gold price : ಕಳೆದ ಕೆಲವು ತಿಂಗಳುಗಳಲ್ಲಿ ದಾಖಲೆಯ ಏರಿಕೆಯನ್ನು ದಾಖಲಿಸಿದ ನಂತರ ಈಗ ಚಿನ್ನದ ಬೆಲೆ ಕುಸಿಯಲು ಪ್ರಾರಂಭಿಸಬಹುದು ಎನ್ನಲಾಗುತ್ತಿದೆ. ಬ್ರೋಕರೇಜ್ ಹೌಸ್ ಕ್ವಾಂಟ್ ಮ್ಯೂಚುವಲ್ ಫಂಡ್ ತನ್ನ ಫ್ಯಾಕ್ಟ್‌ಶೀಟ್‌ನಲ್ಲಿ ಮುಂಬರುವ ಎರಡು ತಿಂಗಳಲ್ಲಿ ಚಿನ್ನದ ಬೆಲೆ ಶೇ.12 ರಿಂದ ಶೇ.15 ರಷ್ಟು ಕಡಿಮೆಯಾಗಬಹುದು ಎಂದು ಹೇಳಿದೆ.
ಪ್ರಸ್ತುತ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,25,400 ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ ₹1,14,950 ಆಗಿದೆ.
ಕ್ವಾಂಟ್ ಮ್ಯೂಚುವಲ್ ಫಂಡ್ ಪ್ರಕಾರ, "ಚಿನ್ನವು ತನ್ನ ಗರಿಷ್ಠ ಮಟ್ಟವನ್ನು ತಲುಪಿದೆ ಮತ್ತು ಡಾಲರ್ ಆಧಾರಿತ ಮೌಲ್ಯದಲ್ಲಿ ಶೇ.12-15 ರಷ್ಟು ಇಳಿಕೆ ಸಾಧ್ಯತೆ ಇದೆ. ಹೂಡಿಕೆ ಬಂಡವಾಳದಲ್ಲಿ ಅಮೂಲ್ಯ ಲೋಹಗಳು ಬಲವಾದ ಸ್ಥಾನವನ್ನು ಪಡೆಯಬೇಕು" ಎಂದಿದೆ.
ಮಾರ್ನಿಂಗ್‌ಸ್ಟಾರ್‌ನ ಯುಎಸ್ ಮೂಲದ ವಿಶ್ಲೇಷಕ ಜಾನ್ ಮಿಲ್ಸ್ ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ ಶೇ.38 ರಷ್ಟು ಇಳಿಕೆ ಕಾಣಬಹುದು ಎಂದಿದ್ದಾರೆ. ಈ ಅಂದಾಜು ಸರಿಯಾಗಿದ್ದರೆ ಭಾರತದಲ್ಲಿ ಚಿನ್ನದ ಬೆಲೆಗಳು ಪ್ರತಿ 10 ಗ್ರಾಂಗೆ ₹56,000 ದಿಂದ ₹50,000 ಕ್ಕೆ ಇಳಿಯಬಹುದು. ಇದಕ್ಕೆ ಪ್ರಮುಖ ಕಾರಣಗಳು ಚಿನ್ನದ ಪೂರೈಕೆಯಲ್ಲಿನ ಹೆಚ್ಚಳ ಮತ್ತು ಜಾಗತಿಕ ಬೇಡಿಕೆಯಲ್ಲಿನ ಕುಸಿತ ಎಂದು ಜಾನ್ ಮಿಲ್ಸ್ ಹೇಳುತ್ತಾರೆ.
ಇಲ್ಲಿಯವರೆಗೆ ಚಿನ್ನ ಏಕೆ ಏರಿಕೆಯಾಗಿದೆ?
2025 ರ ಆರಂಭದಿಂದ ಚಿನ್ನವು 34% ಕ್ಕೆ ಏರಿಕೆ ಕಂಡಿದೆ. ಇದು ಎಲ್ಲಾ ಪ್ರಮುಖ ಆಸ್ತಿ ವರ್ಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದರ ಹಿಂದೆ ಹಲವಾರು ಕಾರಣಗಳಿವೆ. ಯುಎಸ್ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧದ ಭಯ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ಸುರಕ್ಷಿತ ಹೂಡಿಕೆಗಳಲ್ಲಿ ಹೂಡಿಕೆದಾರರ ಹೆಚ್ಚುತ್ತಿರುವ ಆಸಕ್ತಿಯಿಂದ ಚಿನ್ನದ ಬೆಲೆ ಏರಿಕೆ ಕಂಡಿದೆ.
ಚಿನ್ನದ ಬೆಲೆಗಳ ಹೆಚ್ಚಳ ಆಭರಣ ಮಾರಾಟ ಕಡಿಮೆ:
ಚಿನ್ನದ ಬೆಲೆ ಏರಿಕೆಯ ಪರಿಣಾಮವೆಂದರೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಆಭರಣಗಳ ಬೇಡಿಕೆ ಕಡಿಮೆಯಾಗಿದೆ. ಇಂಡಿಯಾ ಬುಲಿಯನ್ & ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಾರ, ಚಿನ್ನದ ಮಾರಾಟವು ಸರಾಸರಿ 30% ರಷ್ಟು ಕುಸಿತ ಕಂಡಿದೆ.
ಇದನ್ನೂ ಓದಿ : ಚಿನ್ನವನ್ನೇ ಮೀರಿಸಿದ ಬೆಳ್ಳಿ, ಈ ರೀತಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಭರ್ಜರಿ ಲಾಭ! ಭವಿಷ್ಯದಲ್ಲಿ ಬಂಗಾರವನ್ನು ಯಾರೂ ಖರೀದಿಸಲ್ಲ
ಇದನ್ನೂ ಓದಿ : ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಗೆ ಅಸ್ತು : ಈ ದಿನದಂದೇ ಜಾರಿಯಾಗಲಿದೆ 8ನೇ ವೇತನ ಆಯೋಗ









