EPFO News: ಇಪಿಎಫ್ಒ ಅಡಿಯಲ್ಲಿ ಕನಿಷ್ಠ ಪಿಂಚಣಿ ಹೆಚ್ಚಿಸಬೇಕೆಂಬ ಖಾಸಗಿ ವಲಯದ ಉದ್ಯೋಗಿಗಳ ಬಹುದಿನಗಳ ಬೇಡಿಕೆ ಶೀಘ್ರದಲ್ಲೇ ಈಡೇರುವ ಸಾಧ್ಯತೆ ಇದೆ. ಬಜೆಟ್‌ಗೆ ಮುಂಚಿತವಾಗಿ, ಇಪಿಎಸ್-95 ನಿವೃತ್ತ ನೌಕರರ ನಿಯೋಗವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಭೇಟಿಯಾಗಿ ಕನಿಷ್ಠ ಪಿಂಚನಿಯನ್ನು ತಿಂಗಳಿಗೆ 7,500 ರೂ. ಹೆಚ್ಚಿಸುವ ಜೊತೆಗೆ ತುಟ್ಟಿ ಭತ್ಯೆ (ಡಿಎ) ಸೇರಿಸುವ ಬೇಡಿಕೆಯನ್ನು ಪುನರುಚ್ಚರಿಸಿತ್ತು. ಇದೀಗ ಸಿಬಿಟಿ ಸಭೆಯಲ್ಲಿ ಈ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇಂದು (ಫೆಬ್ರವರಿ 28, 2025) ಇಪಿಎಫ್ಒದ ಕೇಂದ್ರ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಸಭೆ ನಡೆಯಲಿದ್ದು, ಈ ಸಭೆಯಲ್ಲಿ 2024-25ರ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದರೊಂದಿಗೆ ಪಿಂಚಣಿ ಹೆಚ್ಚಳ ವಿಷಯದ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ- UAN ಅಗತ್ಯವಿಲ್ಲ, ಎಸ್ಎಂಎಸ್, ಮಿಸ್ಡ್ ಕಾಲ್ ಮೂಲವೇ 'ಪಿಎಫ್' ಬ್ಯಾಲೆನ್ಸ್ ಚೆಕ್ ಮಾಡಬಹುದು..!
ವಾಸ್ತವವಾಗಿ, ಕಳೆದ 7-8 ವರ್ಷಗಳಿಂದ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಹೆಚ್ಚಿಸುವಂತೆ ಇಪಿಎಫ್ಒ ಸದಸ್ಯರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಇರುವ 1000 ರೂ. ಪಿಂಚಣಿಯನ್ನು ಡಿಎ ಪ್ರಯೋಜನದೊಂದಿಗೆ 7,500 ರೂ.ಗಳಿಗೆ ಹೆಚ್ಚಿಸುವಂತೆ ಜೊತೆಗೆ ನಿವೃತ್ತ ನೌಕರರು ಮತ್ತು ಅವರ ಸಂಗಾತಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಸಹ ಬಯಸುತ್ತಾರೆ.
ಇದನ್ನೂ ಓದಿ- 40,000 ತೆರಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾದ ಆದಾಯ ತೆರಿಗೆ ಇಲಾಖೆ.. ಇಂತಹವರಿಗೆ ತಪ್ಪಿದ್ದಲ್ಲ ಸಮಸ್ಯೆ..!
ಪಿಂಚಣಿದಾರರು ಮತ್ತು ಸಾಮಾಜಿಕ ಕಾರ್ಯಕರ್ತರು ದೀರ್ಘ ಸಮಯದಿಂದ ಇಪಿಎಫ್‌ಗೆ ಕೊಡುಗೆ ನೀಡುತ್ತಿದ್ದಾರೆ. ಪ್ರಸ್ತುತ ನೀಡುತ್ತಿರುವ ಪಿಂಚಣಿ ಮೊತ್ತವು ಅಸಮರ್ಪಕವಾಗಿದೆ ಎಂಬುದು ಇಪಿಎಫ್ ಸದಸ್ಯರ ವಾದವಾಗಿದೆ. ಪ್ರಸ್ತುತ ಹಣದುಬ್ಬರ ಮತ್ತು ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳನ್ನು ಗಮನದಲ್ಲಿಟ್ಟು ಪ್ರತಿ ತಿಂಗಳು ನೀಡಲಾಗುತ್ತಿರುವ 1000 ರೂ. ಪಿಂಚಣಿಯನ್ನು ಹೆಚ್ಚಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಇದೀಗ ಇದೇ ವಿಚಾರವಾಗಿ ಎಲ್ಲರ ಚಿತ್ತ ಇಂದು ನಡೆಯುವ ಸಿಬಿಟಿ ಸಭೆಯತ್ತ ನೆಟ್ಟಿದ್ದು ಪಿಂಚಣಿದಾರರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೇ. ಎಂದು ನಿರೀಕ್ಷಿಸಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









