$265 ಮಿಲಿಯನ್ ಲಂಚದ ಪ್ರಕರಣ ಕೈಬಿಡುವಂತೆ ಟ್ರಂಪ್ ಆಡಳಿತಕ್ಕೆ ಅದಾನಿ ಆಪ್ತರ ಒತ್ತಡ: ವರದಿ

 ಅಮೆರಿಕದಲ್ಲಿನ ಲಂಚದ ಆರೋಪಗಳನ್ನ ಕೈಬಿಡುವಂತೆ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಉದ್ಯಮಿ, ಭಾರತೀಯ ಬಿಲಿಯನೇರ್ ಗೌತಮ್ ಅದಾನಿಯವರ ಆಪ್ತರು ಒತ್ತಡ ಹೇರಿದ್ದಾರೆ. ಈ ನಿಟ್ಟಿನಲ್ಲಿ ಲಂಚದ ಪ್ರಕರಣವನ್ನ ಇತ್ಯರ್ಥಗೊಳಿಸುವಂತೆ ಟ್ರಂಪ್ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿರುವ ಅದಾನಿ ಪ್ರತಿನಿಧಿಗಳು ಚರ್ಚೆ ನಡೆಸಿದ್ದಾರೆಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.

Written by - Puttaraj K Alur | Last Updated : May 5, 2025, 09:09 PM IST
  • ಲಂಚದ ಆರೋಪಗಳನ್ನು ಕೈಬಿಡುವಂತೆ ಟ್ರಂಪ್ ಆಡಳಿತಕ್ಕೆ ಅದಾನಿ ಆಪ್ತರ ಒತ್ತಾಯ
  • ಟ್ರಂಪ್ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ ಗೌತಮ್ ಅದಾನಿ ಪ್ರತಿನಿಧಿಗಳು
  • $265 ಮಿಲಿಯನ್ ಲಂಚದ ಪ್ರಕರಣವನ್ನು ಮರುಪರಿಶೀಲಿಸುವಂತೆ ಮನವಿ
$265 ಮಿಲಿಯನ್ ಲಂಚದ ಪ್ರಕರಣ ಕೈಬಿಡುವಂತೆ ಟ್ರಂಪ್ ಆಡಳಿತಕ್ಕೆ ಅದಾನಿ ಆಪ್ತರ ಒತ್ತಡ: ವರದಿ

US bribery case: ಅಮೆರಿಕದಲ್ಲಿನ ಲಂಚದ ಆರೋಪಗಳನ್ನ ಕೈಬಿಡುವಂತೆ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಉದ್ಯಮಿ, ಭಾರತೀಯ ಬಿಲಿಯನೇರ್ ಗೌತಮ್ ಅದಾನಿಯವರ ಆಪ್ತರು ಒತ್ತಡ ಹೇರಿದ್ದಾರೆ. ಈ ನಿಟ್ಟಿನಲ್ಲಿ ಲಂಚದ ಪ್ರಕರಣವನ್ನ ಇತ್ಯರ್ಥಗೊಳಿಸುವಂತೆ ಟ್ರಂಪ್ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿರುವ ಅದಾನಿ ಪ್ರತಿನಿಧಿಗಳು ಚರ್ಚೆ ನಡೆಸಿದ್ದಾರೆಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.

Add Zee News as a Preferred Source

ಲಂಚ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸುವ ಪ್ರಯತ್ನದ ಭಾಗವಾಗಿ ಅದಾನಿ ಆಪ್ತರು ಟ್ರಂಪ್‌ ಸರ್ಕಾರದ ಅಧಿಕಾರಿಗಳನ್ನ ಭೇಟಿ ಮಾಡಿದೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಪ್ರಾರಂಭವಾದ ಈ ಮಾತುಕತೆ ಪ್ರಗತಿಯಲ್ಲಿದ್ದು, ಮುಂದಿನ ಒಂದು ತಿಂಗಳಲ್ಲಿ ಇತ್ಯರ್ಥವಾಗುವ ಸಾಧ್ಯತೆಯಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: Success Story: 8ನೇ ತರಗತಿ ಓದಿದ ವ್ಯಕ್ತಿ ವಿಶ್ವ ಪ್ರಸಿದ್ಧ ʼಹಲ್ದಿರಾಮ್ʼ ಕಂಪನಿಯನ್ನ ಕಟ್ಟಿದ್ದು ಹೇಗೆ?

