DA Hike: ಶೇ.45ಕ್ಕೆ ತಲುಪಿದ ತುಟ್ಟಿಭತ್ಯೆ, ಸರ್ಕಾರಿ ನೌಕರರಿಗೊಂದು ಭರ್ಜರಿ ಸುದ್ದಿ!

DA Hike Latest Update: ಮೇ ತಿಂಗಳ ಆರಂಭದಲ್ಲಿಯೇ ಕೇಂದ್ರ ಸರ್ಕಾರಿ ನೌಕರರ ಪಾಲಿಗೊಂದು ಭರ್ಜರಿ ಸುದ್ದಿ ಪ್ರಕಟವಾಗಿದೆ. 2 ತಿಂಗಳ ಬಳಿಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಎಷ್ಟು ಹೆಚ್ಚಾಗಲಿದೆ ಎಂಬುದು ಇದೀಗ ಬಹುತೇಕ ಖಚಿತವಾಗಿದೆ. ಏಕೆಂದರೆ ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ತುಟ್ಟಿಭತ್ಯೆ ಹೆಚ್ಚಳದ ಅಂಕಿಅಂಶಗಳು ಶೇ.45ಕ್ಕೆ ತಲುಪಿವೆ.   

Written by - Nitin Tabib | Last Updated : May 4, 2023, 02:09 PM IST
  • ಜುಲೈ ತಿಂಗಳ ವೇಳೆಗೆ ಈ ಅಂಕಿ ಅಂಶವು ಶೇಕಡಾ 4 ರವರೆಗೆ ತಲುಪುವ ನೀರಿಕ್ಷೆಯನ್ನು ಹೊಂದಲಾಗಿದೆ.
  • ಮಾರ್ಚ್ ತಿಂಗಳಲ್ಲಿ ಸೂಚ್ಯಂಕವು 132.7 ಪಾಯಿಂಟ್‌ಗಳಿಂದ 133.3 ಪಾಯಿಂಟ್‌ಗಳಿಗೆ ಏರಿಕೆಯಾಗಿದೆ.
  • ಇದರಲ್ಲಿ ಒಟ್ಟು 0.6 ಅಂಕಗಳ ಜಿಗಿತ ಕಂಡುಬಂದಿದೆ. ತಿಂಗಳಿನಿಂದ ತಿಂಗಳ ಆಧಾರದ ಮೇಲೆ, ಸೂಚ್ಯಂಕವು ಶೇ.0.45 ರಷ್ಟು ಹೆಚ್ಚಾಗಿದೆ.
  • ಇದೇ ವೇಳೆ, ವಾರ್ಷಿಕ ಆಧಾರದ ಮೇಲೆ, ಈ ತಿಂಗಳಲ್ಲಿ ಅದು ಶೇ. 0.80 ಬೆಳವಣಿಗೆಯನ್ನು ದಾಖಲಿಸಿದೆ.
DA Hike: ಶೇ.45ಕ್ಕೆ ತಲುಪಿದ ತುಟ್ಟಿಭತ್ಯೆ, ಸರ್ಕಾರಿ ನೌಕರರಿಗೊಂದು ಭರ್ಜರಿ ಸುದ್ದಿ! title=
ತುಟ್ಟಿಭತ್ಯೆ ಹೆಚ್ಚಳ!

