)
ನಮ್ಮ ಜೀವನ ಹೀಗೆಯೇ ನಡೆಯುತ್ತದೆ ಎಂದು ನಿರೀಕ್ಷಿಸುವುದು ಸಾಧ್ಯವೇ ಇಲ್ಲ. ಅನಿರೀಕ್ಷಿತ ತುರ್ತು ಪರಿಸ್ಥಿತಿಗಳು ಯಾವುದೇ ಸಮಯದಲ್ಲಿಯೂ ಎದುರಾಗಬಹುದು. ಪ್ರಮುಖ ವೆಚ್ಚವನ್ನು ಪೂರೈಸಲು, ಬಿಕ್ಕಟ್ಟನ್ನು ನಿರ್ವಹಿಸಲು ಅಥವಾ ಆರ್ಥಿಕ ಸಮಸ್ಯೆಗಳನ್ನು ಎದುರಿಸಲು ಪಿಎಫ್ ನಿಧಿಯಿಂದ ಹಣವನ್ನು ಹಿಂಪಡೆಯಬೇಕಾಗಬಹುದು. ಆದರೆ, ಇಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ಅಂಶಗಳಿವೆ.
ನಿಮ್ಮ ಪಿಎಫ್ ಕೇವಲ ನಿಷ್ಕ್ರಿಯ ಹಣವಲ್ಲ, ಇದು ನಿಮ್ಮ ಆರ್ಥಿಕ ಭದ್ರತೆ, ನಿವೃತ್ತಿ ಜೀವನಕ್ಕೆ ಕೂಡಿಟ್ಟ ಉಳಿತಾಯ ಮತ್ತು ಅನಿಶ್ಚಿತ ಭವಿಷ್ಯಕ್ಕಾಗಿ ಸಿಗುವ ವಿಮೆ. ಈ ನಿಟ್ಟಿನಲ್ಲಿ, ಇಪಿಎಫ್ಒ ತನ್ನ ಅಧಿಕೃತ ಪುಟದಲ್ಲಿ, ಇಪಿಎಫ್ ಸದಸ್ಯರಿಗೆ ಎಚ್ಚರಿಕೆಯಾ ಸಂದೇಶ ರವಾನಿಸಿದೆ. ನಿಮ್ಮ ಪಿಎಫ್ ಸಾಮಾನ್ಯ ಬ್ಯಾಂಕ್ ಖಾತೆಯಲ್ಲ, ಇದು ನಿಮ್ಮ ಭವಿಷ್ಯಕ್ಕಾಗಿ ಇರುವ ಆರ್ಥಿಕ ಭದ್ರತೆ. ತುರ್ತು ಪರಿಸ್ಥಿತಿಗಳು, ನಿವೃತ್ತಿ ಅಥವಾ ಪ್ರಮುಖ ಅಗತ್ಯಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ ಎಂದು ಹೇಳಿದೆ.
ಪಿಎಫ್ ಹಣವನ್ನು ಅನಗತ್ಯವಾಗಿ ಹಿಂಪಡೆಯಬಾರದು :
ಹೆಚ್ಚುವರಿ ಬೆಳವಣಿಗೆ: EPF ಎನ್ನುವುದು ನಿಮ್ಮಿಂದ ಮತ್ತು ನಿಮ್ಮ ಉದ್ಯೋಗದಾತರಿಂದ ಮಾಸಿಕ ಕೊಡುಗೆಗಳ ಮೂಲಕ ಕಾಲಾನಂತರದಲ್ಲಿ ಬೆಳೆಯುವ ನಿಧಿಯಾಗಿದೆ. ಅಲ್ಲದೆ, ಈ ಮೊತ್ತದ ಮೇಲೆ ಸಿಗುವ ಸಂಯುಕ್ತ ಬಡ್ಡಿ ಕೂಡಾ ಬಹಳ ಮುಖ್ಯವಾಗಿದೆ. ಆ ಹಣವನ್ನು ಹೆಚ್ಚು ಸಮಯ ಮುಟ್ಟದೆ ಬಿಟ್ಟಷ್ಟೂ, ಅದು ನಿಮ್ಮ ನಿವೃತ್ತಿಗೆ ಬಲವಾದ ಅಡಿಪಾಯವಾಗುತ್ತದೆ.
ದೊಡ್ಡ ಮೊತ್ತಕ್ಕೆ ಬೀಳುವುದು ಕತ್ತರಿ : ಆರಂಭಿಕ ಹಂತದಲ್ಲಿಯೇ ಪಿಎಫ್ ಹಣವನ್ನು ಹಿಂಪಡೆಯುತ್ತಾ ಬಂದರೆ ಉಳಿತಾಯ ಮೊತ್ತ ಕಡಿಮೆಯಾಗುವುದಲ್ಲದೆ, ಹಣದ ಬೆಳವಣಿಗೆಯ ಚಕ್ರವನ್ನು ಮುರಿಯುತ್ತವೆ.
