)
Unlimited Recharge Plans
: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸಿನಿಮಾಗಳು, ವೆಬ್ ಸೀರಿಸ್ ಮತ್ತು ಲೈವ್ ಟಿವಿಯನ್ನ ಅಡೆತಡೆಯಿಲ್ಲದೆ ಆನಂದಿಸಲು ಬಯಸಿದರೆ, ಜಿಯೋ ಮತ್ತು ಏರ್ಟೆಲ್ ನಿಮಗೆ ಸೂಕ್ತವಾದ ಕೆಲವು ವಿಶೇಷ ಪ್ರಿಪೇಯ್ಡ್ ರಿಜಾರ್ಜ್ ಪ್ಲಾನ್ಗಳನ್ನ ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ಬಳಕೆದಾರರು ಕೇವಲ ಕರೆ ಅಥವಾ ಡೇಟಾಗೆ ಸೀಮಿತವಾದ ರಿಜಾರ್ಜ್ ಪ್ಲಾನ್ಗಳನ್ನ ಬಯಸುವುದಿಲ್ಲ. ಮನರಂಜನಾ ಪ್ಯಾಕ್ ಸಹ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ಎರಡೂ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಕೈಗೆಟುಕುವ ರಿಚಾರ್ಜ್ ಪ್ಲ್ಯಾನ್ಗಳನ್ನ ಪರಿಚಯಿಸಿವೆ. ಇವುಗಳು ಸಾಕಷ್ಟು ಡೇಟಾವನ್ನ ಒದಗಿಸುವುದಲ್ಲದೆ 22ಕ್ಕೂ ಹೆಚ್ಚು OTT ಪ್ಲಾಟ್ಫಾರ್ಮ್ಗಳಿಗೆ ಉಚಿತ ಚಂದಾದಾರಿಕೆ ಸಹ ಒದಗಿಸುತ್ತವೆ. ವಿಶೇಷವೆಂದರೆ ಈ ಯೋಜನೆಗಳ ಬೆಲೆ 200 ರೂ.ಕ್ಕಿಂತ ಕಡಿಮೆ. ಇದರಲ್ಲಿ ನೀವು ಕಡಿಮೆ ಬಜೆಟ್ನಲ್ಲಿ ಸಂಪೂರ್ಣ ಮನರಂಜನಾ ಪ್ಯಾಕೇಜ್ ಪಡೆಯಬಹುದು. ಈ ಯೋಜನೆಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಏರ್ಟೆಲ್ 195 ರೂ. ಯೋಜನೆ
ಈ ಏರ್ಟೆಲ್ ಪ್ಯಾಕ್ ವಿಶೇಷವಾಗಿ ಒಂದು ತಿಂಗಳವರೆಗೆ ಸಾಕಷ್ಟು ಡೇಟಾ ಮತ್ತು ಮನರಂಜನೆ ಬಯಸುವ ಬಳಕೆದಾರರಿಗಾಗಿ ಉತ್ತಮ. 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ಪ್ಯಾಕ್ನಲ್ಲಿ ಕಂಪನಿಯು 12GB ಹೈ-ಸ್ಪೀಡ್ ಡೇಟಾವನ್ನ ನೀಡುತ್ತಿದೆ. ಇದು ಮಾತ್ರವಲ್ಲದೆ ನೀವು ಜಿಯೋಹಾಟ್ಸ್ಟಾರ್ಗೆ ಒಂದು ತಿಂಗಳ ಉಚಿತ ಚಂದಾದಾರಿಕೆ ಸಹ ಪಡೆಯುತ್ತೀರಿ. ಇದರೊಂದಿಗೆ ನೀವು ಏರ್ಟೆಲ್ ಎಕ್ಸ್ಸ್ಟ್ರೀಮ್ ಪ್ಲೇ ಪ್ರೀಮಿಯಂಗೆ access ಸಹ ಪಡೆಯುತ್ತೀರಿ. ಇದರ ಮೂಲಕ ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 22ಕ್ಕೂ ಹೆಚ್ಚು OTT ಅಪ್ಲಿಕೇಶನ್ಗಳಿಂದ ಕಂಟೆಂಟ್ ವೀಕ್ಷಿಸಬಹುದು.
