ಇಂತಹ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಫ್ರೀ ಎಲ್‌ಪಿಜಿ ಸಿಲಿಂಡರ್

LPG Cylinder: ಸರ್ಕಾರದ ಮಹತ್ವದ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್ ಅನ್ನು ವಿತರಿಸಲಾಗುತ್ತದೆ. ಯಾವುದೀ ಯೋಜನೆ? ಇದರ ಅಡಿಯಲ್ಲಿ ಯಾವ ಮಹಿಳೆಯರಿಗೆ ಫ್ರೀ ಸಿಲಿಂಡರ್ ದೊರೆಯುತ್ತದೆ ಎಂಬಿತ್ಯಾದಿ ಪ್ರಮುಖ ಮಾಹಿತಿ ಇಲ್ಲಿದೆ.  

Written by - Yashaswini V | Last Updated : Nov 11, 2025, 05:20 PM IST
  • ನರೇಂದ್ರ ಮೋದಿ ಸರ್ಕಾರ 2016ರಲ್ಲಿ ಆರಂಭಿಸಿದ ಮಹತ್ವದ ಯೋಜನೆ
  • ಪಿ.ಎಂ.ಯು.ವೈ. ಯೋಜನೆಯಲ್ಲಿ 300ರೂ.ಗೆ ಸಿಗುತ್ತೆ ಸಿಲಿಂಡರ್
  • ಈ ಯೋಜನೆಯ ಲಾಭ ಪಡೆಯಲು ಏನು ಮಾಡಬೇಕು...
ಇಂತಹ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಫ್ರೀ ಎಲ್‌ಪಿಜಿ ಸಿಲಿಂಡರ್

Free LPG Cylinder: ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ನಡೆಸುತ್ತಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಮಹಿಳೆಯರಿಗೆ  ಉಚಿತ ಸಿಲಿಂಡರ್‌ಗಳನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ದೇಶಾದ್ಯಂತ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಅಥವಾ ಬಿಪಿಎಸ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲವನ್ನು ಪೂರೈಸಲಾಗುತ್ತದೆ. 

Add Zee News as a Preferred Source

ಸಾಂಪ್ರದಾಯಿಕ ಅಡುಗೆ ಇಂಧನಗಳ ಬಳಕೆಯಿಂದ ಮಹಿಳೆಯರ ಆರೋಗ್ಯದ ಮೇಲಾಗುತ್ತಿರುವ ಹಾನಿಕಾರಿಕ ಪರಿಣಾಮಗಳನ್ನು ಮನಗಂಡು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಮೇ 01, 2016ರಲ್ಲಿ ಆರಂಭಿಸಿತು. 

ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್ ಲಭ್ಯವಾಗುವಂತೆ ಮಾಡುವುದು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಮುಖ ಉದ್ದೇಶವಾಗಿದೆ.ಮೋದಿ ಸರ್ಕಾರದ ಈ ಮಹತ್ವದ ಯೋಜನೆಯಲ್ಲಿ ಇದುವರೆಗೂ ದೇಶಾದ್ಯಂತ ಒಂದು ಕೋಟಿಗೂ ಹೆಚ್ಚಿನ ಮಹಿಳೆಯರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ 14.2 ಕೆಜಿ ದೇಶೀಯ ಅಡುಗೆ ಅನಿಲ ಸಿಲಿಂಡರ್‌ (ವರ್ಷಕ್ಕೆ ಒಂಬತ್ತು) ಅನ್ನು 300 ರೂ.ಗಳಲ್ಲಿ ನೀಡಲಾಗುತ್ತದೆ. 

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪ್ರಯೋಜನಗಳು: 
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಿಲಿಂಡರ್, ಗ್ಯಾಸ್ ಪೈಪ್, ರೆಗ್ಯುಲೇಟರ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಎಂದರೆ ಇದಕ್ಕಾಗಿ ಯಾವುದೇ ಭದ್ರತಾ ಠೇವಣಿಯನ್ನು ನೀಡುವ ಅಗತ್ಯವಿರುವುದಿಲ್ಲ. ಇದಲ್ಲದೆ, ಮೊದಲ ಬಾರಿಗೆ ಸಿಲಿಂಡರ್ ಕೊಳ್ಳುವಾಗ ಎಲ್‌ಪಿಜಿ ಸಿಲಿಂಡರ್ ಹಾಗೂ ಗ್ಯಾಸ್ ಸ್ಟೌವ್ ಅನ್ನು ಕೂಡ ಫ್ರೀ ಆಗಿಯೇ ನೀಡಲಾಗುತ್ತದೆ. 