ನವೆಂಬರ್‌ನಲ್ಲಿ ಅಮೆರಿಕದ ಅಧಿಕಾರಿಗಳು ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ವಿದ್ಯುತ್ ಸರಬರಾಜು ಒಪ್ಪಂದಗಳನ್ನು ಪಡೆಯಲು ಲಂಚ ನೀಡಿದ್ದಾರೆ ಮತ್ತು ಅಲ್ಲಿ ನಿಧಿ ಸಂಗ್ರಹಣೆಯ ಸಮಯದಲ್ಲಿ ಅಮೆರಿಕದ ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದರು. ಸುಮಾರು $750 ಮಿಲಿಯನ್ ಅದಾನಿ ಗ್ರೀನ್ (ADNA.NS) ಒಪ್ಪಂದದ ಸಂದರ್ಭದಲ್ಲಿ ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದಾರೆಂದು ಆರೋಪಿಸಿ ಅಮೆರಿಕದ ಹಣಕಾಸು ನಿಯಂತ್ರಕರು ಈ ಇಬ್ಬರಿಗೂ ಸಮನ್ಸ್ ಜಾರಿ ಮಾಡಿದ್ದರು. 

ಟ್ರಂಪ್ ಅವರ ಸರ್ಕಾರವು ಅದಾನಿಯವರ ವಿರುದ್ಧದ ಮೊಕದ್ದಮೆಗಳನ್ನ ಮರುಪರಿಶೀಲಿಸಬೇಕು ಎಂದು ಅವರ ಪ್ರತಿದಿನಿಧಿಗಳು ಒತ್ತಾಯಿಸಿದೆ. ಈ ವರ್ಷದ ಆರಂಭದಲ್ಲಿ ಈ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದ್ದು, ಇತ್ತೀಚಿನ ವಾರಗಳಲ್ಲಿ ಇದಕ್ಕೆ ಮತ್ತಷ್ಟು ವೇಗ ಸಿಕ್ಕಂತಾಗಿದೆ. ಇದೇ ರೀತಿಯ ಆವೇಗ ಮುಂದುವರಿದರೆ ಒಂದು ತಿಂಗಳೊಳಗೆ ಪರಿಹಾರ ದೊರೆಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಸೋಮವಾರದ ಹೇಳಿಕೆಯಲ್ಲಿ ಅದಾನಿ ಗ್ರೀನ್, ʼಕಂಪನಿಯು ಯಾವುದೇ ಪ್ರಕ್ರಿಯೆಗಳ ಭಾಗವಾಗಿಲ್ಲವೆಂದು ಪುನರುಚ್ಚರಿಸಿತು. ಆದರೆ ಸಭೆಗಳ ಕುರಿತ ವರದಿಯ ಬಗ್ಗೆ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ದೋಷಾರೋಪಣೆಯ ಪರಿಶೀಲನೆಯಲ್ಲಿ ಯಾವುದೇ ಅನುಸರಣೆ ಅಥವಾ ಅಕ್ರಮಗಳು ಕಂಡುಬಂದಿಲ್ಲವೆಂದು ಅದು ಇತ್ತೀಚೆಗೆ ಹೇಳಿತ್ತು.

ಇದನ್ನೂ ಓದಿ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೂಲಕವೇ ಪಡೆಯಬಹುದು ಪಿಎಫ್ ಮೊತ್ತ !ಅಪ್ಪ್ಲಿಕೇಶನ್ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಖಾತೆ ಸೇರುವುದು ಹಣ

ನ್ಯಾಯಾಂಗ ಇಲಾಖೆ ಮತ್ತು ಶ್ವೇತಭವನವು ವರದಿಯ ಕುರಿತು ಬ್ಲೂಮ್‌ಬರ್ಗ್‌ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದವು. ಗುಂಪಿನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಕಂಪನಿಯು ಈ ಹಿಂದೆಯೂ ಸಹ ಯಾವುದೇ ತಪ್ಪನ್ನು ನಿರಾಕರಿಸಿತ್ತು. ಇದೆಲ್ಲ ಬೆಳವಣಿಗೆಗಳ ಮಧ್ಯೆ ಅದಾನಿ ಗ್ರೂಪ್‌ನ ಒಂಬತ್ತು ಕಂಪನಿಗಳ ಷೇರುಗಳು ಸೋಮವಾರ ಶೇ.1.7 ರಿಂದ ಶೇ.10.5ರಷ್ಟು ಏರಿಕೆಯಾಗಿವೆ.
ಈ ಗಂಭೀರ ಆರೋಪವು ಅದಾನಿ ಗ್ರೂಪ್‌ನ ಒಂಬತ್ತು ಸಂಸ್ಥೆಗಳ ಸುಮಾರು $13 ಬಿಲಿಯನ್ ಮಾರುಕಟ್ಟೆ ಮೌಲ್ಯ ಕುಸಿಯುವಂತೆ ಮಾಡಿತ್ತು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News