ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ ..!10,000 ರೂಗಳಷ್ಟು ಅಗ್ಗವಾಯಿತು ಚಿನ್ನ..!
ಚಿನ್ನದ ವಾಯಿದಾ ಮಾರುಕಟ್ಟೆಯಲ್ಲಿ ಸೋಮವಾರ ಏರಿಳಿತ ದಾಖಲಿಸಿದೆ. ಜೂನ್ ತಿಂಗಳ ವಾಯಿದೆಗೆ ಚಿನ್ನದ ಬೆಲೆ ಇಂಟ್ರಾ ಡೇ ವಹಿವಾಟಿಯಲ್ಲಿ ಹತ್ತು ಗ್ರಾಮಿಗೆ 46777 ರೂಪಾಯಿ ದಾಖಲಿಸಿದೆ.
ಬೆಂಗಳೂರು : ಚಿನ್ನದ ಬೆಲೆ (Gold Price) ಈಗ ಸಾಕಷ್ಟು ಕಡಿಮೆಯಾಗಿದೆ. ಕಳೆದ ವಾರಗಳಿಂದ ಚಿನ್ನದ ಬೆಲೆ ಹತ್ತು ಗ್ರಾಮಿಗೆ ಸುಮಾರು 46,400ರ ಅಜೂಬಾಜಿನಲ್ಲಿ ದಾಖಲಾಗುತ್ತಿದೆ. ಸೋಮವಾರ ಬೆಳ್ಳಿಯ ಧಾರಣೆ ತೀವ್ರ ಕುಸಿದಿದೆ. ಬೆಳ್ಳಿ ಸೋಮವಾರ ಕೆಜಿಗೆ 850 ರೂಪಾಯಿಯಷ್ಟು ಕುಸಿದಿದೆ. ಚಿನ್ನದ ಬೆಲೆ ಇನ್ನಷ್ಟು ಕುಸಿಯುವ ಎಲ್ಲಾ ಲಕ್ಷಣಗಳಿವೆ.
ಚಿನ್ನದ ವಾಯಿದಾ ಮಾರುಕಟ್ಟೆಯಲ್ಲಿ (MCX) ಸೋಮವಾರ ಏರಿಳಿತ ದಾಖಲಿಸಿದೆ. ಜೂನ್ ತಿಂಗಳ ವಾಯಿದೆಗೆ ಚಿನ್ನದ ಬೆಲೆ (Gold Price) ಇಂಟ್ರಾ ಡೇ ವಹಿವಾಟಿಯಲ್ಲಿ ಹತ್ತು ಗ್ರಾಮಿಗೆ 46777 ರೂಪಾಯಿ ದಾಖಲಿಸಿದೆ. ನಂತರ ಅದರಲ್ಲಿ ಅಚಾನಕ್ ಬೇಡಿಕೆ ಕುಸಿತ ಕಂಡು ಬಂತು. ಚಿನ್ನದ ಧಾರಣೆಯಲ್ಲಿ 200 ರೂಪಾಯಿ ಕುಸಿತ ದಾಖಲಾಯಿತು. ಇದೀಗ ಚಿನ್ನದ ಬೆಲೆ (Gold rate) ಹತ್ತು ಗ್ರಾಮಿಗೆ 46,400 ರೂಪಾಯಿ ಅಜೂಬಾಜಿನಲ್ಲಿದೆ. ಹಿಂದಿನ ವಾರಕ್ಕೆ ಹೋಲಿಸಿ 1995 ರೂಪಾಯಿಯಷ್ಟು ಏರಿಕೆ ದಾಖಲಿಸಿದೆ.
ಇದನ್ನೂ ಓದಿ : Covid-19 Vaccine ಹಾಕಿಸಿ, ಎಫ್‌ಡಿ ಮೇಲೆ ಹೆಚ್ಚಿನ ಬಡ್ಡಿ ಪಡೆಯಿರಿ
ಕಳೆದ ವಾರದ ವಾಯಿದಾ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಹೀಗಿದೆ.
ಸೋಮವಾರ 44598/10 ಗ್ರಾಂ
ಮಂಗಳವಾರ 45919/10 ಗ್ರಾಂ
ಬುಧವಾರ 46362/10 ಗ್ರಾಂ
ಗುರುವಾರ 46838/10 ಗ್ರಾಂ
ಶುಕ್ರವಾರ 46593/10 ಗ್ರಾಂ
ಕಳೆದ ವರ್ಷ ಇದೇ ಅವಧಿಗೆ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಮಿಗೆ 56191 ರೂಪಾಯಿ ಇತ್ತು. ಹೋದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಧಾರಣೆಯಲ್ಲಿ ಸರಿಸುಮಾರು ಹತ್ತು ಸಾವಿರ ರೂಪಾಯಿ ಕಡಿಮೆ ಆಗಿದೆ. ಕಳೆದ ವರ್ಷ ಚಿನ್ನ (Gold) ಶೇ. 43 ರಷ್ಟು ಲಾಭ ನೀಡಿತ್ತು. ಈ ಸಲ ಅದು ಶೇ. 25 ಕ್ಕೆ ಕುಸಿದಿದೆ.
ಇದನ್ನೂ ಓದಿ: ಶನಿವಾರ ರಾತ್ರಿಯಿಂದ ಭಾನುವಾರದವರೆಗೆ RTGS ಸೇವೆ ಸ್ಥಗಿತ : RBI
ಬೆಳ್ಳಿ (Silver) ಕೂಡಾ ಕುಸಿತದ ಹಾದಿಯಲ್ಲಿದೆ. ಮಾರುಕಟ್ಟೆಯಲ್ಲಿ ಬೆಳ್ಳಿ ತೀರಾ ಸದ್ದು ಮಾಡುತ್ತಿಲ್ಲ. ಸೋಮವಾರದ ವಾಯಿದಾ ಮಾರುಕಟ್ಟೆಯಲ್ಲಿ ಬೆಳ್ಳಿ ಪ್ರತಿ ಕಿಲೋ 66, 128 ರೂಪಾಯಿ ದಾಖಲಾಗಿದೆ. ಅಂದರೆ ಸರಿಸುಮಾರು 850 ರೂಪಾಯಿ ಕುಸಿತ ದಾಖಲಿಸಿದೆ. ಕಳೆದ ವಾರ 2400 ರೂಪಾಯಿ ಏರಿಕೆ ದಾಖಲಿಸಿತ್ತು.
ಕಳೆದ ವಾರ ವಾಯಿದಾ ಮಾರುಕಟ್ಟೆಯಲ್ಲಿ ಬೆಳ್ಳಿ ಧಾರಣೆ :
ಸೋಮವಾರ 64562 / ಕೆಜಿ
ಮಂಗಳವಾರ 65897 / ಕೆಜಿ
ಬುಧವಾರ 66191 / ಕೆಜಿ
ಗುರುವಾರ 67501 / ಕೆಜಿ
ಶುಕ್ರವಾರ 66983 / ಕೆಜಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.