ಏರ್ಟೆಲ್ 181 ರೂ. ಯೋಜನೆ
ನಿಮಗೆ ಸ್ವಲ್ಪ ಹೆಚ್ಚಿನ ಡೇಟಾ ಬೇಕಾದರೆ ಏರ್ಟೆಲ್ನ 181 ರೂ.ನ ಪ್ಯಾಕ್ ಉತ್ತಮ ಆಯ್ಕೆಯಾಗಿದೆ. ಈ ಪ್ಯಾಕ್ ಸಹ 30 ದಿನಗಳವರೆಗೆ ವ್ಯಾಲಿಡಿಟಿವಾಗಿರುತ್ತದೆ. ಆದರೆ ನೀವು ಇದರಲ್ಲಿ 15GB ಡೇಟಾವನ್ನ ಪಡೆಯುತ್ತೀರಿ. ಡೇಟಾದ ಜೊತೆಗೆ ಏರ್ಟೆಲ್ Xstream Play Premiumಗೆ ಉಚಿತ ಚಂದಾದಾರಿಕೆಯನ್ನ ನೀಡುತ್ತಿದೆ. ಇದರರ್ಥ ನೀವು Netflix, Zee5, SonyLive, Lionsgate ಮತ್ತು ಇತರ ಹಲವು ಪ್ಲಾಟ್ಫಾರ್ಮ್ಗಳ ಕಂಟೆಂಟ್ಅನ್ನ ಒಂದೇ ಅಪ್ಲಿಕೇಶನ್ನಲ್ಲಿ ವೀಕ್ಷಿಸುವ ಅವಕಾಶ ಪಡೆಯುತ್ತೀರಿ.
ಜಿಯೋ 195 ರೂ. ಯೋಜನೆ
ಜಿಯೋನ ಈ ಪ್ಯಾಕ್ ದೀರ್ಘಕಾಲದವರೆಗೆ ಬಹಳ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರ ವ್ಯಾಲಿಡಿಟಿ 90 ದಿನಗಳು. ಇದರಲ್ಲಿ ಕಂಪನಿಯು ಒಟ್ಟು 15GB ಡೇಟಾವನ್ನ ನೀಡುತ್ತಿದೆ. ವಿಶೇಷವೆಂದರೆ ಜಿಯೋಹಾಟ್ಸ್ಟಾರ್ಗೆ 90 ದಿನಗಳ ಉಚಿತ access ಸಿಗುತ್ತದೆ. ಇದರರ್ಥ ನೀವು ಒಮ್ಮೆ ರೀಚಾರ್ಜ್ ಮಾಡುವ ಮೂಲಕ ಮೂರು ತಿಂಗಳವರೆಗೆ OTT ಮನರಂಜನೆಯೊಂದಿಗೆ ಡೇಟಾದ ಪ್ರಯೋಜನ ಸಹ ಪಡೆಯುತ್ತೀರಿ.
ಜಿಯೋ 175 ರೂ. ಯೋಜನೆ
ಬಜೆಟ್ನಲ್ಲಿ ಮನರಂಜನೆ ಬಯಸುವವರಿಗೆ ಜಿಯೋದ 175 ರೂ. ಪ್ಯಾಕ್ ಉತ್ತಮ ಆಯ್ಕೆಯಾಗಿದೆ. ಇದರ ವ್ಯಾಲಿಡಿಟಿ 28 ದಿನಗಳು. ಅಲ್ಲದೆ ನೀವು ಇದರಲ್ಲಿ ಒಟ್ಟು 10GB ಡೇಟಾವನ್ನ ಪಡೆಯುತ್ತೀರಿ. ಇದರ ಜೊತೆಗೆ ಕಂಪನಿಯು 10 OTT ಅಪ್ಲಿಕೇಶನ್ಗಳಿಗೆ ಉಚಿತ access ಒದಗಿಸುತ್ತಿದೆ. ಇದರಿಂದ ನೀವು ವಿವಿಧ ವೇದಿಕೆಗಳಲ್ಲಿ ವೆಬ್ ಸರಣಿಗಳು, ಸಿನಿಮಾಗಳನ್ನ ಮತ್ತು ಶೋಗಳನ್ನ ಆನಂದಿಸಬಹುದು.
ಒಟ್ಟಾರೆ ಏರ್ಟೆಲ್ ಮತ್ತು ಜಿಯೋ ಎರಡೂ ಈ ಬಜೆಟ್ ಸ್ನೇಹಿ ಪ್ಯಾಕ್ಗಳನ್ನು ವಿಶೇಷವಾಗಿ ಮನರಂಜನಾ ಪ್ರಿಯರಿಗಾಗಿ ವಿನ್ಯಾಸಗೊಳಿಸಿವೆ. ನೀವು ದೀರ್ಘಾವಧಿಯ ವ್ಯಾಲಿಡಿಟಿಯನ್ನ ಬಯಸಿದರೆ, ಜಿಯೋದ 195 ರೂ. ಪ್ಯಾಕ್ ಉತ್ತಮವಾಗಿದೆ. ಆದರೆ ನೀವು ಒಂದು ತಿಂಗಳಲ್ಲಿ ಹೆಚ್ಚಿನ ಡೇಟಾ ಮತ್ತು ಹೆಚ್ಚಿನ OTT ಅಪ್ಲಿಕೇಶನ್ಗಳಿಗೆ access ಬಯಸಿದರೆ, ಏರ್ಟೆಲ್ನ ಪ್ಯಾಕ್ಗಳು ನಿಮಗೆ ಉತ್ತಮ ಆಯ್ಕೆಯಾಗಿದೆ.