Gold Price Decline: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇಂದೂ ಸಹ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಇಂದು 24ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,354 ತಲುಪಿದ್ದರೆ, 22ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹8,561 ಆಗಿದೆ. 18ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,005 ತಲುಪಿದೆ. ಈ ಮಧ್ಯೆ, ಮುಂಬರುವ ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿನ್ನದ ಬೆಲೆ 38% ಕುಸಿತ...!
ಹೌದು, ಇತ್ತೀಚಿನ ದಿನಗಳಲ್ಲಿ ದಾಖಲೆ ಮಟ್ಟ ತಲುಪಿರುವ 'ಹಳದಿ ಲೋಹ' ಮುಂದಿನ ಕೆಲವು ವರ್ಷಗಳಲ್ಲಿ ಬರೋಬ್ಬರಿ 38% ಕುಸಿಯಬಹುದು. ಚಿನ್ನದ ಬೆಲೆಯಲ್ಲಿನ ಈ ಮಹತ್ವದ ಬದಲಾವಣೆಯು ಇಡೀ ಜಗತ್ತಿನಲ್ಲಿ ಹೂಡಿಕೆಯ ತಂತ್ರಗಳನ್ನು ಮರುರೂಪಿಸಬಹುದು ಎಂದು
ಅಮೆರಿಕ ಮೂಲದ ಹಣಕಾಸು ಸೇವಾ ಸಂಸ್ಥೆ ಮಾರ್ನಿಂಗ್‌ಸ್ಟಾರ್‌ನ ಮಾರುಕಟ್ಟೆ ತಜ್ಞ ಜಾನ್ ಮಿಲ್ಸ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಯುಎಸ್ ಮೂಲದ ಹಣಕಾಸು ಸೇವಾ ಸಂಸ್ಥೆಯೊಂದರಲ್ಲಿ ಮಾರುಕಟ್ಟೆ ತಜ್ಞರಾಗಿರುವ ಜಾನ್ ಮಿಲ್ಸ್ ಅವರ ಪ್ರಕಾರ, ಪ್ರಸ್ತುತ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,063 ನಷ್ಟಿದೆ. ಆದರಿದು ಮುಂದಿನ ಕೆಲವು ವರ್ಷಗಳಲ್ಲಿ ಪ್ರತಿ ಔನ್ಸ್‌ಗೆ $1,820ರಷ್ಟು ಇಳಿಕೆಯಾಗಬಹುದು ಎಂದು ಅಂದಾಜಿಸಿದ್ದಾರೆ. ಮಾರುಕಟ್ಟೆ ಲೆಕ್ಕಾಚಾರಗಳ ಪ್ರಕಾರ, ಇದು 38% ಕುಸಿತವಾಗಿದೆ.
ಇದನ್ನೂ ಓದಿ- EPFO ಮಹತ್ವದ ನಿರ್ಧಾರ: ಕೋಟ್ಯಾಂತರ ನೌಕರರಿಗೆ ನೇರ ಲಾಭ..!
ಇಡೀ ವಿಶ್ವದಾದ್ಯಂತ ಭೌಗೋಳಿಕ, ರಾಜಕೀಯ ಅನಿಶ್ಚಿತತೆ, ಹಣದುಬ್ಬರ, ಆರ್ಥಿಕ ಅಸ್ಥಿರತೆಯಿಂದಾಗಿ ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಜನ ಪರಿಗಣಿಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ಜಾಗತೀಕ ಮಾರುಕಟ್ಟೆಯಲ್ಲಿ ಚಿನ್ನದ ಹೂಡಿಕೆ, ಬೇಡಿಕೆ ಹೆಚ್ಚಾಗಿದೆ. ಇದು ಚಿನ್ನದ ಬೆಲೆ ಏರಿಕೆಗೆ ಬಹಳ ಮುಖ್ಯ ಕಾರಣವಾಗಿದೆ. ಆದಾಗ್ಯೂ, ಮುಂದಿನ ವರ್ಷಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಒಂದೆರಡು ಪ್ರಮುಖ ಅಂಶಗಳೆಂದರೆ...
ಪೂರೈಕೆ ಹೆಚ್ಚಳ:
ಜಾಗತೀಕವಾಗಿ ಚಿನ್ನದ ಪೂರೈಕೆ ವೇಗವಾಗಿ ಹೆಚ್ಚಾಗುತ್ತಿದೆ. ಒಂದೆಡೆ ಜಾಗತಿಕ ಚಿನ್ನದ ನಿಕ್ಷೇಪ ಶೇ. 9ರಷ್ಟು ಹೆಚ್ಚಾಗಿ 2,16,265 ಟನ್‌ಗಳಿಗೆ ತಲುಪಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಚಿನ್ನದ ಉತ್ಪಾದನೆಯನ್ನು ದಾಖಲೆಯ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದು ಚಿನ್ನದ ಪೂರೈಕೆ ಒತ್ತಡವನ್ನು ಕಡಿಮೆ ಮಾಡಿದ್ದು ಚಿನ್ನದ ಬೆಲೆ ಕುಸಿತಕ್ಕೂ ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ- ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್.... ಭಾರೀ ಇಳಿಕೆಯಾಗಲಿದೆಯಂತೆ ಚಿನ್ನದ ದರ... ಹೇಗೆ? ಯಾವಾಗ?
ಬೇಡಿಕೆಯಲ್ಲಿ ಕುಸಿತ:
ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳ ಮಾತ್ರವಲ್ಲದೆ ಕೇಂದ್ರ ಬ್ಯಾಂಕುಗಳು ಹಾಗೂ ಹೂಡಿಕೆದಾರರು ಆಕ್ರಮಣಕಾರಿ ಸ್ವರೂಪದಲ್ಲಿ ಚಿನ್ನ ಖರೀದಿಸುತ್ತಿದ್ದರೂ ಶಾಹ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಈ ಪ್ರವೃತ್ತಿ ದಿನೇ ದಿನೇ ಕಡಿಮೆಯಾಗುತ್ತಿದೆ. ಕಳೆದ ವರ್ಷ ಕೇಂದ್ರೀಯ ಬ್ಯಾಂಕುಗಳು ಸುಮಾರು 1,045 ಟನ್ ಚಿನ್ನ ಖರೀದಿಸಿವೆ. ಸತತ ಮೂರನೇ ವರ್ಷವೂ 1,000 ಟನ್‌ಗಳನ್ನು ಮೀರಿದ ಖರೀದಿ ಇದಾಗಿದೆ. ಆದಾಗ್ಯೂ, ವಿಶ್ವ ಚಿನ್ನದ ಮಂಡಳಿ ಸಮೀಕ್ಷೆಯ ಪ್ರಕಾರ, ಶೇ. 71ರಷ್ಟು ಕೇಂದ್ರೀಯ ಬ್ಯಾಂಕುಗಳು ಚಿನ್ನದ ಹಿಡುವಳಿಗಳನ್ನು ಹೆಚ್ಚಿಸುವ ಬದಲಿಗೆ ಕಡಿಮೆ ಮಾಡುವ ಅಥವಾ ಅದನ್ನು ನಿರ್ವಹಿಸುವತ್ತ ಗಮನಹರಿಸುವ ನಿರೀಕ್ಷೆಯಿದೆ. ಇದು ಚಿನ್ನದ ಬೆಲೆ ಕುಸಿತಕ್ಕೂ ಕಾರಣವಾಗಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









