ಮುಧೋಳ: ಕಬ್ಬಿಗೆ ₹3300 ರೂಪಾಯಿ ಬೆಂಬಲ ಬೆಲೆ ಘೋಷಿಸಿ ಸರ್ಕಾರ ಹೊರಡಿಸಿದ ಆದೇಶವನ್ನು ಧಿಕ್ಕರಿಸಿರುವ ರೈತರು ಮತ್ತೆ ಸರ್ಕಾರದ ವಿರುದ್ದ ಸೆಡ್ಡು ಹೊಡೆದಿದ್ದಾರೆ.ಸರ್ಕಾರದ ಆದೇಶದ ಪ್ರತಿ ಸುಟ್ಟ ಕಬ್ಬು ಬೆಳಗಾರ ರೈತರು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದಾರೆ.ಈ ಕುರಿತ ವರದಿ ಇಲ್ಲಿದೆ.
ಒಂದು ಕಡೆ ವೇದಿಕೆಯ ಮೇಲೆ ಸರ್ಕಾರದ ಆದೇಶದ ಪ್ರತಿ ಸುಟ್ಟು ಹಾಕುತ್ತಿರುವ ರೈತರು.ಇನ್ನೊಂದು ಕಡೆ ಘೋಷಣೆ ಕೂಗುತ್ತಿರುವ ರೈತರು.ಈ ಎಲ್ಲಾ ದೃಶ್ಯಾವಳಿಗಳಿಗೆ ಸಾಕ್ಚಿಯಾಗಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರ, ಹೌದು ಇಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರು ರಾಜ್ಯಾದ್ಯಂತ ಹೋರಾಟಕ್ಕೆ ತೀರ್ಮಾನವನ್ನ ತೆಗೆದುಕೊಂಡಿದ್ದಾರೆ.ವೇದಿಕೆಯ ಮೇಲೆಯೇ ಸರ್ಕಾರದ ಆದೇಶದ ಪ್ರತಿ ಸುಟ್ಟು ಹಾಕಿದ ರೈತರು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಮಹಿಳೆಯರಿಗೆ ಸಿಗುತ್ತಿದೆ 11,000 ರೂ. : ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆ
ಇದೇ ವೇಳೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ನಮಗೆ ಸರ್ಕಾರದ ಆದೇಶಕ್ಕೆ ಧಿಕ್ಕರಿಸುವ ಹಕ್ಕಿದೆ.ಹಾಗಾಗಿ ನಮಗೆ ಸರ್ಕಾರದ ಆದೇಶಕ್ಕೆ ನಮ್ಮ ಸಮ್ಮತಿ ಇಲ್ಲ.ಸರ್ಕಾರ ₹3500 ಗಳನ್ನು ಸಕ್ಕರೆ ಕಾರ್ಖಾನೆಗಳಿಂದಾದರೂ ಕೊಡಸಲಿ ಅಥವಾ ಸರ್ಕಾರವಾದ್ರೂ ಕೊಡಲಿ ಎಂದರು.ಹೀಗಾಗಿ ನಾವು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದ್ದೇವೆ.ರಾಜ್ಯದ ಎಲ್ಲ ಸಮಿತಿಗಳಿಗೆ ಸೂಚನೆ ನೀಡಿದ್ದೇವೆ,ಇನ್ನೆರಡು ದಿನಗಳಲ್ಲಿ ಹೋರಾಟ ರಾಜ್ಯಾದ್ಯಂತ ಆರಂಭವಾಗಲಿದೆ ಎಂದರು.
ಇನ್ನು ಇತ್ತ ರೈತರ ಹೋರಾಟ ತೀವ್ರವಾಗುತ್ತಿದ್ದಂತೆ ಬೆಳಿಗ್ಗೆಯೇ ಬಾಗಲಕೋಟೆ ಡಿಸಿ ಸಂಗಪ್ಪ ಅವರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಲಾಯಿತು.ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ.ಸಕ್ಕರೆ ಕಾರ್ಖಾನೆ ಆರಂಭಿಸಲು ಮನವಿ ಕೊಡಿ ಎಂದು ಮನವಿ ಮಾಡಿದರು.ನಂತರ ಮಾತನಾಡಿದ ಜಮಖಂಡಿ ಶುಗರ್ಸ್ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಆಯಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಣೆ ಮಾಡುವ ರೈತರೊಂದಿಗೆ ಸಭೆ ನಡೆಸುತ್ತೇವೆ.ರೈತರು ಸರ್ಕಾರದ ಆದೇಶದಂತೆ ₹3300 ರೂಪಾಯಿ ಬೆಂಬಲ ಬೆಲೆಗೆ ಒಪ್ಪಿ ಸಕ್ಕರೆ ಕಾರ್ಖಾನೆ ಆರಂಭಿಸಲು ಹೇಳಿದ್ರೆ ಆರಂಭಿಸುತ್ತೇವೆ.ಬೇಡ ಅಂದ್ರೆ ಬಂದ್ ಮಾಡ್ತೇವೆ ಎಂದರು.
ಇದನ್ನೂ ಓದಿ: 2026ರ ಮೊದಲ ದಿನದಿಂದಲೇ ಈ 5 ರಾಶಿಗೆ ಲಕ್ಷಾಧಿಪತಿ ಯೋಗ: ಅದೃಷ್ಟದ ಬಾಗಿಲು ತೆರೆಯುತ್ತೆ! ಕಂಡ ಕನಸೆಲ್ಲಾ ಈ ವರ್ಷವೇ ನೆರವೇರಲಿದೆ
ಒಟ್ಟಾರೆ ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದಿರುವ ರೈತರು ಈಗ ಮತ್ತೆ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗಿದ್ದಾರೆ.ಇನ್ನೆರಡು ದಿನಗಳಲ್ಲಿ ಹೋರಾಟದ ಕಿಚ್ಚು ರಾಜ್ಯವ್ಯಾಪಿ ಹಬ್ಬಲಿದೆ.ಇತ್ತ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮಾತ್ರ ಸರ್ಕಾರದ ಆದೇಶವನ್ನ ಪಾಲಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.ಮುಂದೆ ಇದು ಇನ್ಯಾವ ತಿರುವು ಪಡೆದುಕೊಳ್ಳುತ್ತೆ ಎನ್ನೋದನ್ನ ಕಾಯ್ದು ನೋಡಬೇಕಿದೆ.









