)
EPFO News: ಉದ್ಯೋಗಿಗಳ ಜೀವನದಲ್ಲಿ ಪಿಎಫ್ ಎನ್ನುವುದು ಪ್ರಮುಖ ಉಳಿತಾಯ ಮತ್ತು ಒಂದು ಹಂತದಲ್ಲಿ ಬಹಳ ಪ್ರಯೋಜನಕ್ಕೆ ಬರುವ ಹಣ. ಇದೇ ಕಾರಣಕ್ಕೆ ಅಂದರೆ ಸಂಬಳದ ಮೇಲೆ ಅವಲಂಬಿತವಾಗಿರುವ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಉದ್ಯೋಗಿ ಹಾಗು ಕಂಪನಿ/ಸಂಸ್ಥೆಗಳೆರಡರಿಂದಲೂ ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ತೆರೆಯಲಾಗಿರುವ ಪಿಎಫ್ ಖಾತೆಗೆ ಕಂತು ಕಂತುಗಳಲ್ಲಿ ಹಣ ಹಾಕಲಾಗುತ್ತದೆ. ಈ ಹಿಡಿಗಂಟೇ ಮುಂದೆ ಆಪತ್ಕಾಲದ ನಿಧಿಯಾಗುತ್ತದೆ. ಇಂಥ ಪಿಎಫ್ ಹಣಕ್ಕೆ ಪ್ರತಿವರ್ಷ ಬಡ್ಡಿಯನ್ನು ಸಹ ಕೊಡಲಾಗುತ್ತದೆ ಮತ್ತು ಪಿಎಫ್ ನಲ್ಲಿ ಪಿಂಚಣಿ ಯೋಜನೆಯನ್ನೂ ಜಾರಿಗೆ ತರಲಾಗಿದೆ. ಹೀಗೆ ಉದ್ಯೋಗಿಯ ಬದುಕಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಿಎಫ್ ಹಣ ಒಂದೊಮ್ಮೆ ಪತಿ, ಪತ್ನಿಯರ ನಡುವೆ ವೈವಾಹಿಕ ಸಮಸ್ಯೆ ಉಂಟಾಗಿ ಅವರು ವಿಚ್ಛೇದನ ಪಡೆದರೆ ಆಗ ಯಾರಿಗೆ ಹೋಗಬೇಕು ಎನ್ನುವ ಅಂಶವನ್ನು ತಿಳಿದುಕೊಳ್ಳುವುದು ಕೂಡ ಬಹಳ ಮುಖ್ಯ.
ಉದ್ಯಮಿ ತನ್ನ ಹೆಂಡತಿಯನ್ನು ನಾಮಿನಿ ಮಾಡಿ ವಿಚ್ಛೇದನ ಪಡೆದರೆ ಮತ್ತು ಅವನಿಗೆ ಮಕ್ಕಳು ಇಲ್ಲದಿದ್ದರೆ ಅಥವಾ ಆತ ಮರಣ ಹೊಂದಿದರೆ ಪಿಎಫ್ ಹಣ ಪಡೆಯಲು ಹೆಂಡತಿಗೆ ಮೊದಲ ಹಕ್ಕಿರುತ್ತದೆ. ಹಾಗೆಂದರೆ ಹೆಂಡತಿಗೆ ಮಾತ್ರವೇ ಹಕ್ಕು ಎಂದು ಅರ್ಥವಲ್ಲ, ಉದ್ಯೋಗಿಯ ಅವಲಂಬಿತ ಪೋಷಕರಿಗೂ ಕೂಡ ಇದರ ಮೇಲೆ ಹಕ್ಕಿರುತ್ತದೆ. ಮದುವೆಯ ಬಳಿಕ ಬಹುತೇಕ ಉದ್ಯೋಗಿಗಳು ಹೆಂಡತಿಯನ್ನು ಪಿಎಫ್ ಹಣಕ್ಕೆ ನಾಮಿನಿ ಮಾಡುವುದರಿಂದ ಅವರು ಇಂಥ ಹಕ್ಕುಗಳ ಅಥವಾ ನಿಯಮಗಳ ಬಗ್ಗೆ ತಿಳಿದಿರಬೇಕಾಗುತ್ತದೆ.
ಮದುವೆ ಬಳಿಕ ಯಾರನ್ನು ನಾಮಿನಿ ಮಾಡಬೇಕು?
ಇಪಿಎಫ್ಒ ನಿಯಮಗಳ (EPFO Rules) ಪ್ರಕಾರ, ಪುರುಷ ಉದ್ಯೋಗಿಗೆ ಹೆಂಡತಿ, ಮಕ್ಕಳು, ಅವಲಂಬಿತ ಪೋಷಕರು ಮತ್ತು ಮೃತ ಮಗನ ಮಕ್ಕಳನ್ನು ಕುಟುಂಬವೆಂದು ಪರಿಗಣಿಸಲಾಗುತ್ತದೆ. ಮಹಿಳಾ ಉದ್ಯೋಗಿಗೆ, ಪತಿ, ಮಕ್ಕಳು, ಅವಲಂಬಿತ ಪೋಷಕರು, ಮಾವ, ಪತ್ನಿ ಮತ್ತು ಮೃತ ಮಗನ ಮಗುವನ್ನು ಕುಟುಂಬವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾಮಿನಿ ಮಾತ್ರ ಪಿಎಫ್ ಮೊತ್ತದ ಪ್ರಯೋಜನವನ್ನು ಪಡೆಯಬಹುದು.
ಮದುವೆಯ ನಂತರ, ಕುಟುಂಬೇತರ ವ್ಯಕ್ತಿಯ ನಾಮನಿರ್ದೇಶನವು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಉದ್ಯೋಗಿ ಸ್ನೇಹಿತ ಅಥವಾ ಸಂಬಂಧಿಕರನ್ನು ನಾಮಿನಿಯಾಗಿ ಮಾಡಿದರೆ, ಮದುವೆಯ ನಂತರ ಅವರ ಹೆಸರು ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ.
ಪಿಎಫ್ ಗೆ ಎಷ್ಟು ಬಡ್ಡಿ ಸಿಗುತ್ತದೆ?
ಕೇಂದ್ರ ಸರ್ಕಾರವು ಪ್ರತಿ ಹಣಕಾಸು ವರ್ಷಕ್ಕೂ ಪಿಎಫ್ ಉದ್ಯೋಗಿಗಳಿಗೆ ಬಡ್ಡಿಯನ್ನು ಘೋಷಿಸುತ್ತಿದೆ. 2024-2025ರ ಹಣಕಾಸು ವರ್ಷಕ್ಕೆ ಸರ್ಕಾರವು ಶೇಕಡಾ 8.25 ರಷ್ಟು ಬಡ್ಡಿಯನ್ನು ನೀಡಿತ್ತು. ಒಟ್ಟು ಪಿಎಫ್ ಮೊತ್ತಕ್ಕೆ ಅನುಗುಣವಾಗಿ ಈ ಮೊತ್ತವನ್ನು ಒದಗಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ತಮ್ಮ ಪ್ರಯೋಜನಗಳನ್ನು ಪಡೆಯುತ್ತಾರೆ. ಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು Umang ಅಪ್ಲಿಕೇಶನ್ ಮೂಲಕವೂ ಸುಲಭವಾಗಿ ತಿಳಿದುಕೊಳ್ಳಬಹುದು.