ಚಿನ್ನದ ಆಮದು ಶೇ.192ರಷ್ಟು ಹೆಚ್ಚಳ; ಮಾರ್ಚ್‌ನಲ್ಲಿ $4.47 ಬಿಲಿಯನ್ ಮೌಲ್ಯದ ಚಿನ್ನ ಆಮದು ಮಾಡಿಕೊಂಡ ಭಾರತ!!

Gold rate: ದೇಶದಲ್ಲಿ ಚಿನ್ನದ ಆಮದು ಹೆಚ್ಚಾಗಿದ್ದರೆ, ಬೆಳ್ಳಿ ಆಮದು ಭಾರೀ ಪ್ರಮಾಣದಲ್ಲಿ ಕುಸಿದಿದೆ. ಈ ವರ್ಷದ ಮಾರ್ಚ್‌ನಲ್ಲಿ ಬೆಳ್ಳಿ ಆಮದು ಶೇ 85.4ರಷ್ಟು ಕುಸಿದು 119.3 ಮಿಲಿಯನ್ ಡಾಲರ್‌ಗಳಿಗೆ ತಲುಪಿದೆ.

Written by - Puttaraj K Alur | Last Updated : Apr 18, 2025, 04:17 PM IST
  • ದೇಶದ ಚಿನ್ನದ ಆಮದು ಮಾರ್ಚ್‌ನಲ್ಲಿ ಶೇ.192.13ರಷ್ಟು ಹೆಚ್ಚಾಗಿ 4.47 ಬಿಲಿಯನ್ ಡಾಲರ್‌ಗೆ ತಲುಪಿದೆ
  • ಭಾರತ ಜನವರಿ 2024ರಲ್ಲಿ $1.53 ಬಿಲಿಯನ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿತ್ತು
  • 2024-25ರ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಚಿನ್ನದ ಆಮದು ಶೇ.27.27ರಷ್ಟು ಹೆಚ್ಚಾಗಿದೆ
ಚಿನ್ನದ ಆಮದು ಶೇ.192ರಷ್ಟು ಹೆಚ್ಚಳ; ಮಾರ್ಚ್‌ನಲ್ಲಿ $4.47 ಬಿಲಿಯನ್ ಮೌಲ್ಯದ ಚಿನ್ನ ಆಮದು ಮಾಡಿಕೊಂಡ ಭಾರತ!!

Gold rate today: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಿಂದ ದೇಶದ ಚಿನ್ನದ ಆಮದು ಮಾರ್ಚ್ 2025ರಲ್ಲಿ ಶೇ.192.13ರಷ್ಟು ಹೆಚ್ಚಾಗಿ 4.47 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತ ಜನವರಿ 2024ರಲ್ಲಿ $1.53 ಬಿಲಿಯನ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿತ್ತು. 2024-25ರ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಚಿನ್ನದ ಆಮದು ಶೇ.27.27ರಷ್ಟು ಹೆಚ್ಚಾಗಿ 58 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಆದರೆ 2023-24ರಲ್ಲಿ ಇದು $45.54 ಬಿಲಿಯನ್ ಆಗಿತ್ತು. ಏಪ್ರಿಲ್ 17ರಂದು ದೆಹಲಿಯಲ್ಲಿ ಚಿನ್ನದ ಬೆಲೆ 75.33 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ ದಾಖಲೆಯ 10,378.06 (24K) ರೂ.ಗಳಿಗೆ ತಲುಪಿತ್ತು.

ಬೆಳ್ಳಿ ಆಮದು ಭಾರೀ ಕುಸಿತ!

ಬೆಳ್ಳಿ ಆಮದುಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ. ಈ ವರ್ಷದ ಮಾರ್ಚ್‌ನಲ್ಲಿ ಬೆಳ್ಳಿ ಆಮದು ಶೇ.85.4ರಷ್ಟು ಕುಸಿದು 119.3 ಮಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಇದು 2024-25ರಲ್ಲಿ ವರ್ಷದಿಂದ ವರ್ಷಕ್ಕೆ ಶೇ.11.24 ರಷ್ಟು ಇಳಿದು $4.82 ಶತಕೋಟಿಗೆ ತಲುಪಿದೆ.