ನಿವೃತ್ತಿಯಲ್ಲಿ ಜೀವನದ ಆಧಾರ : ನಿವೃತ್ತಿಯ ಸಮಯದಲ್ಲಿ, ನಿಮ್ಮ PF ಹಣವು ವೈದ್ಯಕೀಯ ವೆಚ್ಚಗಳು, ಜೀವನಶೈಲಿಯ ಅಗತ್ಯತೆಗಳು ಅಥವಾ ನೀವು ನಿಮ್ಮ ಜೀವನದುದ್ದಕ್ಕೂ ಮುಂದೂಡುತ್ತಿರುವ ಕನಸನ್ನು ನನಸಾಗಿಸುವಂತಹ ವಿಷಯಗಳಿಗೆ ಸಹಾಯ ಮಾಡುತ್ತದೆ.
ಯಾವಾಗ PF ಹಣವನ್ನು ಹಿಂಪಡೆಯಬಹುದು? :
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಕೆಲವು ಷರತ್ತುಗಳ ಅಡಿಯಲ್ಲಿ ಚಂದಾದಾರರು ತಮ್ಮ PF ಖಾತೆಯಿಂದ ಹಣವನ್ನು ಹಿಂಪಡೆಯಲು ಅನುಮತಿಸುತ್ತದೆ. ತುರ್ತು ವೈದ್ಯಕೀಯ ಅಗತ್ಯಗಳು, ಮನೆ ಖರೀದಿಸುವುದು ಅಥವಾ ಉನ್ನತ ಶಿಕ್ಷಣದಂತಹ ಕಾರಣಗಳಿಗಾಗಿ ಹಣವನ್ನು ಹಿಂಪಡೆಯಬಹುದು.
ನಿರುದ್ಯೋಗ:
1 ತಿಂಗಳ ನಂತರ: ನಿಮ್ಮ ಪಿಎಫ್ ಬ್ಯಾಲೆನ್ಸ್ನ 75% ವರೆಗೆ ನೀವು ಹಿಂಪಡೆಯಬಹುದು. 2 ತಿಂಗಳ ನಂತರ: ಉಳಿದ 25% ಅನ್ನು ನೀವು ಹಿಂಪಡೆಯಬಹುದು.
ಮನೆ:
3 ವರ್ಷಗಳ ಸದಸ್ಯತ್ವದ ನಂತರ: ಮನೆ ಖರೀದಿಸಲು ಅಥವಾ ನಿರ್ಮಿಸಲು ನಿಮ್ಮ ಪಿಎಫ್ ಹಣದ 90% ವರೆಗೆ ನೀವು ಹಿಂಪಡೆಯಬಹುದು.
ವೈದ್ಯಕೀಯ ಚಿಕಿತ್ಸೆ:
ನಿಮಗೆ ಅಥವಾ ನಿಮ್ಮ ಅವಲಂಬಿತರಿಗೆ: 6 ತಿಂಗಳ ಮೂಲ ವೇತನ + ತುಟ್ಟಿ ಭತ್ಯೆ, ಅಥವಾ ಬಡ್ಡಿಯೊಂದಿಗೆ ನಿಮ್ಮ ಸ್ವಂತ ಕೊಡುಗೆ, ಯಾವುದು ಕಡಿಮೆಯೋ ಅದನ್ನು ಹಿಂಪಡೆಯಬಹುದು .
ಮದುವೆ ಅಥವಾ ಶಿಕ್ಷಣ:
7 ವರ್ಷಗಳ ಸೇವೆಯ ನಂತರ: 10 ನೇ ತರಗತಿ ಮೀರಿದ ಮಕ್ಕಳ ಮದುವೆ ಅಥವಾ ಶಿಕ್ಷಣಕ್ಕಾಗಿ ಸ್ವಂತ ಕೊಡುಗೆಯ 50% ವರೆಗೆ ಹಿಂಪಡೆಯಬಹುದು.
ಇಪಿಎಫ್ನ ಪ್ರಸ್ತುತ ಬಡ್ಡಿದರ :
2024-25ರ ಹಣಕಾಸು ವರ್ಷಕ್ಕೆ, ಇಪಿಎಫ್ ಬಡ್ಡಿದರವನ್ನು ಶೇಕಡಾ 8.25 ಕ್ಕೆ ನಿಗದಿಪಡಿಸಲಾಗಿದೆ. ಈ ಎಲ್ಲಾ ಮಾಹಿತಿಯು ಇಪಿಎಫ್ಒ ಹೊರಡಿಸಿದ ಅಧಿಕೃತ ಅಧಿಸೂಚನೆಗಳನ್ನು ಆಧರಿಸಿದೆ.