)
ಚಿನ್ನದ ಬೆಲೆ ದಾಖಲೆಯ ಮಟ್ಟವನ್ನು ತಲುಪಿದೆ. ಚಿನ್ನ 10 ಗ್ರಾಂಗೆ 1.30 ಲಕ್ಷ ತಲುಪಿದೆ. ಬೆಳ್ಳಿ 2 ಲಕ್ಷ ತಲುಪಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಡುವೆ, ದೀಪಾವಳಿಗೆ ಮುನ್ನ ಒಳ್ಳೆಯ ಸುದ್ದಿ ಬಂದಿತು. ಧನತ್ರಯೋದಶಿ ನಂತರ ಚಿನ್ನದ ಬೆಲೆ ಕುಸಿದಿದೆ. ದೀಪಾವಳಿಯಂದು ಚಿನ್ನದ ಬೆಲೆ ಅಗ್ಗವಾಗಿದೆ. ಚಿನ್ನ ಮತ್ತು ಬೆಳ್ಳಿ ಎರಡೂ ಲೋಹಗಳ ದರದಲ್ಲಿ ಇಳಿಕೆ ಕಂಡು ಬಂದಿದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆ :
ದೀಪಾವಳಿಯಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,31,000 ಆಗಿದೆ. ಅಂದರೆ ಒಂದು ವಾರದಲ್ಲಿ 5,780 ರೂ. ಏರಿಕೆ ಕಂಡಿದ್ದ ಚಿನ್ನ ಅಗ್ಗವಾಗಿದೆ. ಬೆಳ್ಳಿ ಬೆಲೆ ಕೂಡಾ 100 ರೂ.ಯಷ್ಟು ಕಡಿಮೆಯಾಗಿ, 1,71,900 ರೂ. ತಲುಪಿದೆ.
ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ.
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 131,000 ರೂ .
ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 130,850 ರೂ .
ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 130,900. ರೂ .
ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 130,850 ರೂ . ತಲುಪಿದೆ.
ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು :
ಈ ವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಾರ, ವಾರದಲ್ಲಿ 10 ಗ್ರಾಂ ಚಿನ್ನದ ಬೆಲೆ 8,059 ರಷ್ಟು ಏರಿಕೆಯಾಗಿದ್ದರೆ, ಬೆಳ್ಳಿ ಬೆಲೆ 4,730 ರಷ್ಟು ಏರಿಕೆಯಾಗಿದೆ. ಅಕ್ಟೋಬರ್ 14 ರಂದು ಬೆಳ್ಳಿ ಸಾರ್ವಕಾಲಿಕ ಗರಿಷ್ಠ ಮಟ್ಟ ಕ್ಕೆ ತಲುಪಿತ್ತು.