ಇದನ್ನೂ ಓದಿ: ಯಾರು ಈ ಕನ್ನಡದ ಏಕಾಗ್ರ.? ಕೇವಲ 17 ತಿಂಗಳಲ್ಲಿ ಭಾರತದ ಅತ್ಯಂತ ಕಿರಿಯ ಕೋಟ್ಯಾಧಿಪತಿ..!

ಸ್ವಿಟ್ಜರ್ಲೆಂಡ್‌ನಿಂದ ಹೆಚ್ಚಿನ ಚಿನ್ನ ಆಮದು!

ಸ್ವಿಟ್ಜರ್ಲೆಂಡ್ ಚಿನ್ನದ ಆಮದಿನ ಅತಿದೊಡ್ಡ ಮೂಲವಾಗಿದ್ದು, ಸುಮಾರು ಶೇ.40ರಷ್ಟು ಪಾಲನ್ನು ಹೊಂದಿದೆ. ಇದರ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ (ಶೇ.16ಕ್ಕಿಂತ ಹೆಚ್ಚು) ಮತ್ತು ದಕ್ಷಿಣ ಆಫ್ರಿಕಾ (ಸುಮಾರು ಪ್ರತಿಶತ 10) ಇವೆ. ದೇಶದ ಒಟ್ಟು ಆಮದುಗಳಲ್ಲಿ ಚಿನ್ನದ ಪಾಲು ಶೇ.8ರಷ್ಟಿದೆ. ಪ್ರಮಾಣದಲ್ಲಿ 2023-24ರಲ್ಲಿ 795.32 ಟನ್‌ಗಳಷ್ಟಿದ್ದ ಆಮದು 2024-25ರಲ್ಲಿ 757.15 ಟನ್‌ಗಳಿಗೆ ಇಳಿದಿದೆ. ಫೆಬ್ರವರಿಯಲ್ಲಿ ಚಿನ್ನದ ಆಮದು ಸುಮಾರು ಶೇ.62ರಷ್ಟು ಕಡಿಮೆಯಿದ್ದರೆ, ಜನವರಿಯಲ್ಲಿ ಶೇ.40.8ರಷ್ಟು ಮತ್ತು ಡಿಸೆಂಬರ್ 2024ರಲ್ಲಿ ಶೇ.55.39ರಷ್ಟು ಹೆಚ್ಚಾಗಿದೆ.

ಮಾರ್ಚ್‌ನಲ್ಲಿ ವ್ಯಾಪಾರ ಕೊರತೆ $21.54 ಬಿಲಿಯನ್‌ಗೆ ತಲುಪಿದೆ

ಚಿನ್ನದ ಆಮದು ಹೆಚ್ಚಳದಿಂದ ದೇಶದ ವ್ಯಾಪಾರ ಕೊರತೆ (ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸ) ಮಾರ್ಚ್‌ನಲ್ಲಿ $21.54 ಬಿಲಿಯನ್ ತಲುಪಿದೆ. ಇದು 2023-24ರ ಆರ್ಥಿಕ ವರ್ಷದಲ್ಲಿ $282.82 ಶತಕೋಟಿಯ ಜೀವಮಾನದ ಗರಿಷ್ಠ ಮಟ್ಟವನ್ನ ಮುಟ್ಟಿದೆ. ಚೀನಾ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾಗಿದೆ. ದೇಶಕ್ಕೆ ಆಮದು ಮಾಡಿಕೊಳ್ಳುವ ಚಿನ್ನವು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ಪೂರೈಸುತ್ತದೆ.

ಇದನ್ನೂ ಓದಿ: UPI ಅಂತರಾಷ್ಟ್ರೀಯ ಪಾವತಿಗಳಿಗೆ NPCIಯಿಂದ ಹೊಸ ನಿರ್ಬಂಧ ಜಾರಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News