7th Pay Commission: ಮೇ ತಿಂಗಳ ಆರಂಭದಲ್ಲಿಯೇ ಕೇಂದ್ರ ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ ಸಿಕ್ಕಿದೆ.  2 ತಿಂಗಳ ನಂತರ, ನೌಕರರ ತುಟ್ಟಿಭತ್ಯೆಯನ್ನು ಮತ್ತೆ ಹೆಚ್ಚಾಗುವುದು ಇದೀಗ ಬಹುತೇಕ ಪಕ್ಕಾ ಆಗಿದೆ. ಮಾರ್ಚ್ 2023 ರಲ್ಲಿ, ಕೇಂದ್ರ ಸರ್ಕಾರವು ಶೇಕಡಾ 4 ರಷ್ಟು DA ಯನ್ನು ಹೆಚ್ಚಿಸಿತ್ತು, ಇದಾದ ಬಳಿಕ ಸರ್ಕಾರಿ ನೌಕರರು ಶೇ.42ರ ದರದಲ್ಲಿ DA ಯ ಲಾಭವನ್ನು ಪಡೆಯುತ್ತಿದ್ದಾರೆ. ಈಗ ಜುಲೈ 2023 ರಲ್ಲಿ, ಸರ್ಕಾರ ಮತ್ತೊಮ್ಮೆ ತುಟ್ಟಿಭತ್ಯೆಯನ್ನು ಹೆಚ್ಚಿಸಲಿದೆ. ಏಪ್ರಿಲ್ ತಿಂಗಳ ಹೊತ್ತಿಗೆ, ಈ ಅಂಕಿ ಅಂಶವು ಶೇಕಡಾ 45 ಕ್ಕೆ ತಲುಪಿದೆ, ಅಂದರೆ ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ  ಮತ್ತೆ ಶೇಕಡಾ 3 ರಷ್ಟು ಹೆಚ್ಚಾಗಲಿದೆ.

ಸೂಚ್ಯಂಕ ಎಷ್ಟು ಹೆಚ್ಚಾಗಿದೆ?
ಜುಲೈ ತಿಂಗಳ ವೇಳೆಗೆ ಈ ಅಂಕಿ ಅಂಶವು ಶೇಕಡಾ 4 ರವರೆಗೆ ತಲುಪುವ ನೀರಿಕ್ಷೆಯನ್ನು ಹೊಂದಲಾಗಿದೆ. ಮಾರ್ಚ್ ತಿಂಗಳಲ್ಲಿ ಸೂಚ್ಯಂಕವು 132.7 ಪಾಯಿಂಟ್‌ಗಳಿಂದ 133.3 ಪಾಯಿಂಟ್‌ಗಳಿಗೆ ಏರಿಕೆಯಾಗಿದೆ. ಇದರಲ್ಲಿ ಒಟ್ಟು 0.6 ಅಂಕಗಳ ಜಿಗಿತ ಕಂಡುಬಂದಿದೆ. ತಿಂಗಳಿನಿಂದ ತಿಂಗಳ ಆಧಾರದ ಮೇಲೆ, ಸೂಚ್ಯಂಕವು ಶೇ.0.45 ರಷ್ಟು ಹೆಚ್ಚಾಗಿದೆ. ಇದೇ ವೇಳೆ, ವಾರ್ಷಿಕ ಆಧಾರದ ಮೇಲೆ, ಈ ತಿಂಗಳಲ್ಲಿ ಅದು ಶೇ. 0.80 ಬೆಳವಣಿಗೆಯನ್ನು ದಾಖಲಿಸಿದೆ.

ಪ್ರಸ್ತುತ ಸರ್ಕಾರಿ ನೌಕರರು ಶೇ.42 ರಷ್ಟು ಡಿಯರ್ನೆಸ್ ಅಲೌನ್ಸ್ ಪಡೆಯುತ್ತಿದ್ದಾರೆ
ಜನವರಿಯಲ್ಲಿ ಶೇ.4 ರಷ್ಟು ಡಿಎ ಹೆಚ್ಚಾದ ಬಳಿಕ ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ 42ಕ್ಕೆ ತಲುಪಿದೆ. ಇದೀಗ  ಇದರಲ್ಲಿ ಇನ್ನೂ ಶೇ.3ರಷ್ಟು ಏರಿಕೆಯಾದರೆ ಅದು ಶೇ.45ಕ್ಕೆ ಏರಿಕೆಯಾಗಲಿದೆ. ಏಳನೇ ವೇತನ ಆಯೋಗದ  ಅಡಿಯಲ್ಲಿ ಕೇಂದ್ರ ನೌಕರರ ಡಿಎ ವರ್ಷಕ್ಕೆ ಎರಡು ಬಾರಿ ಹೆಚ್ಚಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ. ಜನವರಿ 2023 ರ ಡಿಎ ಘೋಷಿಸಲಾಗಿದೆ. ಇದೀಗ ಜುಲೈ 2023 ರ ಡಿಎ ಅನ್ನು ಇದುವರೆಗೆ ಸರ್ಕಾರ ಘೋಷಿಸಿಲ್ಲ.

