ಶೀಘ್ರವೇ 1 ಲಕ್ಷ ರೂ. ಗಡಿ ದಾಟಲಿರುವ ಚಿನ್ನದ ದರ; ಯಾವಾಗ ಗೊತ್ತಾ..?

Gold Rush: ಕೊಟಕ್ ಸೆಕ್ಯುರಿಟೀಸ್ ಪ್ರಕಾರ, ವ್ಯಾಪಾರ ಯುದ್ಧದ ಆತಂಕಗಳು ಹೆಚ್ಚುತ್ತಿರುವ ನಡುವೆ ಚಿನ್ನ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಯುರೋಪಿಯನ್ ಒಕ್ಕೂಟ ಮತ್ತು ಕೆನಡಾ ವಿರುದ್ಧ ವಾಹನ ಆಮದು ಸುಂಕಗಳು ಮತ್ತು ಟ್ರಂಪ್‌ 'ಟ್ಯಾರಿಫ್' ಆತಂಕ ಚಿನ್ನದಂತಹ ಸುರಕ್ಷಿತ ಹೂಡಿಕೆಗಳಿಗೆ ಬೇಡಿಕೆಯನ್ನು ಹೆಚ್ಚಿಸಿದೆ.

Written by - Puttaraj K Alur | Last Updated : Mar 29, 2025, 08:45 PM IST
  • ಚಿನ್ನ ಮತ್ತು ಬೆಳ್ಳಿಯ ಬೆಲೆ ಅನಿಯಂತ್ರಿತವಾಗಿ ಏರಿಕೆಯಾಗುತ್ತಲೇ ಇದೆ
  • ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1,100 ರೂ. ಏರಿಕೆಯಾಗಿ 92,150 ರೂ. ತಲುಪಿದೆ
  • ಶೀಘ್ರವೇ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಲಿದೆಯಂತೆ
ಶೀಘ್ರವೇ 1 ಲಕ್ಷ ರೂ. ಗಡಿ ದಾಟಲಿರುವ ಚಿನ್ನದ ದರ; ಯಾವಾಗ ಗೊತ್ತಾ..?

Gold Rate Today: ಚಿನ್ನ ಮತ್ತು ಬೆಳ್ಳಿಯ ಬೆಲೆ ಅನಿಯಂತ್ರಿತವಾಗಿ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1,100 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ 92,150 ರೂ.ಗಳಿಗೆ ತಲುಪಿದೆ. ಅದೇ ರೀತಿ ಬೆಳ್ಳಿಯ ಬೆಲೆ ಶುಕ್ರವಾರ 1,300 ರೂ.ಗಳಷ್ಟು ಏರಿಕೆಯಾಗಿ, ಪ್ರತಿ ಕೆಜಿಗೆ 1,03,000 ರೂ.ಗಳಿಗೆ ತಲುಪಿ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಈ ಎರಡು ಅಮೂಲ್ಯ ಲೋಹಗಳ ಬೆಲೆಗಳು ಶೀಘ್ರವೇ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಬದಲಾಗುತ್ತಿರುವ ಭೌಗೋಳಿಕ ಪರಿಸ್ಥಿತಿಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗುತ್ತಲೇ ಇರುತ್ತದೆ ಎಂದು ಅನೇಕ ಸರಕು ತಜ್ಞರು ಮತ್ತು ಸಂಶೋಧನಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಗೋಲ್ಡ್‌ಮನ್ ಸ್ಯಾಚ್ಸ್, ಬಿಒಎಫ್‌ಎ ಚಿನ್ನದ ಟಾರ್ಗೆಟ್ ಬೆಲೆಯನ್ನು ಹೆಚ್ಚಿಸಿವೆ. 

Add Zee News as a Preferred Source

2025ರ ಅಂತ್ಯದ ವೇಳೆಗೆ ಗೋಲ್ಡ್‌ಮನ್ ಸ್ಯಾಚ್ಸ್ ತನ್ನ ಚಿನ್ನದ ಬೆಲೆಯ ಗುರಿಯನ್ನು ಔನ್ಸ್‌ಗೆ $3,100 ರಿಂದ $3,300ಕ್ಕೆ ಏರಿಸಿದೆ. ಬ್ಯಾಂಕ್ ಆಫ್ ಅಮೆರಿಕ (BofA) 2025ರಲ್ಲಿ ಚಿನ್ನದ ಟಾರ್ಗೆಟ್‌ ಬೆಲೆಯನ್ನು ಔನ್ಸ್‌ಗೆ $3,063 ಮತ್ತು 2026ರಲ್ಲಿ ಔನ್ಸ್‌ಗೆ $3,350ಗೆ ಏರಿಸಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಕಂಡುಬರುತ್ತದೆ. ಶೀಘ್ರವೇ ಚಿನ್ನದ ಬೆಲೆ 10 ಗ್ರಾಂಗೆ 99 ಸಾವಿರ ರೂ. ತಲುಪಲಿದೆ. ಇದು ಯಾವಾಗ ಮತ್ತು ಏಕೆ ಸಂಭವಿಸುತ್ತದೆ ತಿಳಿಯಿರಿ...