ಉಚಿತ ಎಲ್‌ಪಿಜಿ ಸಂಪರ್ಕಕ್ಕಾಗಿ ಈ ರೀತಿ ಅರ್ಜಿ ಸಲ್ಲಿಸಿ: 
* ಮೊದಲಿಗೆ  pmuy.gov.in ಮೂಲಕ ಆನ್ಲೈನ್'ನಲ್ಲಿ ಲಾಗಿನ್ ಆಗಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಇದರ ಪ್ರಯೋಜನವನ್ನು ಪಡೆಯಬಹುದು. 

* ಇಲ್ಲವೇ, ಸಾರ್ವಜನಿಕ ವಲಯದ ಯಾವುದೇ ಗ್ಯಾಸ್ ವಿತರಕ ಮಳಿಗೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕವೂ ಇದರ ಪ್ರಯೋಜನ ಪಡೆಯಬಹುದು. 

* ಅರ್ಜಿ ಸಲ್ಲಿಸುವ ಸಮಯದಲ್ಲಿ ಸರಳೀಕೃತವಾದ ಕೆ.ವೈ.ಸಿ. ಪೂರ್ಣಗೊಳಿಸಬೇಕಾಗುತ್ತದೆ. 

ಅರ್ಜಿ ಸಲ್ಲಿಕೆಯ ಬಳಿಕ ನೀವು ಯಾವ ಗ್ಯಾಸ್ ವಿತರಕರಲ್ಲಿ ಅರ್ಜಿ ಸಲ್ಲಿಸಿದ್ದಿರೋ ಆ ಅಡುಗೆ ಅನಿಲ ಸಂಸ್ಥೆಗ ಅಧಿಕಾರಿಗಳು ಭೌತಿಕ ಪರಿಶೀಲನೆ ನಡೆಸಿ ನಂತರ ನವೀಕರಿಸಿಸ ಪ್ರೊಫಾರ್ಮಾ ವಿವರಗಳನ್ನು ಸಲ್ಲಿಸಲಾಗುತ್ತದೆ. ಆ ನಂತರದಲ್ಲಿ ಅರ್ಹರಿಗೆ ಈ ಯೋಜನೆಯಡಿ ಉಚಿತವಾಗಿ ಎಲ್‌ಪಿಜಿ ಸಂಪರ್ಕವನ್ನು ನೀಡಲಾಗುತ್ತದೆ. 

ಯಾರಿಗೆ ಸಿಗಲ್ಲ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭ? 
ಯಾವುದೇ ಫಲಾನುಭವಿ ಆಧಾರ್ ಕಾರ್ಡ್ ನಲ್ಲಿ ಕೆ.ವೈ.ಸಿ. ಪೂರ್ಣಗೊಳಿಸದಿದ್ದರೆ, ಪರಿಶೀಲನೆ ವೇಳೆ ತಪ್ಪು ಮಾಹಿತಿ ನೀಡಿರುವುದು ಕಂಡು ಬಂದರೆ ಅಂತಹವರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಸಿಲಿಂಡರ್ ಸಂಪರ್ಕ ದೊರೆಯುವುದಿಲ್ಲ. 

ಬಡ ಮಹಿಳೆಯರಿಗೆ ಎರಡು ಬಾರಿ ಉಚಿತ ಸಿಲಿಂಡರ್: 
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಪಿಎಂ ಉಜ್ವಲ ಯೋಜನೆ ಅಡಿಹ್ಯಲ್ಲಿ ವರ್ಷಕ್ಕೆ ಎರಡು ಬಾರಿ ಮಹಿಳೆಯರಿಗೆ ಉಚಿತ ಸಿಲಿಂಡರ್ ಪ್ರಯೋಜನವನ್ನು ನೀಡುವುದಾಗಿ ಘೋಷಿಸಿದೆ. ಮೊದಲನೆಯದಾಗಿ ಅಕ್ಟೋಬರ್-ಡಿಸೆಂಬರ್ 2025ರ ನಡುವೆ ಹಾಗೂ ಎರಡನೇ ಹಂತದಲ್ಲಿ ಜನವರಿ-ಮಾರ್ಚ್ 2026ರ ನಡುವೆ ಮಹಿಳೆಯರಿಗೆ ಗೃಹಬಳಕೆ ಸಿಲಿಂಡರ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

ಇದನ್ನೂ ಓದಿ- ತೆರಿಗೆದಾರರಿಗೆ ಗುಡ್ ನ್ಯೂಸ್: ಐಟಿಆರ್ ಸಲ್ಲಿಸಿದ ಬಳಿಕ ಈ ತಪ್ಪುಗಳಿಗೆ ಬರಲ್ಲ ಐಟಿ ನೋಟಿಸ್

ಇದನ್ನೂ ಓದಿ- ಕೇವಲ 7ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು ಪಕ್ಕಾ ಸಿಗುತ್ತೆ 5,000ರೂ. ಪಿಂಚಣಿ

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News