Gold At Home Rules: ಚಿನ್ನದ ಬೆಲೆ ದಿನನಿತ್ಯ ಹೊಸ ದಾಖಲೆಯನ್ನೇ ಬರೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಪರಿಗಣಿಸುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಆದಾಗ್ಯೂ, ನಿಮ್ಮ ಬಳಿ ದುಡ್ಡು ಜಾಸ್ತಿ ಇದ್ದರೆ ಬೇಕಾದಷ್ಟು ಚಿನ್ನ ಖರೀದಿಸಿ ಇಡಬಹುದು ಎಂದು ನೀವು ಭಾವಿಸುತ್ತಿದ್ದರೆ ಇದು ತಪ್ಪು ಕಲ್ಪನೆ. ವಾಸ್ತವವಾಗಿ, ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಮಹತ್ವದ ಪ್ರಾಧಿನ್ಯತೆ ಇದೆ. ಹಬ್ಬ, ಮದುವೆಯಂತಹ ಶುಭ ಸಮಾರಂಭಗಳ ವೇಳೆ ಚಿನ್ನ ಖರೀದಿಸುವ ಪ್ರತೀತಿಯೂ ಇದೆ. ಅದರಲ್ಲೂ, ದೀಪಾವಳಿ, ಧನತ್ರಯೋದಶಿಯ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ಖರೀದಿಯನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ, ಚಿನ್ನ ಉತ್ತಮ ಹೂಡಿಕೆ ಆಯ್ಕೆ ಎಂದು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸುವ ತಪ್ಪನ್ನು ಮಾಡಬೇಡಿ. ಇದಕ್ಕೂ ಮೊದಲು ನೀವು ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು ಎಂಬ ಬಗ್ಗೆ ತಿಳಿದುಕೊಳ್ಳಿ.
ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು ಎಂಬ ಬಗ್ಗೆ ತಿಳಿಯಲು ಆದಾಯ ತೆರಿಗೆ ಇಲಾಖೆ ನಿಯಮವೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಅಗತ್ಯವಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಭಾರೀ ಸಂಕಷ್ಟಕ್ಕೆ ಸಿಲುಕಬಹುದು. ಇದೇನಪ್ಪ ಹೀಗಂತಾರೆ ನಮ್ಮ ದುಡ್ಡು, ನಮ್ಮಿಷ್ಟ ಬಂದಷ್ಟು ಚಿನ್ನ ಖರೀದಿಸ್ತೀವಿ ಅಂತ ಯೋಚಿಸುತ್ತಿದ್ದರೆ, ನಿಮ್ಮ ಆಲೋಚನೆ ಸರಿಯಾಗಿಯೇ ಇದೆ. ಯಾಕಂದ್ರೆ, ನೀವು ನಿಮಗೆಷ್ಟು ಬೇಕೋ ಅಷ್ಟು ಚಿನ್ನ ಖರೀದಿಸಲು ಕಾನೂನು ನಿಮ್ಮನ್ನು ತಡೆಯುವುದಿಲ್ಲ. ಆದರೆ, ಆ ಚಿನ್ನವನ್ನು ಖರೀದಿಸಲು ನಿಮಗೆ ಸಾಕಷ್ಟು ಆದಾಯವಿದೆ ಎಂದು ನೀವು ಸಾಬೀತುಪಡಿಸಬೇಕಾಗುತ್ತದೆ. ಆಗಷ್ಟೇ, ನಿಮಗೆ ಬೇಕಾದಷ್ಟು ಚಿನ್ನ ಖರೀದಿಸಬಹುದಾಗಿದೆ.
ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು?
ಆದಾಯ ತೆರಿಗೆ ಇಲಾಖೆ ಮನೆಯಲ್ಲಿ ಚಿನ್ನ ಇಡಲು ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಅದರ ಪ್ರಕಾರ, ಮನೆಯಲ್ಲಿ ಯಾರು ಎಷ್ಟು ಚಿನ್ನ ಹೊಂದಿರಬಹುದು ಎಂದು ತಿಳಿಯೋಣ...
* ಮದುವೆಯಾದ ಮಹಿಳೆ ಯಾವುದೇ ಪುರಾವೆ ಇಲ್ಲದೆಯೂ 500ಗ್ರಾಂ ಎಂದರೆ ಅರ್ಧ ಕೆಜಿಯಷ್ಟು ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದು.
