ಷೇರು ವಹಿವಾಟಿನ ಹೆಸರಲ್ಲಿ ವಂಚನೆ; ವ್ಯಕ್ತಿಗೆ ಬರೋಬ್ಬರಿ 47 ಲಕ್ಷ ರೂಪಾಯಿ ಟೋಪಿ ಹಾಕಿದ ವಂಚಕರು!!

Share Fraud: ಮಹಾರಾಷ್ಟ್ರದ ಥಾಣೆಯಲ್ಲಿ ವ್ಯಕ್ತಿಯೊಬ್ಬರಿಗೆ ಷೇರು ವಹಿವಾಟಿನ ಹೆಸರಿನಲ್ಲಿ 47 ಲಕ್ಷ ರೂ. ವಂಚಿಸಿರುವ ಬಗ್ಗೆ ವರದಿಯಾಗಿದೆ. ಸೈಬರ್ ವಂಚಕರು ಷೇರುಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭದ ಭರವಸೆ ನೀಡಿ ಜನರನ್ನು ಆಕರ್ಷಿಸುತ್ತಿದ್ದರು. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Written by - Puttaraj K Alur | Last Updated : Mar 8, 2025, 05:41 PM IST
  • ಷೇರುಗಳಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ವಂಚನೆ
  • ಮಹಾರಾಷ್ಟ್ರದ ಥಾಣೆಯ ವ್ಯಕ್ತಿಗೆ 47 ಲಕ್ಷ ರೂ. ಟೂಪಿ ಹಾಕಿದ ಸೈಬರ್ ವಂಚಕರು
  • ವಂಚಕರ ವಿವಿಧ ಬ್ಯಾಂಕ್ ಖಾತೆಗಳಿಗೆ 47,01,652 ರೂ.ಗಳನ್ನು ಪಾವತಿಸಿರುವ ವ್ಯಕ್ತಿ
ಷೇರು ವಹಿವಾಟಿನ ಹೆಸರಲ್ಲಿ ವಂಚನೆ; ವ್ಯಕ್ತಿಗೆ ಬರೋಬ್ಬರಿ 47 ಲಕ್ಷ ರೂಪಾಯಿ ಟೋಪಿ ಹಾಕಿದ ವಂಚಕರು!!
ವ್ಯಕ್ತಿಗೆ 47 ಲಕ್ಷ ರೂ. ಟೂಪಿ!!

Fraud in the name of stock trading: ಷೇರುಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಸೈಬರ್ ವಂಚಕರು ಬರೋಬ್ಬರಿ 47 ಲಕ್ಷ ರೂ.ಗೂ ಹೆಚ್ಚು ವಂಚನೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಪೊಲೀಸರು ಶನಿವಾರ ಈ ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ. ದೂರಿನ ಆಧಾರದ ಮೇಲೆ, ಗುರುವಾರ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಿಂದ ಈ ವರ್ಷದ ಫೆಬ್ರವರಿ ನಡುವೆ ಈ ವಂಚನೆ ನಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಧಿಕಾರಿಯ ಪ್ರಕಾರ, ಆರೋಪಿಗಳು ವಾಟ್ಸಾಪ್‌ನಲ್ಲಿನ ಗುಂಪಿನಲ್ಲಿ ಸಂಪರ್ಕ ಹೊಂದಿದ್ದರು. 'Share Trading' ಅಪ್ಲಿಕೇಶನ್ ಮೂಲಕ ಕೆಲಸ ಮಾಡುತ್ತಿದ್ದರು. 

Add Zee News as a Preferred Source

ಇದನ್ನೂ ಓದಿ: ಮಹಿಳಾ ದಿನಾಚರಣೆ ದಿನವೇ ಸರ್ಕಾರದಿಂದ ಗುಡ್‌ನ್ಯೂಸ್.. ಮಹಿಳೆಯರ ಖಾತೆಗೆ ಬರುತ್ತೆ 2500 ರೂಪಾಯಿ!

