ಸರ್ಕಾರದ ಈ ಯೋಜನೆಯಿಂದಾಗಿ ಹಿರಿಯ ನಾಗರಿಕರು ಪಾರ್ಟಿ ತಿಂಗಳು 20,500 ರೂಪಾಯಿ ಪಡೆಯುತ್ತಾರೆ. ಹಾಗಿದ್ದರೆ ಈ ಹಣ ಕೈ ಸೇರಬೇಕಾದರೆ ಹಿರಿಯ ನಾಗರಿಕರು ಮಾಡಬೇಕಾಗಿರುವುದು ಇಷ್ಟೇ.

ಬ್ಯಾಂಕ್ FD ಮತ್ತು ಸಣ್ಣ ಉಳಿತಾಯ ಯೋಜನೆಗಳು ಎರಡೂ ಕಡಿಮೆ ಅಪಾಯದ ಹೂಡಿಕೆ ಆಯ್ಕೆಗಳಾಗಿವೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಪ್ರಸ್ತುತ ದಾಖಲೆ ಮಟ್ಟದ ಬಡ್ಡಿ ಸಿಗುತ್ತದೆ. ಹಾಗಾಗಿ ಹೂಡಿಕೆಗೆ ಈ ಆಯ್ಕೆಯನ್ನು ಪರಿಗಣಿಸುವುದರೊಂದಿಗೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಸರ್ಕಾರ ಶೇಕಡಾ 8.2ರಷ್ಟು ಬಡ್ಡಿ ಸಿಗುತ್ತದೆ.
ಹೂಡಿಕೆ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ :
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (ಎಸ್ಸಿಎಸ್ಎಸ್) ಹೂಡಿಕೆ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಬದಲಾವಣೆಯಿಂದ ಹಿರಿಯ ನಾಗರಿಕರಿಗೆ ಮೊದಲಿಗಿಂತ ಹೆಚ್ಚಿನ ಲಾಭ ಸಿಗುತ್ತಿದೆ. ಅಲ್ಲದೆ ಹೂಡಿಕೆ ಮೇಲಿನ ಬಡ್ಡಿದರವನ್ನು ಶೇಕಡಾ 8.2 ಕ್ಕೆ ಹೆಚ್ಚಿಸಲಾಗಿರುವ ಕಾರಣ ಲಾಭಾಂಶ ಮತ್ತೂ ಹೆಚ್ಚಾಗಿದೆ. ಗರಿಷ್ಠ ಹೂಡಿಕೆ ಮಿತಿಯನ್ನು ಹೆಚ್ಚಿಸಿ ಬಡ್ಡಿದರವನ್ನು ಹೆಚ್ಚಿಸಿದ್ದರಿಂದ ಹಿರಿಯ ನಾಗರಿಕರು ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಗಳಿಸುವ ಆದಾಯವು ಮೊದಲಿಗಿಂತ ದುಪ್ಪಟ್ಟಾಗಿದೆ.
ಈಗ ದೊರೆಯಲಿದೆ 20500 ರೂ.ಲಾಭ :
ಹೂಡಿಕೆಯ ಮಿತಿಯನ್ನು 30 ಲಕ್ಷಕ್ಕೆ ಹೆಚ್ಚಿಸಿ ಬಡ್ಡಿದರವನ್ನು ಶೇ.8.2ಕ್ಕೆ ಏರಿಸಿದ ಪರಿಣಾಮ, ಐದು ವರ್ಷಗಳ ಮೆಚ್ಯೂರಿಟಿ ಅವಧಿಯಲ್ಲಿ 12.30 ಲಕ್ಷದ ಬಡ್ಡಿಯೊಂದಿಗೆ ಒಟ್ಟು 42.30 ಲಕ್ಷ ರೂಪಾಯಿ ಸಿಗಲಿದೆ. ಇದನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕಿದರೆ, 2 ಲಕ್ಷ 46 ಸಾವಿರ ರೂಪಾಯಿ ಮತ್ತು ಮಾಸಿಕ ಆಧಾರದಲ್ಲಿ ನೋಡಿದರೆ 20,500 ರೂಪಾಯಿ ಆಗುತ್ತದೆ.
ಹಿರಿಯ ನಾಗರಿಕ ಉಳಿತಾಯ ಯೋಜನೆ ಎಂದರೇನು ? :
ನಿವೃತ್ತಿಯ ನಂತರ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ದೇಶದ ಹಿರಿಯ ನಾಗರಿಕರಿಗಾಗಿ ಆರಂಭಿಸಲಾಗಿದೆ. ಈ ಯೋಜನೆಯಡಿ, ಹಿರಿಯ ನಾಗರಿಕರು ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ.
1.5 ಲಕ್ಷದವರೆಗಿನ ತೆರಿಗೆ ರಿಯಾಯಿತಿ :
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ, ಸರ್ಕಾರವು ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ. ಇದರಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಬೇರೆ ಬೇರೆ ಖಾತೆ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು. ವಿಶೇಷವೆಂದರೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ, ಇದರಲ್ಲಿ ಹೂಡಿಕೆಯ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.