Gold Price Drop: ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಅದರಲ್ಲೂ ನಮ್ಮ ಮಹಿಳಾ ಮಣಿಯರಿಗೆ ಚಿನ್ನ ಎಂದರೆ ಅಚ್ಚುಮೆಚ್ಚು. ಆದರೆ, ಇತ್ತೀಚಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ. ಈಗಾಗಲೇ 90,000ರೂ. ಗಡಿ ದಾಟಿರುವ ಬಂಗಾರದ ಬೆಲೆ ಶೀಘ್ರದಲ್ಲೇ 1 ಲಕ್ಷಕ್ಕೂ ಹೆಚ್ಚಾಗಲಿದೆ ಎಂಬ ವರದಿಯು ಚಿನ್ನ ಪ್ರಿಯರಲ್ಲಿ ಭಯ ಹುಟ್ಟಿಸಿದೆ. ಅದರಲ್ಲೂ, ಬಡವರು, ಮಧ್ಯಮ ವರ್ಗದವರಿಗೆ ಚಿನ್ನ ಖರೀದಿಸುವುದು ಇನ್ನೂ ಕನಸೆ ಎಂಬ ಭಾವನೆಯನ್ನು ಮೂಡಿಸಿದೆ. ಈ ಮಧ್ಯೆ, ತಜ್ಞರ ಅಭಿಪ್ರಾಯವನ್ನು ಆಧರಿಸಿದ ವರದಿಯೊಂದು ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.
ಚಿನ್ನದ ಬೆಲೆ ಏರಿಕೆಗೆ ಮುಖ್ಯ ಕಾರಣ:
ಯುಎಸ್ ಮತ್ತು ಚೀನಾ ನಡುವಿನ ವ್ಯಾಪಾರ ಯುಡ್ಡದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ತ್ರಪ್ ಪ್ರಕಟಿಸಿರುವ ಸುಖ ನೀತಿಯಿಂದಾಗಿ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 3,200 ಡಾಲರ್ ತಲುಪಿದೆ. ಇದನ್ನು ಡಾಲರ್ ಮೌಲ್ಯ ಕುಸಿತದ ಎಫೆಕ್ಟ್ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ- ಟ್ರಂಪ್ ʼಸುಂಕʼದಿಂದ ವಿಶ್ವದ GDPಯಲ್ಲಿ 3% ಕುಸಿತಕ್ಕೆ ಕಾರಣ; ಭಾರತದ ಮೇಲೆ ಯಾವ ರೀತಿಯ ಪರಿಣಾಮ?
ಶೀಘ್ರದಲ್ಲೇ ಚಿನ್ನದ ಬೆಲೆ ಇಳಿಕೆ:
ಏತನ್ಮಧ್ಯೆ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿಯಲಿದೆ. ಅಮೆರಿಕದ ಫೆಡರಲ್ ರಿಸರ್ವ್ ದರ ಕಡಿತಕ್ಕೆ ಮುಕ್ತವಾಗಿದ್ದು, ಇದು ಡಾಲರ್ ಮೇಲಿನ ಒತ್ತಡ ಹೇರುವಿಕೆಯನ್ನು ಮುಂದುವರೆಯಿಸಲಿದೆ. ಅಲ್ಲದೆ, ಬಂಗಾರದ ಬೆಲೆ ಇನ್ನೂ ಕೆಲವೇ ದಿನಗಳಲ್ಲಿ ಸುಮಾರು 20,000 ರೂ.ಗಳಷ್ಟು ಇಳಿಕೆಯಾಗಲಿದೆ ಎಂದು ಬುಲ್ರನ್‌ನ ಬುಲಿಯನ್ ಮಾರುಕಟ್ಟೆ ವಿಶ್ಲೇಷಕ ತೈ ವಾಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿನ್ನದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ತಮ್ಮದೇ ಆದ ವ್ಯಾಖ್ಯಾನ ನೀಡುರ್ವ ಬ್ಯಾಂಕಿಂಗ್ ತಜ್ಞರು, ವಿಶ್ವದಾದ್ಯಂತ ಪ್ರಸ್ತುತವಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ದೀರ್ಘ ಸಮಯದವರೆಗೆ ಮುಂದುವರೆಯುವುದಿಲ್ಲ. ಹಾಗಾಗಿ, ವ್ಯಾಪಾರ ಸಂಬಂಧಗಳು ಸುಧಾರಣೆಗೊಳ್ಳಲಿದ್ದು ಅಮೆರಿಕದ ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತಿದ್ದಂತೆ ಚಿನ್ನದ ಬೆಲೆಗಳು ಕೂಡ ಇಳಿಕೆಯಾಗಬಹುದು ಎಂದಿದ್ದಾರೆ.
ಇದನ್ನೂ ಓದಿ- ಬಿಗ್ ಅಪ್‌ಡೇಟ್: EPFO ಚಂದಾದಾರರಿಗೆ ಸಿಗಲಿದೆ ಈ ವಿಶೇಷ ಸೌಲಭ್ಯ, ಇಷ್ಟೆಲ್ಲಾ ಪ್ರಯೋಜನ
ಆರ್ಥಿಕ ತಜ್ಞರ ಪ್ರಕಾರ, ಪ್ರಸ್ತುತ, 90ಸಾವಿರದ ಗಡಿಯಲ್ಲಿರುವ ಚಿನ್ನದ ಬೆಲೆ 15% ನಷ್ಟು ಕಡಿತಗೊಲ್ಲಬಹುದು. ಇದರಿಂದಾಗಿ ಚಿನ್ನದ ಬೆಲೆ ಪ್ರತಿ 10ಗ್ರಾಂಗೆ 75,000ರೂ.ಗಳ ಸನಿಹ ಬರಬಹುದು ಎಂದು ಅಂದಾಜಿಸಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