* ಪುರುಷರು 100ಗ್ರಾಂವರೆಗೆ ಪುರಾವೆಗಳಿಲ್ಲದೆ ಚಿನ್ನದ ಆಭರಣಗಳನ್ನು ಹೊಂದಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಚಿನ್ನವಿದ್ದರೆ, ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರ ಬಳಿ ಇರುವ ಚಿನ್ನದ ತೂಕಕ್ಕೆ ಅನುಗುಣವಾಗಿ ಬಿಲ್‌ಗಳು ಮತ್ತು ಆದಾಯದ ಮೂಲವನ್ನು ತೋರಿಸಬೇಕಾಗುತ್ತದೆ.
ಇಂತಹ ಸಂದರ್ಭದಲ್ಲಿ ಐಟಿ ದಾಳಿ:
ಒಂದೊಮ್ಮೆ ನಿಮ್ಮ ಬಳಿ ಸಾಕಷ್ಟು ಚಿನ್ನವಿದ್ದು, ಚಿನ್ನ ಖರೀದಿಯ ಯಾವುದೇ ಪುರಾವೆಗಳಾಗಲಿ ಅಥವಾ ನಿಮ್ಮ ಬಳಿ ಇರುವ ಚಿನ್ನ ನಿಮ್ಮ ಆದಾಯವನ್ನು ಮೀರಿದ್ದಲ್ಲಿ ಒಂದಲ್ಲಾ ಒಂದು ದಿನ ನಿಮ್ಮ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಬಹುದು.
ಚಿನ್ನ ಖರೀದಿಯ ಆದಾಯದ ಮೂಲ:
ನೀವು ಚಿನ್ನ ಖರೀದಿಸಲು ಆದಾಯದ ಮೂಲವನ್ನು ತೋರಿಸಬೇಕಾಗುತ್ತದೆ. ಇದಕ್ಕಾಗಿ ವೇತನ, ವ್ಯವಹಾರದಿಂದ ಆದಾಯ ಅಥವಾ ಕೃಷಿ ಆದಾಯ ಮೂಲಗಳ ಪುರಾವೆಯನ್ನು ತೋರಿಸಬೇಕಾಗುತ್ತದೆ.
ಅನುವಂಶಿಕವಾಗಿ ಬಂದ ಚಿನ್ನ:
ಒಂದೊಮ್ಮೆ ನೀವು ಅನುವಂಶಿಕವಾಗಿ ನಿಮ್ಮ ಪೂರ್ವಜರಿಂದ ಅಪಾರ ಪ್ರಮಾಣದಲ್ಲಿ ಚಿನ್ನಾಭರಣಗಳನ್ನೂ ಉಡುಗೊರೆಯಾಗಿ ಪಡೆದಿದ್ದರೂ ಸಹ ಅದಕ್ಕೂ ಸಾಕಷ್ಟು ಪುರಾವೆಗಳನ್ನು ಹೊಂದಿರುವುದು ಅಗತ್ಯವಾಗಿದೆ.
ಡಿಜಿಟಲ್ ಚಿನ್ನ:
ಇತ್ತೀಚಿನ ದಿನಗಳಲ್ಲಿ ಭೌತಿಕವಾಗಿ ಮಾತ್ರವಲ್ಲದೆ ಡಿಜಿಟಲ್ ರೂಪದಲ್ಲೂ ಚಿನ್ನ ಖರೀದಿಸಬಹುದು. ಡಿಜಿಟಲ್ ಚಿನ್ನ ಖರೀದಿಗೆ ಇಂತಿಷ್ಟೇ ಖರೀದಿಸಬೇಕು ಎಂಬ ಕಾನೂನಿನ ಮಿತಿ ಇರುವುದಿಲ್ಲ. ಒಂದು ದಿನಕ್ಕೆ ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿಸಬಹುದಾಗಿದೆ.
ಇದನ್ನೂ ಓದಿ- Indian Railways Rules: ರೈಲಿನಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋದರೆ ಜೈಲು ಗ್ಯಾರಂಟಿ
ಇದನ್ನೂ ಓದಿ- EPFO Rules: ಇಪಿಎಫ್ ಸದಸ್ಯರು ಎಷ್ಟು ಹಣವನ್ನು ತ್ವರಿತವಾಗಿ ಹಿಂಪಡೆಯಲು ಸಾಧ್ಯ