ಇದನ್ನೂ ಓದಿ-Renault Kiger 2023: ಭಾರಿ ಅಬ್ಬರ ಸೃಷ್ಟಿಸಲು ಬಂದೆ ಬಿಟ್ತು 8 ಲಕ್ಷಕ್ಕೂ ಕಡಿಮೆ ಬೆಲೆಯ ಎಸ್ಯುವಿ, ಪಂಚ್, ಬ್ರೆಜ್ಜಾಗೆ ನೇರ ಪೈಪೋಟಿ

ಯಾವ ಇಲಾಖೆ ಈ ದತ್ತಾಂಶ ಒದಗಿಸುತ್ತದೆ
ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಳ ಎಂದು ನಿರ್ಧರಿಸಲಾಗುತ್ತದೆ.  ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು, ಕಾರ್ಮಿಕ ಸಚಿವಾಲಯವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ಈ ಸೂಚ್ಯಂಕವನ್ನು 88 ಕೇಂದ್ರಗಳಿಗೆ ಮತ್ತು ಇಡೀ ದೇಶಕ್ಕೆ ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದಿ-New Bike Launch! ಶೀಘ್ರದಲ್ಲೇ ತನ್ನ ಗ್ರಾಹಕರಿಗೆ ಅಗ್ಗದ ಬೈಕ್ ಉಡುಗೊರೆ ನೀಡಲಿದೆ ಹೀರೋ, ಸ್ಪೋರ್ಟಿ ಲುಕ್ ಜೊತೆಗೆ ಅತ್ಯುತ್ತಮ ಮೈಲೇಜ್!

ಫಿಟ್‌ಮೆಂಟ್ ಫ್ಯಾಕ್ಟರ್ ಹೊಸ ಅಪ್ಡೇಟ್
ಕೇಂದ್ರ ನೌಕರರ ಮೂಲ ವೇತನವು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಹೆಚ್ಚಾಗುತ್ತದೆ. 7 ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ವೇತನ ಭತ್ಯೆಗಳನ್ನು ಹೊರತುಪಡಿಸಿ, ಕೇಂದ್ರ ನೌಕರರ ವೇತನವು ಮೂಲ ವೇತನದಲ್ಲಿನ ಫಿಟ್‌ಮೆಂಟ್ ಅಂಶದಿಂದ ಮಾತ್ರ ಹೆಚ್ಚಾಗುತ್ತದೆ. ಈ ಹಿಂದೆ ಫಿಟ್‌ಮೆಂಟ್ ಅಂಶ ಹೆಚ್ಚಳದಿಂದ ಕೇಂದ್ರ ನೌಕರರ ವೇತನ ಎರಡೂವರೆ ಪಟ್ಟು ಹೆಚ್ಚಳವಾಗಿತ್ತು. ಇದೀಗ ಮತ್ತೆ ಫಿಟ್‌ಮೆಂಟ್ ಅಂಶ ಹೆಚ್ಚಿಸುವಂತೆ ನೌಕರರು ಆಗ್ರಹಿಸಿದ್ದಾರೆ. ಮೂಲ ವೇತನ ಹಾಗೂ ಒಟ್ಟು ವೇತನ ಹೆಚ್ಚಿಸುವುದು ಕಾಲದ ಅಗತ್ಯವಾಗಿದೆ ಎಂದು ಅವರು ವಾದಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News