ಷೇರು ವಹಿವಾಟಿನ ಹೆಸರಿನಲ್ಲಿ ವಂಚನೆ

ವಂಚಕರು ಥಾಣೆ ವ್ಯಕ್ತಿಯನ್ನ ಸಂಪರ್ಕಿಸಿ, ಆಕರ್ಷಕ ಲಾಭದ ಭರವಸೆ ನೀಡಿದ್ದರು. 'ಷೇರು'ಗಳಲ್ಲಿ ಹಣ ಹೂಡಿಕೆ ಮಾಡಿದ್ರೆ ಕಡಿಮೆ ದಿನಗಳಲ್ಲಿ ಹೆಚ್ಚಿನ ಲಾಭ ಬರುತ್ತದೆ ಅಂತಾ ಆಮಿಷವೊಡ್ಡಿದರು. ಕಳೆದ ಮೂರು ತಿಂಗಳೊಳಗೆ ವಂಚನೆಗೊಳಗಾದ ವ್ಯಕ್ತಿಯು ವಂಚಕರ ವಿವಿಧ ಬ್ಯಾಂಕ್ ಖಾತೆಗಳಿಗೆ 47,01,652 ರೂ.ಗಳನ್ನು ಪಾವತಿಸಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ. ದೊಡ್ಡ ಮೊತ್ತದ ಹಣ ಪಾವತಿಸಿದ ನಂತರವೂ ಲಾಭ ಇರಲಿ ಅಸಲು ಹಣವೇ ಸಿಗದಿದ್ದಾಗ ತಾನು ಮೋಸ ಹೋಗಿರುವುದನ್ನು ಅರಿತು ಆ ವ್ಯಕ್ತಿ ಕೂಡಲೇ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದಕ್ಕೂ ಮೊದಲು ಉತ್ತರ ಪ್ರದೇಶದ ನೋಯ್ಡಾದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಹೂಡಿಕೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (STF) ಗಾಜಿಯಾಬಾದ್‌ನಿಂದ ಗ್ಯಾಂಗ್‌ನ ಸಾಗರ್ನಾ ಸೇರಿದಂತೆ ಇಬ್ಬರನ್ನು ಬಂಧಿಸಿತ್ತು. 

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಜಾಕ್‌ಪಾಟ್.. ಶೇ.50 ರಷ್ಟು ಪಿಂಚಣಿ, ಗ್ರಾಚ್ಯುಟಿ! ಶೀಘ್ರದಲ್ಲೇ ಹೊರಬೀಳಲಿದೆ ಮಹತ್ವದ ಘೋಷಣೆ..

ಉತ್ತರ ಪ್ರದೇಶದಲ್ಲೂ ವಂಚನೆ

ಈ ಬಗ್ಗೆ ನೋಯ್ಡಾ ಘಟಕದ ಎಸ್‌ಟಿಎಫ್ ಸೂಪರಿಂಟೆಂಡೆಂಟ್ ರಾಜ್‌ಕುಮಾರ್ ಮಿಶ್ರಾ ಮಾತನಾಡಿದ್ದು, ʼಖಚಿತ ಮಾಹಿತಿಯ ಮೇರೆಗೆ ತಂಡವು ಗಾಜಿಯಾಬಾದ್‌ನ ವಸುಂಧರಾದ ಸೆಕ್ಟರ್ 5ರಲ್ಲಿರುವ ಮೋಹನ್ ಮೀಕಿನ್ಸ್ ಸೊಸೈಟಿಯಲ್ಲಿರುವ ಫ್ಲಾಟ್‌ನ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನ ಬಾಗ್‌ಪತ್ ಜಿಲ್ಲೆಯ ನಿವಾಸಿಗಳಾದ ವಿನೋದ್ ಕುಮಾರ್ ಧಮಾ ಮತ್ತು ರವೀಂದ್ರ ಅಲಿಯಾಸ್ ನವಾಬ್ ಎಂದು ಗುರುತಿಸಲಾಗಿದೆ. ಈ ಜನರು ಗ್ಯಾಂಗ್ ರಚಿಸಿಕೊಂಡು ಅನೇಕರಿಗೆ ವಂಚನೆ ಮಾಡುತ್ತಿದ್ದರು. ವಿನೋದ್ ಈ ಗ್ಯಾಂಗ್‌ನ ಲೀಡರ್‌ ಆಗಿದ್ದ ಅಂತಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಗ್ಯಾಂಗ್‌ನ ಇತರ ಸದಸ್ಯರಿಗಾಗಿ ಹುಡುಕಾಟ ನಡೆಯುತ್ತಿದೆ. ವಂಚಕರು ಅನೇಕರಿಗೆ ತಿಂಗಳಿಗೆ ಶೇ.10 ರಿಂದ 15ರಷ್ಟು ಬಡ್ಡಿ ನೀಡುವುದಾಗಿ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ" ಎಂದು ತಿಳಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News