ಇದನ್ನೂ ಓದಿ: ಖಾಸಗಿ ವಲಯದ ಉದ್ಯೋಗಿಗಳಿಗೆ ಸರ್ಕಾರದ ದೊಡ್ಡ ನಿರ್ಧಾರ !ಮಾಸಿಕ ಪಿಂಚಣಿಯಲ್ಲಿ ಭಾರೀ ಮೊತ್ತದ ಹೆಚ್ಚಳ! ಸಂಪೂರ್ಣ ಮಾಹಿತಿ ಇಲ್ಲಿದೆ

ಚಿನ್ನ ಮತ್ತು ಬೆಳ್ಳಿ ದರ ಆಕಾಶಕ್ಕೆ!!

ನಾವು 2024-25ರ ಹಣಕಾಸು ವರ್ಷವನ್ನು (ಏಪ್ರಿಲ್ 1, 2024ರಿಂದ ಮಾರ್ಚ್ 29, 2025ರವರೆಗೆ) ನೋಡುದಾದರೆ, ಚಿನ್ನ ಮತ್ತು ಬೆಳ್ಳಿ ಅತ್ಯಧಿಕ ಆದಾಯವನ್ನು ನೀಡಿವೆ. ಚಿನ್ನದ ಜೊತೆಗೆ ಬೆಳ್ಳಿ ಹೂಡಿಕೆದಾರರಿಗೆ ಹಣ ಗಳಿಸುವಂತೆ ಮಾಡಿದೆ. ಹೂಡಿಕೆದಾರರು ಎಲ್ಲಿಂದ ಎಷ್ಟು ಲಾಭ ಪಡೆದರು ಎಂಬುದರ ಮಾಹಿತಿ ಇಲ್ಲಿದೆ ನೋಡಿ..

2024-25ನೇ ಹಣಕಾಸು ವರ್ಷದಲ್ಲಿನ ಆದಾಯ

* ಚಿನ್ನ: 31.37% 
* ಬೆಳ್ಳಿ: 35.56%
* ನಿಫ್ಟಿ: 5.29%
* ಸೆನ್ಸೆಕ್ಸ್: 4.96%
* ಬ್ಯಾಂಕ್ ನಿಫ್ಟಿ: 9.16%
* ಕಚ್ಚಾ ತೈಲ: -13.69%

ಚಿನ್ನದ ಬೆಲೆ 99,000 ರೂ.ಗಳತ್ತ ಸಾಗುತ್ತಿದೆ

HDFC ಸೆಕ್ಯುರಿಟೀಸ್‌ನ ಸರಕು ಮತ್ತು ಕರೆನ್ಸಿ ಮುಖ್ಯಸ್ಥ ಅನುಜ್ ಗುಪ್ತಾ ಮಾತನಾಡಿ, ಚಿನ್ನ ಈಗ 99,000 ರೂ.ಗಳ ಕಡೆಗೆ ಸಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಬೆಲೆಯನ್ನು ನಾವು ಕಾಣಬಹುದು. ಹೂಡಿಕೆದಾರರು ಚಿನ್ನದ ಬದಲು ಬೆಳ್ಳಿಯಲ್ಲಿ ಹೂಡಿಕೆ ಮಾಡುವಂತೆ ಅವರು ಸಲಹೆ ನೀಡಿದ್ದಾರೆ. ಬೆಳ್ಳಿಯ ಬೆಲೆ 1.25 ಲಕ್ಷ ರೂ. ತಲುಪಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಹೂಡಿಕೆದಾರರು ಚಿನ್ನಕ್ಕಿಂತ ಬೆಳ್ಳಿಯ ಮೇಲೆ ಹೆಚ್ಚಿನ ಲಾಭವನ್ನು ಪಡೆಯುಲಿದ್ದಾರೆ. ನೀವು ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸಿದರೆ ಚಿನ್ನದ ಇಟಿಎಫ್ ಉತ್ತಮ ಆಯ್ಕೆ. ಚಿನ್ನದ ಬೆಲೆ ಏರಿಕೆಯ ಲಾಭ ಪಡೆಯಲು ಹೂಡಿಕೆದಾರರು ಇದನ್ನು ಬಳಸಿಕೊಳ್ಳಬಹುದು. ಐಸಿಐಸಿಐ ಬ್ಯಾಂಕ್ ಗ್ಲೋಬಲ್ ಮಾರ್ಕೆಟ್ಸ್ ವರದಿಯ ಪ್ರಕಾರ, ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಮತ್ತು ಅಮೆರಿಕದ ಸುಂಕ ನೀತಿಗಳಿಂದ 2025ರ ದ್ವಿತೀಯಾರ್ಧದಲ್ಲಿ ಚಿನ್ನದ ಬೆಲೆಗಳು ಹತ್ತು ಗ್ರಾಂಗೆ 94,000 ರೂ.ಗಳಿಂದ 96,000 ರೂ.ಗಳವರೆಗೆ ಏರುವ ನಿರೀಕ್ಷೆಯಿದೆ.

