಚಂದಾದಾರರಿಗೆ ನೇರ ಪ್ರಯೋಜನ
ಇಡಿಎಲ್ಐ ಯೋಜನೆಯಲ್ಲಿ ಸರ್ಕಾರದ ಮಹತ್ವದ ಬದಲಾವಣೆ:
ಇತ್ತೀಚಿಗೆ ಮೋದಿ ಸರ್ಕಾರವು ಇಪಿಎಫ್ಒದ ಇಡಿಎಲ್ಐ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಇಪಿಎಫ್ ಚಂದಾದಾರರು ಮರಣ ಹೊಂದಿದಲ್ಲಿ ಅವರ ಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಕೂಡ ಅವರ ಕುಟುಂಬಕ್ಕೆ ₹50,000 ವಿಮಾ ಪ್ರಯೋಜನವನ್ನು ನೀಡಲಾಗುವುದು ಎಂದು ತಿಳಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸರ್ಕಾರದ ಈ ನಿರ್ಧಾರದ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು, ಇದನ್ನು ಖಚಿತಪಡಿಸಿದೆ.
ಹಿಂದಿನ ನಿಯಮ:
ಗಮನಾರ್ಹವಾಗಿ, ಈ ಮೊದಲು ಇಡಿಎಲ್ಐ ಯೋಜನೆಯಡಿಯಲ್ಲಿ ಇಪಿಎಫ್ ಸದಸ್ಯರ ಕುಟುಂಬವು ಈ ವಿಮಾ ಪ್ರಯೋಜನವನ್ನು ಪಡಯಲು ಪಿಎಫ್ ಖಾತೆಯಲ್ಲಿ ಕನಿಷ್ಠ ₹50,000 ಬ್ಯಾಲೆನ್ಸ್ ಇರಬೇಕೆಂಬ ನಿಯಮವಿತ್ತು. ಆದರೀಗ ಮೋದಿ ಸರ್ಕಾರದಿಂದ ಅನುಷ್ಠಾನಗೊಳಿಸಲಾಗಿರುವ ಹೊಸ ನಿಯಮದಿಂದ ಉದ್ಯೋಗಿಯ ಪಿಎಫ್ ಖಾತೆ ZERO ಆಗಿದ್ರೂ ಸಹ ಅವರ ಕುಟುಂಬಕ್ಕೆ ₹50,000 ವಿಮಾ ಪ್ರಯೋಜನ ಲಭ್ಯವಾಗಲಿದೆ. ನೌಕರರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಇದನ್ನೂ ಓದಿ- EPFO Rules: ಕೆಲಸ ಬಿಟ್ಟ ಬಳಿಕವೂ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಸಿಗುತ್ತಾ ಬಡ್ಡಿ?
ಇಡಿಎಲ್ಐ ಯೋಜನೆಯಿಂದ ಯಾರಿಗೆ ಸಿಗುತ್ತೆ ಪ್ರಯೋಜನ?
ಯಾವುದೇ ವ್ಯಕ್ತಿ ಉದ್ಯೋಗಸ್ಥರಾಗಿದ್ದು ಸೇವೆ ಸಲ್ಲಿಸುತ್ತಿದ್ದರೆ, ಇಲ್ಲವೇ, ಅವರ ಕೊನೆಯ ವೇತನ ಪಡೆದ ಆರು ತಿಂಗಳಿನೊಳಗೆ ಸಾವನ್ನಪ್ಪಿದರೆ ಇಡಿಎಲ್ಐ ಯೋಜನೆ ಅವರ ನಾಮಿನಿಗೆ ₹50,000 ಪರಿಹಾರ ದೊರೆಯುತ್ತದೆ. ಇಪಿಎಫ್ಒದ ಎಲ್ಲಾ ಸದಸ್ಯರಿಗೆ ಈ ಸೌಲಭ್ಯ ಮಾನ್ಯವಾಗಿದ್ದು ನೌಕರರ ಕುಟುಂಬಗಳಿಗೆ ಇದರ ನೇರ ಲಾಭ ದೊರೆಯುತ್ತದೆ.









