)
Family Pension Rules: ಕೇಂದ್ರ ಸರ್ಕಾರವು ಇತ್ತೀಚೆಗೆ ಫ್ಯಾಮಿಲಿ ಪಿಂಚಣಿ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಕುಟುಂಬಗಳಿಗೆ ಸಂಬಂಧಿಸಿದ ಒಂದು ಮುಖ್ಯವಾದ ವಿಷಯವನ್ನು ಸ್ಪಷ್ಟಪಡಿಸಿದೆ. ಇದು ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ಉದ್ಯೋಗಿ ಅಥವಾ ಪಿಂಚಣಿದಾರರ ಕುಟುಂಬದಲ್ಲಿ ಪಿಂಚಣಿ ಯಾರ ಕೈಗೆ ಸೇರಲಿದೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ.
ಈ ಸಂಬಂಧ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಅಡಿಯಲ್ಲಿರುವ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಅಕ್ಟೋಬರ್ 27, 2025 ರಂದು ಹೊರಡಿಸಿರುವ ಹೊಸ ಜ್ಞಾಪಕ ಪತ್ರದಲ್ಲಿ (OM ಸಂಖ್ಯೆ 1/1(33)/2024-P&PW(K)/9629), ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದಿರುವ ಸರ್ಕಾರಿ ನೌಕರ ಅಥವಾ ಪಿಂಚಣಿದಾರರು ಮೃತಪಟ್ಟರೆ ಆಗ ಯಾರು ಗಂಡನ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಮೊದಲ ಅಥವಾ ಎರಡನೇ ಹೆಂಡತಿ ಇಬ್ಬರಲ್ಲಿ ಯಾರಿಗೆ ಎಷ್ಟು ಪ್ರಮಾಣದ ಪಿಂಚಣಿ ದೊರೆಯುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಿದೆ.
ಇಬ್ಬರು ಹೆಂಡಿರಲ್ಲಿ ಯಾರಿಗೆ ಸಿಗುತ್ತೆ ಗಂಡನ ಪಿಂಚಣಿ:
DoPPW ಮಾರ್ಗಸೂಚಿಗಳ ಪ್ರಕಾರ, ಪಿಂಚಣಿ ವಿತರಣೆಯ ನಿಯಮಗಳು ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021 ರಿಂದ ನಿಯಂತ್ರಿಸಲ್ಪಡುತ್ತವೆ. ಇದರ ನಿಯಮ 50(6)(1) ರಲ್ಲಿ ಸರ್ಕಾರಿ ಉದ್ಯೋಗಿ ಅಥವಾ ಪಿಂಚಣಿದಾರರು ಮರಣ ಹೊಂದಿದ ಸಂದರ್ಭದಲ್ಲಿ, ಕಾನೂನು ಬದ್ಧವಾಗಿ ವಿವಾಹಿತ ಸಂಗಾತಿ ಮಾತ್ರ ಫ್ಯಾಮಿಲಿ ಪಿಂಚಣಿ ಎಂದರೆ ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಪಿಂಚಣಿ ನಿಯಮ 50(8)(c) ಪ್ರಕಾರ, ಮೃತ ಉದ್ಯೋಗಿ ಅಥವಾ ಪಿಂಚಣಿದಾರರಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರಿದ್ದರೆ, ಇಬ್ಬರೂ ಕಾನೂನಾತ್ಮಕವಾಗಿ ಮದುವೆಯಾಗಿದ್ದಲ್ಲಿ ಅವರಿಬ್ಬರಿಗೂ ಸಮಾನ ಷೇರುಗಳಲ್ಲಿ ಪಿಂಚಣಿ ಪಾವತಿಸಳಗುತ್ತದೆ. ಒಂದೊಮ್ಮೆ ಇಬ್ಬರು ಹೆಂಡಿರಲ್ಲಿ ಒಬ್ಬರು ಮೃತಪಟ್ಟಿದ್ದರೆ ಹಾಗೂ ಅವರಿಗೆ ಮಕ್ಕಳಿದ್ದಲ್ಲಿ ಆ ಪಾಲನ್ನು ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ.
ಇಂತಹವರಿಗಿಲ್ಲ ಪಿಂಚಣಿ ಸೌಕರ್ಯ:
1955 ರ ಹಿಂದೂ ವಿವಾಹ ಕಾಯ್ದೆಯನ್ವಯಾ ಉದ್ಯೋಗಿಗಳು ಅಥವಾ ಪಿಂಚಣಿದಾರರ ಮೊದಲ ಪತ್ನಿ ಮೃತಪಟ್ಟಿದಾರೆ ಅಥವಾ ಕಾನೂನು ಬದ್ದವಾಗಿ ವಿವಾಹವನ್ನು ವಿಸರ್ಜಿಸಿದಿದ್ದರೆ ಎಂದರೆ ಡಿವೋರ್ಸ್ ಪಡೆದಿದ್ದರೆ ಮಾತ್ರ ಎರಡನೇ ಮದುವೆ ಮಾನ್ಯವಾಗಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಹಿಂದೂ ವಿವಾಹ ಕಾಯ್ದೆಗೆ ಮಾತ್ರವಲ್ಲದೆ, ಸಿಸಿಎಸ್ (ಪಿಂಚಣಿ) ನಿಯಮಗಳು, 2021ರ ಅಡಿಯಲ್ಲಿ, ಒಂದೊಮ್ಮೆ ವಿವಾಹಿತ ಮೊದಲ ಪತ್ನಿ ಜೀವಂತವಾಗಿದ್ದು ಆಕೆಯಿಂದ ಡಿವೋರ್ಸ್ ಪಡೆಯದೇ ಎರಡನೇ ಮದುವೆಯಾಗಿದ್ದರೆ ಆ ಮದುವೆಯನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ ಆಕೆಗಾಗಲಿ ಅಥವಾ ಆಕೆಯ ಮಕ್ಕಳಿಗಾಗಲಿ ಕುಟುಂಬ ಪಿಂಚಣಿ ಪಡೆಯುವ ಕಾನೂನು ಅರ್ಹತೆಗಳು ಇರುವುದಿಲ್ಲ.
ಯಾವುದೇ ಸರ್ಕಾರಿ ಉದ್ಯೋಗಿ ನಿವೃತ್ತರಾದ ಬಳಿಕ ಮ್ರುತಪತ್ತಲ್ಲಿ ಅವರ ಕುಟುಂಬಕ್ಕೆ ವರ್ಧಿತ ದರದಲ್ಲಿ ಫ್ಯೈಲಿ ಪಿಂಚಣಿ ನೀಡಲಾಗುವುದು. ನಿಯಮ 50(2)(a)(iii) ಪ್ರಕಾರ, ಈ ವರ್ಧಿತ ಪಿಂಚಣಿಯನ್ನು ಏಳು ವರ್ಷಗಳವರೆಗೆ ಅಥವಾ ಮೃತ ಉದ್ಯೋಗಿಗೆ 67 ವರ್ಷ ವಯಸ್ಸಾಗುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಪಾವತಿಸಲಾಗುತ್ತದೆ ಎಂದು DoPPW ಸ್ಪಷ್ಟಪಡಿಸಿದೆ.