ಏರಿಕೆ ಪ್ರವೃತ್ತಿ ಮುಂದುವರಿಕೆ? 

ಕೊಟಕ್ ಸೆಕ್ಯುರಿಟೀಸ್ ಪ್ರಕಾರ, ವ್ಯಾಪಾರ ಯುದ್ಧದ ಆತಂಕಗಳು ಹೆಚ್ಚುತ್ತಿರುವ ನಡುವೆ ಚಿನ್ನ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಯುರೋಪಿಯನ್ ಒಕ್ಕೂಟ ಮತ್ತು ಕೆನಡಾ ವಿರುದ್ಧ ವಾಹನ ಆಮದು ಸುಂಕಗಳು ಮತ್ತು ಸುಂಕಗಳನ್ನು ವಿಧಿಸುವ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಯು ಚಿನ್ನದಂತಹ ಸುರಕ್ಷಿತ ಹೂಡಿಕೆಗಳಿಗೆ ಬೇಡಿಕೆಯನ್ನು ಹೆಚ್ಚಿಸಿದೆ. ದಲ್ಲಾಳಿ ಕಂಪನಿಯ ಪ್ರಕಾರ, ಕೇಂದ್ರ ಬ್ಯಾಂಕ್ ಖರೀದಿಗಳಿಂದ ಈ ತಿಂಗಳು ಚಿನ್ನದ ಬೆಲೆ ಸುಮಾರು ಶೇ.8.2ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಚಿನ್ನವು ಹೂಡಿಕೆಯಷ್ಟೇ ಅಲ್ಲ, ಸಾಂಸ್ಕೃತಿಕ ಸಂಪ್ರದಾಯಗಳ ಅವಿಭಾಜ್ಯ ಅಂಗವೂ ಆಗಿದೆ. ವಿಶೇಷವಾಗಿ ಮದುವೆಗಳು ಮತ್ತು ಹಬ್ಬಗಳ ಸಮಯದಲ್ಲಿ ಎಂಬುದು ಗಮನಾರ್ಹ. ಇತ್ತೀಚಿನ ಬೆಲೆ ಏರಿಕೆಯು ಆಭರಣ ಖರೀದಿದಾರರನ್ನು ಹಿಂಜರಿಯುವಂತೆ ಮಾಡಿದೆ, ಆದರೆ ಹೂಡಿಕೆ ಬೇಡಿಕೆ ಇನ್ನೂ ಬಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಸಾಮಾನ್ಯ ಜನರ ಕೈಗೆಟುಕದಂತೆ ವೇಗವಾಗಿ ಮಾಯವಾಗುತ್ತಿದೆಯೇ? ಕೇವಲ ಶ್ರೀಮಂತರು ಮಾತ್ರ ಚಿನ್ನ ಮತ್ತು ಬೆಳ್ಳಿ ಖರೀದಿಸಲು ಸಾಧ್ಯವಾಗುತ್ತದೆಯೇ? ಜನರಿಗೆ ಉತ್ತರ ಸಿಗದ ಹಲವು ಪ್ರಶ್ನೆಗಳಿವೆ. 

ಇದನ್ನೂ ಓದಿ: 8th Pay Commission: ಸರ್ಕಾರಿ ನೌಕರರ ಸರಾಸರಿ ವೇತನದಲ್ಲಿ ಶೇ.19 ರಷ್ಟು ಹೆಚ್ಚಳ ಸಾಧ್ಯತೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News